ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಕಡೂರು   ಪೊಲೀಸ್ ಠಾಣೆ.

ದಿನಾಂಕ 16/07/2021 ರಂದು ಕಡೂರು ನಗರದಲ್ಲಿ ಗಸ್ತಿನಲ್ಲಿರುವಾಗ ಚಿಕ್ಕಿಂಗಳ ಗ್ರಾಮದಲ್ಲಿ ಅಂಗಡಿಯ ಮುಂಭಾಗದಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ   ದಾಳಿ ನಡೆಸಿದ್ದು ಚಿಕ್ಕಂಗಳ ಗ್ರಾಮದಲ್ಲಿ ಅಂಗಡಿಯ ಮುಂಭಾಗದಲ್ಲಿ  ಒಬ್ಬ ಆಸಾಮಿಯು ಪ್ಲಾಸ್ಟಿಕ್ ಕವರ್ ನ್ನು ಹಿಡಿದುಕೊಂಡು ನಿಂತಿದ್ದು ನಮ್ಮಗಳನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವನನ್ನು ಸಿಬ್ಬಂದಿಗಳು ಹಿಡಿದುಕೊಂಡಿದ್ದು ಆತನ ಹೆಸರು ವಿಳಾಸ ಕೇಳಲಾಗಿ ರಮೇಶನಾಯ್ಕ  ಬಿನ್ ಭೀಮನಾಯ್ಕ, ಚಿಕ್ಕಂಗಳ ಗ್ರಾಮ ವಾಸಿ ಎಂದು ತಿಳಿಸಿದ್ದು , ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು  ಪರಿಶೀಲಿಸಲಾಗಿ 90 ಎಂ.ಎಲ್.ನ  ರಾಜಾವಿಸ್ಕಿಯ  15 ಮದ್ಯದ ಟೆಟ್ರಾಪೌಚ್ ಹಾಗೂ 180 ಎಂ.ಎಲ್ ನ ಬ್ಯಾಗ್ ಪೇಪರ್ ವಿಸ್ಕಿಯ 18 ಪೌಚ್ ಗಳಿದ್ದು ಗಳಿದ್ದು, ಮದ್ಯದ ಅಂದಾಜು ಬೆಲೆ 2435/- ರೂ ಆಗಿದ್ದು , ಆರೋಪಿತನಾದ ರಮೇಶನಾಯ್ಕನ ವಿರುದ್ದ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ.ರಮ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಕಡೂರು   ಪೊಲೀಸ್ ಠಾಣೆ.

ದಿನಾಂಕ 16/07/2021 ರಂದು ಕಡೂರು ನಗರದಲ್ಲಿ ಗಸ್ತಿನಲ್ಲಿರುವಾಗ ಚಿಕ್ಕಿಂಗಳ ಗ್ರಾಮದಲ್ಲಿ ಕೃಷ್ಣಮೂರ್ತಿ ಎಂಬುವವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಕೃಷ್ಣಮೂರ್ತಿ ಎಂಬುವವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದರಿಂದ ಆತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು  ಪರಿಶೀಲಿಸಲಾಗಿ 90 ಎಂ.ಎಲ್.ನ  ರಾಜಾವಿಸ್ಕಿಯ  30 ಮದ್ಯದ ಟೆಟ್ರಾಪೌಚ್ ಹಾಗೂ 180 ಎಂ.ಎಲ್ ನ ಡಿ.ಎಸ್.ಪಿ. ಬ್ಲಾಕ್ ಡಿಲೆಕ್ಸ್ ವಿಸ್ಕಿಯ 6 ಬಾಟಲಿಗಳೂ ಹಾಗೂ ಬ್ಯಾಗ್ ಪೇಪರ್ ವಿಸ್ಕಿಯ 8 ಟೆಟ್ರಾಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 2954/- ರೂ ಆಗಿದ್ದು , ಆರೋಪಿತನಾದ ಕೃಷ್ಣಮೂರ್ತಿ ವಿರುದ್ದ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ.ರಮ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಡೂರು   ಪೊಲೀಸ್ ಠಾಣೆ.

ದಿನಾಂಕ 16/07/2021 ರಂದು ಕಡೂರು ನಗರದಲ್ಲಿ ಗಸ್ತಿನಲ್ಲಿರುವಾಗ ಚಿಕ್ಕಿಂಗಳ ಗ್ರಾಮದ ಬಸ್ ನಿಲ್ದಾಣದ ಸಮೀಪದ ಕೆರೆಯ ಪಕ್ಕದ ಆಲದ ಮರದ ಬಳಿ  ರಾಜು ಎಂಬುವವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ರಾಜು ಎಂಬುವವರು ಚಿಕ್ಕಿಂಗಳ ಗ್ರಾಮದ ಬಸ್ ನಿಲ್ದಾಣದ ಸಮೀಪದ ಕೆರೆಯ ಪಕ್ಕದ ಆಲದ ಮರದ ಬಳಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದರಿಂದ ಆತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು  ಪರಿಶೀಲಿಸಲಾಗಿ 90 ಎಂ.ಎಲ್.ನ  ರಾಜಾವಿಸ್ಕಿಯ  55 ಮದ್ಯದ ಟೆಟ್ರಾಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1932/- ರೂ ಆಗಿದ್ದು , ಆರೋಪಿತನಾದ ರಾಜು ವಿರುದ್ದ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ.ರಮ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊಪ್ಪ  ಪೊಲೀಸ್ ಠಾಣೆ.

ದಿನಾಂಕ 16/07/2021 ರಂದು ಮುರುಡೇಶ್ವರ ಬಡಾವಣೆಯ ಲಯನ್ಸ್ ಕ್ಲಬ್ ಕಟ್ಟಡದ ಎದುರಿನ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಕೆಎ-18 ಎ-4783 ಆಟೋವನ್ನು ನಿಲ್ಲಿಸಿ ಆಟೋ ಚಾಲಕನ ಹೆಸರು ಕೇಳಲಾಗಿ ಸಂತೋಷ ಬಿನ್ ಸಂಜೀವ, ಕಾಚಗಲ್ , ಸೋಮ್ಲಾಪುರ ವಾಸಿ ಎಂದು ತಿಳಿಸಿದ್ದು , ಆಟೋವನ್ನು ತಪಾಸಣಡ ಮಾಡಲಾಗಿ ಆಟೋದ ಹಿಂದಿನ ಕ್ಯಾಬಿನ್ ನಲ್ಲಿ ಮದ್ಯದ ಬಾಕ್ಸ್ ಗಳಿದ್ದು , ಎರಡು ರಟ್ಟಿನ ಬಾಕ್ಸ್ ಗಳೀದ್ದು, ಪ್ರತಿಯೊಂದು ರಟ್ಟಿನ ಬಾಕ್ಸ್ ಗಳಲ್ಲಿ 90 ಎಂ.ಎಲ್ ನ ಕ್ಯಾಪ್ಟನ್ ಮಾರ್ಟಿನ್ ಸ್ಪೆಷಲ್ ವಿಸ್ಕಿಯ 96 ಟೆಟ್ರಾ ಪೌಚ್ ಗಳಿದ್ದು , ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಆರೋಪಿತನ ವಿರುದ್ದ ಕೊಪ್ಪ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ರಘುನಾಥರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ಅಕ್ರಮ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರಕರಣ.

ಕೊಪ್ಪ  ಪೊಲೀಸ್ ಠಾಣೆ.

ದಿನಾಂಕ:16-07-2021 ರಂದು ನಗರದಲ್ಲಿ ಗಸ್ತಿನಲ್ಲಿರುವಾಗ ಹುಲುಗಾರು ಕಡೆಯಿಂದ ಬಲಗ ಸರ್ಕಲ್ ಕಡೆಗೆ ಒಂದು ಗೂಡ್ಸ್ ಜೀತು ವಾಹನದಲ್ಲಿ ದೇವರಾಜ್ ಹಾಗೂ ಆತನ ಮಗ ದೀಕ್ಷಿತ್ ನೊಂದಿಗೆ ಜಾನುವಾರುಗಳನ್ನು ತುಂಬಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಹುಲುಗಾರು ಕಡೆಯಿಂದ ಬಲಗ ಸರ್ಕಲ್ ಕಡೆಗೆ ಕೆಎ-18 ಸಿ-2319 ನಂಬರಿನ  ಗೂಡ್ಸ್ ಜೀತು ವಾಹನ ಬಂದಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದು ವಾಹನವನ್ನು ಪರಿಶೀಲಿಸಲಾಗಿ ವಾಹನದ ಹಿಂಬದಿಯ ಲಗೇಜ್ ಕ್ಯಾರಿಯರ್  ಬಾಡಿಯಲ್ಲಿ ಎರಡು ಜಾನುವಾರುಗಳಿದ್ದು ಹಿಂಸಾತ್ಮಕವಾಗಿ ಅವುಗಳನ್ನು ತುಂಬಿಕೊಂಡು ಬಂದಿದ್ದು , ಓಡಿಹೋದವರ ಹೆಸರು ದೇವರಾಜ್ ಹಾಗೂ ಅವರ ಮಗ ದೀಕ್ಷಿತ್ ಆಗಿದ್ದು ,ಜಾನುವಾರುಗಳನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು , ಹಿಂಸಾತ್ಮಕವಾಗಿ ಅವುಗಳನ್ನು ತುಂಬಿಕೊಂಡು ವಾಹನದಲ್ಲಿ ಸಾಗಾಟ ಮಾಡುತ್ತಿದ್ದ  ದೇವರಾಜ್ ಹಾಗೂ ಅವರ ಮಗ ದೀಕ್ಷಿತ್ ವಿರುದ್ದ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ರಘುನಾಥರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಗಾಂಜಾ ಪ್ರಕರಣ

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ:16/07/2021 ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಿರೇಬಿದರೆ ಗ್ರಾಮದ ಸುಬ್ರಮಣಿ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪಿನ ಗಿಡಗಳನ್ನು ಬೆಳೆದಿದ್ದಾರೆಂದು ಮಾಹಿತಿ ಬಂದ ಮೇರೆಗೆ ಪಂಚರ ಸಮಕ್ಷಮ ಹಾಗೂ ಪತ್ರಾಂಕಿತ ಅಧಿಕಾರಿಯೊಂದಿಗೆ ದಾಳಿ ನಡೆಸಿದ್ದು , ನಮ್ಮಗಳನ್ನು ನೋಡಿ ಓಡಿಹೋದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಸುಬ್ರಮಣಿ ಬಿನ್ ಚಿನ್ನತಂಬಿ, ಅರವಿಂದ ನಗರ, ಚಿಕ್ಕಮಗಳೂರು ತಾಲ್ಲೂಕು ಎಂದು ತಿಳಿಸಿದ್ದು . ಜಮಿನಿನಲ್ಲಿ ಶುಂಠಿ ಹಾಗೂ ಬೀನ್ಸ್ ಬೆಳೆಯನ್ನು ಬೆಳೆದಿದ್ದು , ಅದರೊಳಗೆ 14 ಹಸಿರಾಗಿರುವ ಗಾಂಜಾ ಸೊಪ್ಪಿನ  ಗಾಂಜಾ ಸೊಪ್ಪಿನ ಗಿಡಗಳಿದ್ದು  . ಸದರಿ ಗಾಂಜಾ ಸೊಪ್ಪನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಪುದ್ದು. ಡಿ.ಸಿ.ಐ.ಬಿ.ಘಟಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳತನ ಪ್ರಕರಣ

ಬಾಳೂರು  ಪೊಲೀಸ್ ಠಾಣೆ

ದಿನಾಂಕ 16/07/2021 ರಂದು ಬಾಳೂರು ಠಾಣಾ ಸರಹದ್ದಿನ ಮಾಳಿಗನಾಡು ಗ್ರಾಮದ ವಾಸಿಯಾದ ಸುರೇಶ್ ಬಿನ್ ನಾಗಯ್ಯ ಎಂಬುವವರು ಹೊಸದಾಗಿ ನಿರ್ಮಾಣ ಮಾಢುತ್ತಿರುವ ಮನೆಯ ಪಕ್ಕದಲ್ಲಿ  ಅಕ್ರಮವಾಗಿ ಮರಳನ್ನು ಸಂಗ್ರಹ ಮಾಢಿರುತ್ತಾರೆಂದು  ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಮಾಳಿಗನಾಡು ಗ್ರಾಮದ ಸುರೇಶ್ ಬಿನ್ ನಾಗಯ್ಯ ಎಂಬುವವರು ಹೊಸದಾಗಿ ನಿರ್ಮಾಣ ಮಾಢುತ್ತಿರುವ ಮನೆಯ ಪಕ್ಕದಲ್ಲಿ  ಅಕ್ರಮವಾಗಿ ಮರಳನ್ನು ಸಂಗ್ರಹ ಮಾಡಿದ್ದು ಸುಮಾರು 4 ಲೋಡ್ ನಷ್ಟು ಮರಳಿನ ರಾಶಿ ಕಂಡುಬಂದಿದ್ದು , ಮರಳಿನ ಅಂದಾಜು ಬೆಲೆ 8000/-ರೂ ಆಗಿರುತ್ತೆ.  ಸಕರ್ಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಕಳ್ಳತನದಿಂದ ಸಂಗ್ರಹಿಸಿಟ್ಟಿರುವ ಆರೋಪಿ ವಿರುದ್ದ ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ಶ್ರೀಮತಿ.ರೇಣುಕಮ್ಮ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಶಸ್ತ್ರ ಪ್ರಕರಣ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 17-07-2021 ರಂದು ಬೆಳಗಿನ ಜಾವ ಬಕ್ರೀದ್ ಹಬ್ಬದ ಪ್ರಯುಕ್ತ ರೌಂಡ್ಸ್ ನಲ್ಲಿದ್ದಾಗ ಕೃಷ್ಣಾಪುರದಿಂದ ಮುಂದೆ ತಿರುವಿನಲ್ಲಿ ಹಂಪ್ಸ್ ಹತ್ತಿರ ಯಾರೋ ಮರ್ನಾಲ್ಕು ಜನರು ರಸ್ತೆಯಲ್ಲಿ ಬರುತ್ತಿರುವ ವಾಹನಗಳನ್ನು ಅಡ್ಡಗಟ್ಟುತ್ತಿರುವ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ದಾಳಿ ಮಡಲಾಗಿ ಹಂಪ್ಸ್ ಮದ್ಯೆ ಇರುವ ಬಸ್ ನಿಲ್ದಾಣದ ಹತ್ತಿರ ಯಾರೋ 3-4 ಜನರು ಮಾತನಾಡುತ್ತಾ ಕೈಯಲ್ಲಿ ಯಾವುದೋ ಆಯುಧಗಳನ್ನು  ಹಿಡಿದುಕೊಂಡು ಟಾರ್ಚ್ ಬೆಳಕನ್ನು ಹಾಕುತ್ತಾ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ನಿಲ್ಲಿಸುತ್ತಿದ್ದು , ಅವರುಗಳನ್ನು ಸುತ್ತುವರೆದು ಹಿಡಿದುಕೊಂಡು ಸ್ಥಳದಲ್ಲಿ ಇರುವಿಕೆಯ ಬಗ್ಗೆ ಕೇಳಲಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸುತ್ತಿದ್ದು ಸಮಂಜ್ಜಸವಾದ ಉತ್ತರ ನೀಡದೇ ಇದ್ದು, ಸದರಿಯವರುಗಳ ಹೆಸರು ಕೇಳಲಾಗಿ 1) ಶಿವಕುಮಾರ @ ಶಿವ, ಬಿ ,ಹೊಸೂರು ಗ್ರಾಮ, ಮಂಡ್ಯ, 2) ಕುಮಾರಸ್ವಾಮಿ @ಹುಲಿವಲ ಚೇತನ, ಹುಲಿವಲ ಹೊಳೆನರಸೀಪುರ 3)ಅಜಯ್ ಕುಮಾರ್ ಸಿಂಗ್ @ ಬಾಬು ಮರ್ಲೆ, ಬೆಂಗಳೂರು, 4) ಶೀವಕುಮಾರ @ ಶಿವು , ಅಜಾದ್ ನಗರ, ಮೂಡಿಗೆರೆ ಎಂದು ತಿಳಿಸಿದ್ದು ಸದರಿಯವರುಗಳು ಮಾರಾಕಾಸ್ರ್ತಗಳನ್ನು ಇಟ್ಟುಕೊಂಡು ರಾತ್ರಿ ಸಂಚರಿಸುವ ವಾಹನಗಳನ್ನು ನಿರ್ಜನ ಪ್ರದೇಶಗಳಲ್ಲಿ ಅಡ್ಡಗಟ್ಟಿ ಮಾರಾಕಾಸ್ರ್ತಗಳನ್ನು ತೋರಿಸಿ ಹೆದರಿಸಿ ಅವರಿಂದ ಹಣ/ಬಂಗಾರವನ್ನು ಸುಲಿಗೆ ಮಾಡಲು ಹೊಂಚುಹಾಕುತ್ತಿರುವುದರಿಂದ , ಸದರಿಯವರುಗಳ ಕೈಯಲ್ಲಿ ಇದ್ದ ಟಾರ್ಚ್, ಕಬ್ಬಿಣದ ರಾಡ್, ಖಾರದ ಪುಡಿ, ಡ್ರ್ಯಾಗರ್, ಹಾಗೂ 2 ಪಿಸ್ತೂಲ್ ಗಳನ್ನು ವಶಪಡಿಸಿಕೊಂಡು ಆರೋಪಿತರುಗಳ ವಿರುದ್ದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿ.ಎಸ್.ಐ.ರವಿ. ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 17-07-2021 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080