ಅಭಿಪ್ರಾಯ / ಸಲಹೆಗಳು

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ನಗರ  ಪೊಲೀಸ್ ಠಾಣೆ.

ದಿನಾಂಕ 16/06/2021 ರಂದು ಪಿರ್ಯಾದುದಾರರಾದ  ಪ್ರವೀಣ್, ಪಿ.ಡಿ.ಒ. ಲಕ್ಯಾ ಮಾಚೇನಹಳ್ಳಿ ಗ್ರಾಮಪಂಚಾಯ್ತಿರವರು ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯಲ್ಲಿನ ರಿಲೆಯನ್ಸ್ ಮಾರ್ಟ್ನಿಂದ ಒಬ್ಬ ವ್ಯಕ್ತಿ ಹೊರಗೆ ಬಂದಿದ್ದು ಆತನನ್ನು ತಡೆದು ವಿಚಾರ ಮಾಡಲಾಗಿ ರಿಲೆಯನ್ಸ್ ಮಾರ್ಟ್ನಿಂದ ವಸ್ತು ಖರೀದಿ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿದ್ದು ವಸ್ತು ಖರೀದಿ ಬಗ್ಗೆ ಬಿಲ್ಲನ್ನು ತೋರಿಸಿದ್ದು ,ನಂತರ ರಿಲೆಯನ್ಸ್ ಮಾರ್ಟ್ ಒಳಗೆ ಹೋಗಿ ನೋಡಲಾಗಿ 4-5 ಜನರು ಇದ್ದು ವಸ್ತುಗಳನ್ನು ಖರೀದಿ ಮಾಡಲು ನಿಂತಿದ್ದು ,ಅವರುಗಳು ನಾವು ಹೋಗಿತ್ತಿದ್ದಂತೆ ಅಲ್ಲಿಂದ ಎಲ್ಲರೂ ಹೋಗಿದ್ದು ,ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ನೋನಪ್ಪ ಬಿನ್ ಚನ್ನಪ್ಪಗೌಡ, ಕೆ.ಎಂ.ರಸ್ತೆ. ಚಿಕ್ಕಮಗಳೂರು  ಎಂದು ತಿಳಿಸಿದ್ದು,ಕೊವಿಡ್-19 ಸಂಬಂಧ  ಸರ್ಕಾರವು ಹೊರಡಿಸಿರುವ ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿರುವ ನೋನಪ್ಪರವರ ವಿರುದ್ದ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ

ದಿನಾಂಕ 17-06-2021 ರಂದು ಚರಣ್ರಾಜ್ ,ಬಿದರಹಳ್ಳಿ ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿವಸ ಪಿರ್ಯಾದುದಾರರ ಚಿಕ್ಕಪ್ಪನಾದ ಬಿ.ಡಿ.ಮಹೇಶ್ @ಯುವರಾಜರವರು ತಮ್ಮ ಬಾಬ್ತು ಕೆಎ-18ಪಿ 0370 ಕಾರಿನಲ್ಲಿ   ಬಿದರಹಳ್ಳಿ ಗ್ರಾಮದಿಂದ ಹ್ಯಾಂಡ್ ಪೋಸ್ಟ್ ಪೆಟ್ರೋಲ್  ಬಂಕ್ ಗೆ ಬರುತ್ತಿದ್ದಾಗ ಬಿದರಹಳ್ಳಿ ಕುಶಾಲನಗರದ ಬಳಿ ಎದುರಿನಿಂದ ಬಂದ ಕೆಎ18 ಪಿ 484 ನಂಬರಿನ ಕಾರಿನ ಚಾಲಕ ವಿನಯ್ ತನ್ನ ಕಾರನ್ನು ಅತಿವೇಗ ಹಾಗೂ ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಹೇಶವರ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮಹೇಶ್ರವರ ಬಲಗಾಲು, ಕುತ್ತಿಗೆ  ಹಾಗೂ ತಲೆಗೆ ಪೆಟ್ಟಾಗಿರುತ್ತೆ ಎಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಆರೋಪಿ ವಿನಯ್ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಹೆಂಗಸು  ಕಾಣೆ ಪ್ರಕರಣ.

ಸಖರಾಯಪಟ್ಟಣ  ಠಾಣೆ.

ದಿನಾಂಕ 17-06-2021 ರಂದು ಪಿರ್ಯಾದುದಾರರಾದ ಕನಕಬಾಯಿ, ಅಗ್ರಹಾರ ತಾಂಡ್ಯ ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರಿಗೆ 3 ಜನ ಹೆಣ್ಣುಮಕ್ಕಳಿದ್ದು , ಮೊದಲನೇ ಮಗಳಾದ ಪ್ರಿಯಾ, 23 ವರ್ಷ ಈಕೆಯು ಪಿ.ಯು.ಸಿ ವುದ್ಯಾಭ್ಯಾಸ ಮುಗಿಸಿ ಮನೆಕೆಲಸ ಮಾಡಿಕೊಂಡು ಮನೆಯಲ್ಲಿಯೇ ಇದ್ದಳು. ದಿನಾಂಕ 15-06-2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ನನ್ನ ಮಗಳಾದ ಪ್ರಿಯಾಳು ನಮ್ಮ ಮಾವನವರಾದ ರಾಮಾನಾಯ್ಕರವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ರಾತ್ರಿ 10-00 ಗಂಟೆಯಾದರೂ ಮನೆಗೆ ಬಾರದ ಕಾರಣ ರಾಮಾನಾಯ್ಕರವರ ಮನೆಗೆ ಹೋಗಿ ವಿಚಾರಿಸಲಾಗಿ ನನ್ನ ಮಗಳು ಅಲ್ಲಿಗೆ ಹೋಗಿರುವುದಿಲ್ಲ. ನಮ್ಮ ನೆಂಟರಿಷ್ಟರ ಮನೆಯಲ್ಲಿ ,ಸಂಬಂದಿಕರ, ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ ನನ್ನ ಮಗಳಾದ ಪ್ರಿಯಾಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 25-06-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080