ಅಭಿಪ್ರಾಯ / ಸಲಹೆಗಳು

ಅಕ್ರಮ ಜೂಜಾಟ  ಪ್ರಕರಣ.

ನಗರ  ಪೊಲೀಸ್ ಠಾಣೆ,

ದಿನಾಂಕ 14-09-2021 ರಂದು 20-15 ಗಂಟೆ ಸಮಯದಲ್ಲಿ ಮಾರ್ಕೆಟ್ ರಸ್ತೆಯ ಜ್ಯೋತಿ ಟಾಕೀಸ್ ( ಸರ್ಕಲ್ ) ಬಳಿ ಅಕ್ರಮವಾಗಿ ಮಟ್ಕಾ ಜೂಜಾಟವಾಡಿಸುತ್ತಿದ್ದ ಇಬ್ರಾಹಿಂ ಬಿನ್ ಅಬ್ದುಲ್, ಸಂತೇ ಮಾರ್ಕೆಟ್ ತಮಿಳು ಕಾಲೋನಿ, ಚಿಕ್ಕಮಗಳೂರು ವಾಸಿ ಈತನನ್ನು ವಶಕ್ಕೆ ಪಡೆದು, ಈತನ ಬಳಿಯಿದ್ದ ಒಂದು ಬಾಲ್ ಪೆನ್, ಒಂದು ಮಟ್ಕಾ ಚೀಟಿ, ಹಾಗೂ 1060/- ರೂ ಹಣವನ್ನು ಅಮಾನತ್ತುಪಡಿಸಿಕೊಂಡು ಇಬ್ರಾಹಿಂರವರ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಮಹಿಳಾ  ಪೊಲೀಸ್ ಠಾಣೆ.

ದಿನಾಂಕ:-15-09-2021 ರಂದು ಚಂದ್ರಮ್ಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 15-09-2021 ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ನನ್ನ ಮಗಳಾದ ಸುವರ್ಣ ಕಟ್ಟಿಮನಿ, 18 ವರ್ಷ  ಇವಳು ಐಡಿಎಸ್ಜಿ ಕಾಲೇಜಿನಲ್ಲಿ ದ್ವಿತೀಯ ಬಿ.ಎ.ಓದುತ್ತಿದ್ದು ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವಳು ಸಂಜೆಯಾದರೂ ವಾಪಾಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ, ಪರಿಚಯಸ್ಥರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ನನ್ನ ಮಗಳಾದ ಸುವರ್ಣರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 15-09-2021 ರಂದು ಗ್ರಾಮಾಂತರ ಠಾಣಾ ಪಿಸಿ-468 ರವರು ನೀಡಿದ ದೂರಿನ ಸಾರಾಂಶವೇನೆಂದರೆ , ಪೊಲೀಸ್ ನಿರೀಕ್ಷಕರರವರ ಆದೇಶದಂತೆ  ಪಿ.ಎಸ್.ಐ ಅನಿಲ್ ಕುಮಾರ್ ನಾಯ್ಕರವರೊಂದಿಗೆ ನಾನು ಹಾಗೂ ಹೆಚ್ ಸಿ -41 ರವರು  ಠಾಣಾ ಮೊ.ನಂ. 211/2021 ರ ಆರೋಪಿ ದಿಲೀಪನ ಪತ್ತೆಗಾಗಿ ನೇಮಿಸಿದ್ದು ಅದರಂತೆ ಬಾತ್ಮೀದಾರರ ಮಾಹಿತಿಯಂತೆ ದಿಲೀಪನು ಇನ್ನೊಬ್ಬ ಯುವಕನೊಂದಿಗೆ ಹಳೇಬೀಡಿನಿಂದ ಜಾವಗಲ್ ಕಡೆಗೆ ಸ್ಕೂಟಿಯಲ್ಲಿ ಬರುತ್ತಿರುವುದಾಗಿ ತಿಳಿಸಿದ್ದು ,ಅದರಂತೆ ಶಂಕರಹಳ್ಳಿ ಗೇಟ್ ಬಳಿ ಕಾಯುತ್ತಿರುವಾಗ ಸ್ಕೂಟಿಯಲ್ಲಿ ಇಬ್ಬರು ಯುವಕರು ಬರುತ್ತಿದ್ದು ನಾವು ವಾಹನವನ್ನು ನಿಲ್ಲಿಸುವಂತೆ  ಸೂಚಿಸಿದರೂ ಸಹ ಗಾಡಿಯನ್ನು ನಿಲ್ಲಿಸದೆ ನನ್ನ ಮೇಲೆಯೇ ಹತ್ತಿಸಲು ಪ್ರಯತ್ನಿಸಿದ್ದು , ವಾಹನವನ್ನು ಹಿಂಬಾಲಿಸಿದ್ದು ಅದರಲ್ಲಿ ಒಬ್ಬನು ಓಡಿಹೋಗಿ ತಪ್ಪಿಸಿಕೊಂಡಿದ್ದು, ಆದಿರಮೇಶ @ರಮೇಶ, ಬೆಣ್ಣೆಗುಡ್ಡ, ಬಸ್ತಹಳ್ಳಿ, ಹಳೆಬೀಡು ಗ್ರಾಮ ವಾಸಿ ಈತನನ್ನು ಹಿಡಿಯಲು ಹೋದಾಗ ನನ್ನ ಎಡಮುಂಗೈಗೆ ಹಲ್ಲಿನಿಂದ ಕಚ್ಚಿದ್ದಲ್ಲದೆ, ಜೇಬಿನಲ್ಲಿದ್ದ ಚಾಕುವಿನಿಂದ ಹೊಟ್ಟೆಗೆ ಚುಚ್ಚಲು ಬಂದಿದ್ದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾನೆ. ಓಡಿಹೋದ ಆಸಾಮಿಯ ಹೆಸರು ಬೇಲೂರು ಹೊಸನಗರ ವಾಸಿ ದಿಲೀಪ್ ಆಗಿರುತ್ತಾನೆ.  ಆದಿರಮೇಶ @ರಮೇಶ ಈತನ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

ಇತ್ತೀಚಿನ ನವೀಕರಣ​ : 16-09-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080