ಅಭಿಪ್ರಾಯ / ಸಲಹೆಗಳು

ಅಕ್ರಮ ಕ್ರಿಕೆಟ್ ಬೆಟ್ಟಿಂಗ್  ಪ್ರಕರಣ

ಬಸವನಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:16/10/2021 ರಂದು  ಪಿರ್ಯಾದಿ ಕಿರಣ್ ಕುಮಾರ್. ಪಿ. ಪಿ.ಎಸ್.ಐ. ರವರು ನೀಡಿದ ದೂರಿನಲ್ಲಿ ದಿನಾಂಕ:15/10/2021 ರಂದು ಚಿಕ್ಕಮಗಳೂರು ನಗರದ ಜಾಲಿ ಪ್ರೆಂಡ್ಸ್  ಸರ್ಕಲ್ ಬಳಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ  ಆರೋಪಿಗಳಾದ ಮೋಹನ್ ಎನ್ ಬಿನ್ ನಾಗರಾಜಶೆಟ್ಟಿ ಮತ್ತು ಮಹೇಶ ಸಿ.ಕೆ. ಬಿನ್ ಲೇಟ್ ಚಂದ್ರಣ್ಣರವರನ್ನು ವಶಕ್ಕೆ ಪಡೆದು ಆರೋಪಿತರು ಕ್ರಿಕೆಟ್ ಬೆಟ್ಟಿಂಗ್ ಆಡಲು ಬಳಿಸಿದ ವಿವೋ ಸ್ಮಾಟ್ ಮೊಬೈಲ್ ಪೋನ್ ಮತ್ತು ಬೆಟ್ಟಿಂಗ್ ಗೆ ಉಪಯೋಗಿಸಿದ 8200/- ರೂ ನಗದು, ಬಿಳಿ ಬಣ್ಣದ ಚೀಟಿ ಮತ್ತು ಪೆನ್ ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಬಸವನಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿಎಸ್.ಐ. ಶ್ರೀ ಕಿರಣ್ ಕುಮಾರ್ ಪಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ನಗರ  ಪೊಲೀಸ್ ಠಾಣೆ.

ದಿನಾಂಕ:15/10/2021 ರಂದು ಚಿಕ್ಕಮಗಳೂರು ನಗರದ ಬೈ ಪಾಸ್ ರಸ್ತೆಯ ಎ,ಐ,ಟಿ, ಬಾಲಕೀಯರ ಹಾಸ್ಟಲ್ ಎದುರಿನ ಶಿವಾನಿ ಜ್ಯೂಸ್ ಸೆಂಟರ್ ಹತ್ತಿರ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಆರೋಪಿಗಳಾದ 1. ಮಂಜುನಾಥ ಬಿನ್ ಪ್ರೇಮಶೇಖರಯ್ಯ 2. ಪ್ರಶಾಂತ ಬಿನ್ ಶಿವಯ್ಯ ರವರನ್ನು  ವಶಕ್ಕೆ ಪಡೆದು ಆರೋಪಿತರು ಕ್ರಿಕೆಟ್ ಬೆಟ್ಟಿಂಗ್ ಆಡಲು ಬಳಿಸಿದ ಎರಡು ಸ್ಮಾಟ್ ಮೊಬೈಲ್ ಪೋನ್ ಮತ್ತು ಬೆಟ್ಟಿಂಗ್ ಗೆ ಬಳಸಿದ  21000/- ರೂ ನಗದು, ಒಂದು ನೋಟ್ ಪುಸ್ತಕ ಹಾಗೂ ಬಾಲ್ ಪೆನ್ ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿಎಸ್.ಐ. ಶ್ರೀ ಶಂಭುಲಿಂಗಯ್ಯ, ಎಂ.ಈ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ:15/10/2021 ರಂದು  ಅಜ್ಜಂಫುರ ಠಾಣಾ ಸರಹದ್ದಿನ ಅಂತರಘಟ್ಟೆ ಗ್ರಾಮದ ನರಿಗೆ ಕಲ್ಲು ಬಳಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಆರೋಪಿಗಳಾದ 1. ಸುರೇಶ 2. ಹೇಮಂತ 3. ಸಾಗರ 4. ಅಬಿಷೇಕ್ 5. ಪ್ರಭು 6. ರಕ್ಷಿತ್ 7. ಚರಣ್ ರಾಜ್ ರವರನ್ನು  ವಶಕ್ಕೆ ಪಡೆದು ಆರೋಪಿತರು ಕ್ರಿಕೆಟ್ ಬೆಟ್ಟಿಂಗ್ ಆಡಲು ಬಳಿಸಿದ ಒಂದು ಸ್ಮಾಟ್ ಮೊಬೈಲ್ ಪೋನ್ ಮತ್ತು ಬೆಟ್ಟಿಂಗ್ ಗೆ ಬಳಸಿದ  21,600/- ರೂ ನಗದು, ಒಂದು ನೋಟ್ ಪುಸ್ತಕ ಹಾಗೂ ಬಾಲ್ ಪೆನ್ ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಐ. ಶ್ರೀ ಲಿಂಗರಾಜು ಹೆಚ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:16/10/2021 ರಂದು ಸಖರಾಯಪಟ್ಟಣ ವಾಸಿ ಶ್ರೀ ಅಸೀಪ್ ಬಿನ್ ಹಂಸ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಬಾಬ್ತು ಹೈವೇ ಗಾರ್ಡನ್  ಹೋಟೇಲ್  ನ್ನು ಮಾಡಿಕೊಂಡಿದ್ದು,  ಹೋಟೆಲ್ ಗೆ ವಿದ್ಯುತ್ ಗಾಗಿ ಅಳವಡಿಸಿದ್ದ, ಹೊಂಡಾ 7 ಕೆ.ವಿ ಜನರೇಟರ್ ನ್ನು ದಿನಾಂಕ:15/10/2021 ರ ಬೆಳಿಗ್ಗೆ 8-30 ಗಂಟೆ ಯಿಂದ 16/10/2021 ರ ಬೆಳಿಗ್ಗೆ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಡೋರ್ ನ ಸ್ಕ್ರೋ ಗಳನ್ನು ತೆಗೆದು ತಗಡಿನ ಶೀಟ್ ಹರಿದು ಜನರೇಟರ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ . ಜನರೇಟರ್ ಬೆಲೆ 48,000/- ಅಗಿದ್ದು , ಕಳ್ಳತನವಾಗಿರುವ ಜನರೇಟರ್ ಮತ್ತು ಕಳ್ಳರನ್ನು ಪತ್ತೆ ಮಾಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 16-10-2021 08:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080