ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಸೇವನೆ ಪ್ರಕರಣಗಳು

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:16/06/2022 ರಂದು ಚಿಕ್ಕಮಗಳೂರು ಠಾಣಾ ಸರಹದ್ದಿನ ನಗರದ ಸಂತೇ ಮಾರ್ಕೇಟ್, ಲಾರಿ ಸ್ಯಾಂಡ್ ಬಳಿ ಪ್ರಕಾಶ್ ಬಿನ್ ಬಾಬು, ವಾಸ ಮುನೀರ್ ಕಾಂಪ್ಲೆಕ್ಸ್, ಮಲ್ಲಂದೂರು ರಸ್ತೆ ವಾಸಿ ಇವರುಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇವರುಗಳು ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಠಾಣಾ ಸಿಬ್ಬಂದಿಗಳಾದ  ಶಶಿಧರ ಜಿ.ಕೆ. ರವರು ಪಾಲ್ಗೊಂಡಿರುತ್ತಾರೆ.

ಬಣಕಲ್ ಪೊಲೀಸ್ ಠಾಣೆ.

ದಿನಾಂಕ:16/06/2022 ರಂದು ಬಣಕಲ್ ಠಾಣಾ ಸರಹದ್ದಿನ ಬಣಕಲ್ ಟೌನ್ ಕೆ.ಎಂ. ರಸ್ತೆ, ನಲ್ಲಿ ಮಹಮ್ಮದ್ ಸರ್ಪರಾಜ್ ಬಿನ್ ಇಪ್ತಿಕರ್ ಅಹಮದ್, ವಾಸ ಬಣಕಲ್ ವಾಸಿ ಮತ್ತು ಬಣಕಲ್ ನಿಂದ ಮತ್ತಿಕಟ್ಟೆಗೆ ಹೋಗುವ ರಸ್ತೆಯಲ್ಲಿ ವಾಸಿಂ ಅಕ್ರಂ ಬಿನ್ ಜಾವಿದ್ ವಾಸ ಬಣಕಲ್ ಇವರುಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇವರುಗಳು ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಠಾಣಾ ಪಿ.ಎಸ್.ಐ. ಶ್ರೀಮತಿ ಗಾಯತ್ರಿ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಕೊಲೆ ಪ್ರಕರಣ

ಜಯಪುರ ಪೊಲೀಸ್ ಠಾಣೆ

ದಿನಾಂಕ:16/06/2022 ರಂದು ಪಿರ್ಯಾದಿ ಕೆ. ಪ್ರಭಾಕರ್ ಬಿನ್ ಕಂದಸ್ವಾಮಿ, ಗಾಳಿಗಂಡಿ ಅಲ್ದೂರು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;14/06/2022 ರಂದು ರಾತ್ರಿ ಸಮಯದಲ್ಲಿ ತಲವಾನೆ ಎಸ್ಟೇಟ್ ಬಳಿ ಹಾಲಪ್ಪ ಈತನು ತನ್ನ ಮಗಳ ಮನೆಗೆ ಹೋಗುವುದಾಗಿ, ತನ್ನ ಎರಡನೇ ರಾಧಳಿಗೆ ಹೇಳುತ್ತಿರುವಾಗ, ಇದೇ ವಿಚಾರದಲ್ಲಿ ಇಬ್ಬರಿಗೂ ಗಲಾಟೆ ಆಗಿ ಹಾಲಪ್ಪನು ರಾಧಳಿಗೆ ಕೈಯಿಂದ ಹೊಡೆದಿದ್ದು, ನಂತರ ರಾಧಳು ತನ್ನ ಕೂಲಿ ಲೈನ್ ಮನೆಯಿಂದ ಓಡಿ ಬಂದು ಅಲ್ಲೆ ಇರುವ ಪಾಳು ಬಿದ್ದಿರುವ ಲೈನ್ ಮನೆಯ ಒಳಗೆ ಓಡಿ ಹೋದಾಗ ಹಾಲಪ್ಪನು ದೊಣ್ಣೆಯಿಂದ ರಾಧಳ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಅರೋಫಿ ಹಾಲಪ್ಪನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:15/06/2022 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಬಾವಿಕೆರೆ ಶನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ರವಿನಾಯ್ಕ ಬಿನ್ ತೋಳಚನಾಯ್ಕ ಇವರು ಅಂಗಡಿ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಅರೋಪಿತನು ಅಕ್ರಮವಾಗಿ ಹೊಂದಿದ್ದ   1484/- ರೂ ಬೆಲೆಯ 180 ಎಂ.ಎಲ್. ನ 14 ಟೆಟ್ರಾಪ್ಯಾಕ್ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು, ಅರೋಫಿತನ ವಿರುದ್ದ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ. ಠಾಣಾ ಪಿ.ಎಸ್.ಐ. ಮಂಜುನಾಥ ಹೆಚ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮರಳು ಕಳ್ಳತನ ಪ್ರಕರಣ

ಕಳಸ ಪೊಲೀಸ್ ಠಾಣೆ.

ದಿನಾಂಕ 15/06/2022 ರಂದು ಕಳಸ ಠಾಣಾ ಸರಹದ್ದಿನ ಹೆಮ್ಮಕ್ಕಿ ಗ್ರಾಮದಲ್ಲಿ ರತ್ನಾಕರ ಹೆಚ್.ಜಿ. ಬಿನ್ ಲೇಟ್ ಗೋಪಾಲಗೌಡ ಇವರು ಕಾಂಪೌಂಡ್ ಒಳಗಡೆ ಸುಮಾರು 30 ಲೋಡ್ ನಷ್ಟು ಮರಳನ್ನು ಅಕ್ರಮವಾಗಿ ಕೆಎ.18.ಟಿಬಿ.1370 ಟ್ಯಾಕ್ಟರ್ ಕೆಎ-18-ಟಿಬಿ 1396 ರಲ್ಲಿ ಸಂಗ್ರಹಣೆ ಮಾಡಿದ್ದು, ದಾಳಿ ವೇಳೆ ಟ್ಯಾಕ್ಟರ್ ನಿಂದ ಮರಳನ್ನು ಸುರಿಯುತ್ತಿದ್ದು, ಟ್ಯಾಕ್ಟರ್ ಚಾಲಕ ವಿನೇಶ್ ಕೆ.ಡಿ. ಬಿನ್ ಡಿಕಯ್ಯಗೌಡ, ಎಂದು ತಿಳಿಸಿದ್ದು ಅರೋಫಿತನು ಸದರಿ ಮರಳನ್ನು ಸುಭದ್ರಾ ಹಳ್ಳದಿಂದ ಜೆ.ಸಿ.ಬಿ.ಯಲ್ಲಿ ತೆಗೆದು ಸಂಗ್ರಹಿಸಿದ್ದು ಮರಳನ್ನು  ಜೆ,ಸಿ.ಬಿ ಯಿಂದ ತೆಗೆದಿದ್ದ್ದು ಜೆ.ಸಿ.ಬಿ. ಚಾಲಕ ಷರೀಪ್ ಎ. ವಡ್ಡಟ್ಟಿ ಬಿನ್ ಅಬ್ದುಲ್ ಸಾಬ್ , ಮುಂಡರಗಿ ಅಗಿರುತ್ತಾನೆ. ಸದರಿ  ಮರಳನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕುದುರೆಮುಖ ಸಿಪಿಐ ಪಿ..ಐ. ಸಿ.ಎನ್. ರಮೇಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಬೈಕ್ ಕಳ್ಳತನ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ:15/06/2022 ರಂದು ಪಿರ್ಯಾದಿ ಸಿದ್ದವೀರಯ್ಯ ಬಿನ್ ಮಂಜುನಾಥಯ್ಯ ಗೌರಪುರ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯು ತೋಟೇಶ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದು ದಿನಾಂಕ;24/05/2022 ರಂದು ರಾತ್ರಿ ಪಿರ್ಯಾದಿ ಬಾಬು ಕೆಎ.17.ಹೆಚ್.ಎಫ್.9769 ನಿಲ್ಲಿಸಿದ್ದ ಬೈಕು ದಿನಾಂಕ;26/05/2022 ರಂದು ಬೆಳಿಗ್ಗೆ ನೋಡಲಾಗಿ ಬೈಕ್ ಇರಲಿಲ್ಲ, ಯಾರೋ ಕಳ್ಳರು ಸದರಿ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಬೈಕಿನ ಬೆಲೆ 53,000/- ರೂ ಅಗಿರುತ್ತದೆ, ಕಳುವು ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;15/06/2022 ರಂದು ಸಂಜೆ ಪಿರ್ಯಾದಿ ಫತಾವುಲ್ಲಾ, ಅತ್ತಿಮಗ್ಗೆ ಅಜ್ಜಂಪುರ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;15/06/2022 ರಂದು ಪಿರ್ಯಾದಿ ಅಣ್ಣ ಸಖಾವತ್ವುಲ್ಲಾ ರವರನ್ನು ಅಲಿಂಪಾಷ ರವರು ತನ್ನ ಬಾಬ್ತು  ಕೆಎ-14-3843 ಬೈಕಿ ಹಿಂಬದಿಯಲ್ಲಿ ಕೂರಿಸಿಕೊಂಡು, ಚನ್ನಾಪುರದಿಂದ ಕೆಲಸಮುಗಿಸಿಕೊಂಡು ಅಜ್ಜಂಫುರ ಕಡೆಗೆ ಬೈಕಿನಲ್ಲಿ ಬರುತ್ತಿರುವಾಗ ಬೀರೂರು ಕಡೆಯಿಂದ ಬಂದ ಕೆಎ-18-ಪಿ-8085 ನಿಸ್ಸಾನ್ ಟೆರಾನೊ  ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸಖಾಯತ್ ವುಲ್ಲಾ ನ ತಲೆಗೆ ಬಲವಾದ ಪೆಟ್ಟಾಗಿ ಮೃತಪಟ್ಟಿದ್ದು, ಬೈಕಿನ ಚಾಲಕ ಅಲೀಂ ಪಾಷ ಇವರಿಗೂ ಪೆಟ್ಟಾಗಿರುವುದಾಗಿ, ಅಪಘಾತಪಡಿಸಿದ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣಗಳು

ಕಡೂರು  ಪೊಲೀಸ್ ಠಾಣೆ.

ದಿನಾಂಕ:15/06/2022 ರಂದು ಸಂಜೆ ಕಡೂರು  ಠಾಣಾ ಸರಹದ್ದಿನ ಹುಳುಕಿನ ಕಲ್ಲು ಕ್ರಾಸ್ ಬಳಿ ರಸ್ತೆ ಕಾಂಗಾರಿ ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್ ಪಕ್ಕದಲ್ಲಿ ರಸ್ತೆಬದಿ ವಿದ್ಯತ್ ದೀಪದ ಬೆಳಕಿನಲ್ಲಿ ಅಕ್ರಮವಾಗಿ ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ರವಿ ಬಿನ್ ಮಹದೇವಪ್ಪ 2]ಸಚಿನ್ ಬಿನ್ ಬಸವರಾಜು, 3]ಮಧು ಬಿನ್ ಲೋಕೇಶಪ್ಪ ಇವರನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿ 4] ಸುಂದರೇಶ ಈತನು ಓಡಿ ಹೋಗಿರುತ್ತಾನೆ, ಆರೋಫಿತರು ಜೂಜಾಟ ಆಡಲು ಬಳಸಿದ  4720/- ರೂ ನಗದು ಹಣ , 52 ಇಸ್ಪೀಟ್ ಎಲೆಗಳು ಹಾಗೂ ಒಂದು ಪ್ಲಾಸ್ಟಿಕ್ ಟಾರ್ಪಲ್ ಅನ್ನು ಅಮಾನತ್ತುಪಡಿಸಿಕೊಂಡು ಬಂದು  ಅರೋಫಿತರ ವಿರುದ್ದ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಸಿ,ಪಿ.ಐ. ಶಿವಕುಮಾರ್ ಕೆ. ಆರ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 16-06-2022 08:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080