ಅಭಿಪ್ರಾಯ / ಸಲಹೆಗಳು

ಅಕ್ರಮ ಗೋ ಸಾಗಾಣಿಕೆ  ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ;15/05/2022 ರಂದು ರಾತ್ರಿ 10.00 ಗಂಟೆ ಸಮಯದಲ್ಲಿ ನಗರ ಠಾಣಾ ಸರಹದ್ದಿನ ತಮಿಳು ಕಾಲೋನಿ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಬಾಗದಲ್ಲಿ  ಅಕ್ರಮವಾಗಿ ಜಾನುವಾರು ಗಳನ್ನು ಕಡಿದು ಮಾಂಸ ಮಾರಾಟ ಮಾಡುವ ಉದ್ದೇಶದಿಂದ   16 ಜಾನುವಾರು ಮಾಂಸ ಮಾಡಿ ಮಾರಾಟ ಮಾಡಲು ಕಡಿದಿದ್ದು ಆರೋಫಿತರು ದಾಳಿ ವೇಳೆ ಓಡಿ ಹೋಗಿದ್ದು,  ಅರೋಪಿತರಾದ 1] ಇಕ್ಬಾಲ್  ವಾಸ  ಎ.ಕೆ. ಕಾಲೋನಿ  ಚಿಕ್ಕಮಗಳೂರು, 2] ಹರ್ಬಾಸ್ ಬಿನ್ ಯಾಸಿನ್ , ಟಿಪ್ಪು ನಗರ , 3] ಫಾಜಿಲ್ ಬಿನ್ ರಶಿದ್ ವಾಸ ಟಿಪ್ಪುನಗರ ರವರು ಓಡಿ ಹೋಗಿದ್ದು,  ಅರೋಪಿತರು ಕಡಿದಿದ್ದ ದನಗಳ ಮಾಂಸವನ್ನು ಅಮಾನತ್ತುಪಡಿಸಿಕೊಂಡು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ನಗರ ಪಿ.ಎಸ್.ಐ. ಶ್ರೀ ನಾಗೇಂದ್ರನಾಯ್ಕ  ಹೆಚ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 16-05-2022 ರಂದು ಮಂಜುನಾಥ ಬಿನ್ ಲೇಟ್ ಬಾಬು ವಾಸ ವಿಜಯಗೌಡರ ಕಾಫಿ ತೋಟ ಕೂಲಿ ಲೈನ್ ಮನೆ ದಾರದಹಳ್ಳಿ  ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳು ಆಶ್ವಿನಿ ಇವಳು ದಿನಾಂಕ;12/05/2022 ರಂದು ಹೊಟೆನೋವು ಎಂದು ಮನೆಯಲ್ಲಿ ಇದ್ದವಳು  ಮನೆಯಿಂದ ಹೊರಗೆ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಅಶ್ವೀನಿ , 19 ವರ್ಷ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ , 5 ಅಡಿ ಎತ್ತರ,  ಕನ್ನಡ , ತುಳು ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ.  ಕಾಣೆಯಾಗಿರುವ ತನ್ನ ಮಗಳು ಅಶ್ವಿನಿ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ನ.ರಾ. ಪುರ ಪೊಲೀಸ್ ಠಾಣೆ.

ದಿನಾಂಕ:15-05-2022 ರಂದು 18.00 ಗಂಟೆ ಸಮಯದಲ್ಲಿ ನ.ರಾ. ಪುರ ಪೊಲೀಸ್ ಠಾಣಾ ಸರಹದ್ದಿನ ಹಂದೂರು ಗ್ರಾಮದ ರಂಗ ಮಂದಿರದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಉರ್ಮಿಸ್ ಬಿನ್ ವರ್ಗೀಸ್ ಪಿ.ಟಿ. ವಾಸ ಹಸೂಡಿ ಬಿಳಾಲ್ ಕೊಪ್ಪ ಗ್ರಾಮ ಎನ್.ಆರ್. ಪುರ ವಾಸಿ ಇವರು ತಮ್ಮ ಬಾಬ್ತು ಕೆಎ-41-ಎಂ-9467 ರ ಕಾರಿನಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಕಾರಿನಲ್ಲಿ ಅಕ್ರಮವಾಗಿ 90 ಎಂ.ಎಲ್. ನ 59 ಮದ್ಯವನ್ನು ಹೊಂದಿದ್ದು ಅಂದಾಜು ಬೆಲೆ 2072/-ರೂ ಗಳಾಗಿರುತ್ತೆ. ಕಾರು ಸಹಿತ ಮದ್ಯವನ್ನು ಮತ್ತು ಮಧ್ಯ ಮಾರಾಟದಿಂದ ಅರೋಪಿತನು ಸಂಗ್ರಹಿಸಿದ 700/- ನಗದು ಹಣವನ್ನು  ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಎನ್. ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಎನ್.ಆರ್. ಪುರ ಠಾಣಾ ಪಿಎಸ್ಐ ದಿಲೀಪ್ ಕುಮಾರ್ ವಿ.ಟಿ.  ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:15-05-2022 ರಂದು ಮೂಡಿಗೆರೆ ಪೊಲೀಸ್ ಠಾಣಾ ಸರಹದ್ದಿನ ಶ್ರೀಮತಿ ಜಯಲಕ್ಷ್ಮಿ @ ಸುಬ್ಬಮ್ಮ ಕೋಂ ರಾಮಶೆಟ್ರು, ಅಂಗಡಿ ವ್ಯಾಪಾರ ವಾಸ ಹುನಗನಹಳ್ಳಿ ಬೇವಿನ ಗುಡ್ಡ ಸರ್ಕಲ್ ವಾಸಿ ಗೌತಹಳ್ಳಿ ರವರು ತಮ್ಮ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತರು ದಾಳಿ ವೇಳೆ ಓಡಿ ಹೋಗಿದ್ದು, ಅರೋಪಿತಳು ಹೊಂದಿದ್ದ 7 ಲೀಟರ್ 920 ಎಂ.ಎಲ್. ನ 59 ಮದ್ಯವನ್ನು ಹೊಂದಿದ್ದು ಅಂದಾಜು ಬೆಲೆ 3558/- ರೂ ಗಳಾಗಿರುತ್ತೆ. ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತಳ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಠಾಣಾ ಪಿಎಸ್ಐ ರವಿ ಜಿ.ಎ.  ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ;15-05-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮೂಡಿಗೆರೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದು ಆರೋಪಿತರಾದ ಗಣೇಶ್ ಸಿ. ಬಿನ್ ಚಿನ್ನಶೆಟ್ಟಿ, ವಾಸ ಜೆ.ಪಿ. ರಸ್ತೆ, ಮೂಡಿಗೆರೆ  ರವರನ್ನು ವಶಕ್ಕೆ ಪಡೆದು, ಆರೋಫಿತರಿಂದ 3750/-ರೂ  ನಗದು ಹಣವನ್ನು ಮತ್ತು ಒಂದು ಬಾಲ್ ಪೆನ್ನು ಹಾಗು ನಂಬರ್ ಬರೆದಿರುವ ಹಾಳೆಯನ್ನು ಆಮಾನತ್ತುಪಡಿಸಿಕೊಂಡು ಬಂದು ಮೂಡಿಗೆರೆ ಠಾಣೆಯಲ್ಲಿ ಅರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ. ಪಿ,ಎಸ್ಐ.  ಗೋವಿಂದನಾಯ್ಕ ಬಿ. ಮತ್ತು  ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಜೂಜಾಟ ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ;15-05-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮೂಡಿಗೆರೆ  ಮುತ್ತಿಗೆಪುರದ ತೋಟಗಾರಿಕೆ ಇಲಾಖೆಯ ಸಪೋಟ ತೋಟದ ಬಳಿ ಅಕ್ರಮವಾಗಿ ಕೆಎ-05ಝಡ್-2436 ಕಾರಿನಲ್ಲಿ ಮತ್ತು ಕೆಎ-18-ಇಎಫ್-6889 ಸ್ಕೂಟಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರಾದ 1] ಅಬ್ಬೂಬಕ್ಕರ್ ಸಿದ್ದಿಕ್ ಬಿನ್ ಶೇಖಬ್ಬ, ದೇವರ ಗ್ರಾಮ ಬೆಳ್ತಂಗಡಿ ತಾಲ್ಲೋಕು, ದ.ಕ. ಜಿಲ್ಲೆ 2] ಅಮೃತ್ ಎಂ.ಎಸ್. ಬಿನ್ ಸದಾಶಿವ , ವಾಸ ಹಳೆಅಸ್ಪತ್ರೆ ಹಿಂಭಾಗ ಗೆಂಡೆಹಳ್ಳಿ ರಸ್ತೆ ಮೂಡಿಗೆರೆ ಪಟ್ಟಣ, 3]ರಿಷಬ್ ರಾಜ್ ಬಿನ್ ಮೋಹಿದ್ದಿನ್ ಎಂ.ಎ. ಮಹಮ್ಮದ್ ಅಲಿ ರಸ್ತೆ ಮೂಡಿಗೆರೆ ಪಟ್ಟಣ,  ರವರನ್ನು ವಶಕ್ಕೆ ಪಡೆದು, ಆರೋಫಿತರು ಅಕ್ರಮವಾಗಿ 231 ಗ್ರಾಂ ಗಾಂಜಾವನ್ನು ಹೊಂದಿದ್ದು, ಅಂದಾಜು ಬೆಲೆ 12000/- ರೂ ಗಳಾಗಿದ್ದು, ಗಾಂಜಾವನ್ನು ಮತ್ತು ಕೆಎ-05-ಝಡ್-2436 ಕಾರಿನಲ್ಲಿ ಹಾಗೂ ಕೆಎ-18-ಇಎಫ್-6889 ಸ್ಕೂಟಿಯನ್ನು ಆಮಾನತ್ತುಪಡಿಸಿಕೊಂಡು ಬಂದು ಮೂಡಿಗೆರೆ ಠಾಣೆಯಲ್ಲಿ ಅರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ. ಮೂಡಿಗೆರೆ ಸಿ.ಪಿ.ಐ. ಸೋಮಶೇಖರ್ ಜೆ.ಸಿ. ಮತ್ತು  ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 16-05-2022 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080