ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.

ಲಿಂಗದಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:16-12-2021 ರಂದು ಲಿಂಗದಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಹೊಸಗಂಗೂರು ಗ್ರಾಮದ ವಾಸಿ ಶ್ರೀಮತಿ.ಮಂಂಜುಳಾರವರು  ನೀಡಿದ ದೂರಿನಲ್ಲಿ ದಿನಾಂಕ:10-12-2021 ರಂದು ಸಂಜೆ 06-30  ಗಂಟೆ ಸಮಯದಲ್ಲಿ  ಪಿರ್ಯಾದಿಯವರ ಗಂಡ ಮಹೇಶ್ , 45 ವರ್ಷ ಇವರು ಬಳ್ಳಾವರದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ತರಲು ಹೋಗಿದ್ದು ಇಲ್ಲಿಯವರೆಗೂ ಬಂದಿರುವುದಿಲ್ಲ. ಸಾಧಾರಣ ಮೈಕಟ್ಟು, 5.5 ಅಡಿ ಎತ್ತರ , ಎಣ್ಣೆಗೆಂಪು ಮೈಬಣ್ಣ, ಕನ್ನಡ ಹಾಗೂ ತಮಿಳು ಮಾತನಾಡುತ್ತಾರೆ.  ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲವೆಂದು ಕಾಣೆಯಾಗಿರುವ ನನ್ನ ಗಂಡನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಸಂಚಾರ  ಪೊಲೀಸ್ ಠಾಣೆ.

ದಿನಾಂಕ: 16-12-2021 ರಂದು ಬೆಳಗ್ಗೆ 10-30 ಗಂಟೆ ಸಮಯದಲ್ಲಿ ಬಸವರಾಜು ಪಿಸಿ 309 ಸಂಚಾರ ಠಾಣೆರವರು ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿವಸ  ಎನ್ ಎಂ ಸಿ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವಾಗೆನ್ ಎನ್ .ಎಂ. ಸಿ ಸರ್ಕಲ್ ಬಳಿ ಒಬ್ಬ 45 ವರ್ಷದ ವ್ಯಕ್ತಿ ನಡೆದುಕೊಂಡು ರಸ್ತೆಯನ್ನು ದಾಟುತ್ತಿರುವಾಗ ಶೃಂಗಾರ್ ಸರ್ಕಲ್ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಹೋಗಲು ಬಂದ ಕೆಎ- 18 ಎ- 7600 ಮಹೀಂದ್ರಾ ಮ್ಯಾಸಿಮಾ ಗೂಡ್ಸ್ ವಾಹನದ ಚಾಲಕ ವಾಹನವನ್ನು   ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ 45 ವರ್ಷದ ವ್ಯಕ್ತಿಗೆ  ಡಿಕ್ಕಿ ಹೊಡೆಸಿದ ಪರಿಣಾಮ  ತಲೆಗೆ ಬಲವಾದ ಪೆಟ್ಟು ಬಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅಪಘಾತಗೊಳಿಸಿದ ಕೆಎ- 18 ಎ- 7600 ವಾಹನದ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅಕ್ರಮ ಮದ್ಯ ಮಾರಾಟ ಪ್ರಕರಣ.

ಬಾಳೂರು  ಪೊಲೀಸ್ ಠಾಣೆ.

ದಿನಾಂಕ: 15-12-2021 ರಂದು ಬಾಳೂರು  ಠಾಣಾ ಸರಹದ್ದಿನ  ಬಾಳೂರು ಹ್ಯಾಂಡ್ಪೋಸ್ಟ್ ಬಳಿ ಉಮೇಶ ಎಂಬುವರು ತಮ್ಮ ದಿನಸಿ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು , ಆತನ ಬಳಿಯಿದ್ದ   90 ಎಂ.ಎಲ್. ಕ್ಯಾಪ್ಟನ್ ಮಾರ್ಟಿನ್ ವಿಸ್ಕಿಯ 42 ಪೌಚ್ ಗಳನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1,475/-ರೂ ಆಗಿದ್ದು, ಆರೋಪಿ ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಸೋಮಶೇಖರ್ ಸಿ.ಪಿ.ಐ. ಮೂಡಿಗೆರೆ ವೃತ್ತ ಹಾಗೂ  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 16-12-2021 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080