ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಯತ್ನ ಪ್ರಕರಣ.

ಮಲ್ಲಂದೂರು ಪೊಲೀಸ್ ಠಾಣೆ.

ದಿನಾಂಕ 17-08-2021 ರಂದು ಗೀತಾ ರವರು ನೀಡಿದ ಹೇಳಿಕೆಯ ದೂರೇನೆಂದರೆ ನಾನು ಈಗ್ಗೆ 15 ವರ್ಷಗಳ ಹಿಂದೆ ಮಲ್ಲಂದೂರಿನ ಮುರುಗೇಶನೊಂದಿಗೆ  ವಿವಾಹವಾಗಿದ್ದು ,ನನ್ನ ಗಂಡನಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ಪ್ರತಿದಿನ ಕುಡಿದು ಬಂದು ಬೈಯುವುದು, ಹೊಡೆಯುವುದು ಮಾಡುತ್ತಿದ್ದರು. ದಿನಾಂಕ 16-08-2021 ರಂದು ಸಂಜೆ 04-30 ಗಂಟೆ ಸಮಯದಲ್ಲಿ ವಿಪರೀತ ಮದ್ಯಪಾನ ಮಾಡಿಕೊಂಡು ಬಂದು ಗಲಾಟೆ ಮಾಡಿದ್ದಲ್ಲದೆ, ಕುಡಿಯಲಿಕ್ಕೆ ಹಣ ಕೊಡು ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇನೆಂದು ಕೊಲೆ ಮಾಡುವ ಉದ್ದೇಶದಿಂದ ಚಾಕುವನ್ನು ತೆಗೆದುಕೊಂಡು ಬಂದು ನನ್ನ ಎಡಕೆನ್ನೆಯ ಮೇಲೆ ಬಲವಾಗಿ ತಿವಿದು ರಕ್ತಗಾಯ ಮಾಡಿದ್ದು ಮುರುಗೇಶನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಮೇರೆಗೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ನಗರ  ಪೊಲೀಸ್ ಠಾಣೆ .

ದಿನಾಂಕ: 17/08/2021 ಬೆಳಿಗ್ಗೆ 04-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಟಿಪ್ಪುನಗರದ ಆಟೋ ಸರ್ಕಲ್ ಹತ್ತಿರ ಸಿಖಂದರ್ಬಿನ್ ಉಬೇದುಲ್ಲಾ ಎಂಬಾತನು ತನ್ನ ಮನೆಯಲ್ಲಿ ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು ,ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿಯ ವಶದಲ್ಲಿದ್ದ ಸುಮಾರು 200 ಕೆಜಿಯಷ್ಟು ದನದ ಮಾಂಸ , ಒಂದು ತೂಕ ಮಾಡುವ ಯಂತ್ರ, 4 ಕಬ್ಬಿಣದ ಕತ್ತಿ, 2 ಕಬ್ಬಿಣದ ಕೊಕ್ಕೆ ಮತ್ತು ಒಂದು ಮುಸ್ಕುಲ್ಲಾ (ಚರ್ಮವನ್ನು ಸುಲಿಯುವ ಸಾಧನ) ಇವುಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ದೇವರಾಜ ಸಿದ್ದಣ್ಣ ಬಿರದರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಕರ್ನಾಟಕ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020

ಕೊಪ್ಪ  ಪೊಲೀಸ್ ಠಾಣೆ .

ದಿನಾಂಕ 17-08-2021 ರಂದುಬೆಳಗಿನ ಜಾವ 01-30 ಗಂಟೆ ಸಮಯದಲ್ಲಿ ಮೇಲಿನಪೇಟೆ ವೆಲ್ ಕಮ್ ಗೇಟಿನ ಹಿಂದೆ ಅಂಬೇಡ್ಕರ್ ರಸ್ತೆಯ ಹತ್ತಿರ ಬರುತ್ತಿದ್ದ ಗೂಡ್ಸ್ ವಾಹನವನ್ನು ನಿಲ್ಲಿಸಿ ಅದರಲ್ಲಿದ್ದವರ ಹೆಸರು ವಿಳಾಸ ಕೇಳಲಾಗಿ ಪ್ರಶಾಂತ ಬಿನ್ ಸೋಲಮನ್, ನ್ಯೂಟೌನ್ ಭದ್ರಾವತಿ  ಹಾಗೂ ಇನ್ನೊಬ್ಬ ಫಾರೂಕ್ ಬಿನ್ ಅಬ್ದುಲ್, ಹುಣಸೇಕಟ್ಟೆ, ಭದ್ತಾವತಿ ಟೌನ್ ಎಂದು ತಿಳಿಸಿದ್ದು , ವಾಹನವನ್ನು ಪರಿಶೀಲಿಸಲಾಗಿ ಕೆಎ-18 ಬಿ- 5571 ಗೂಡ್ಸ್ ವಾಹನವಾಗಿದ್ದು ಅದರೊಳಗೆ ಒಂದು ಕಪ್ಪು ಬಣ್ಣದ ಹೋರಿ ಇದ್ದು ,ಸದರಿ ಆರೋಪಿತರುಗಳು ಕೊವಿಡ್ -19 ಸಾಂಕ್ರಾಮಿಕ ರೋಗದ ನಿಮಿತ್ತ ಸರ್ಕಾರದ ನಿಯಾಮಾವಳಿಗಳನ್ನು ಮೀರಿ ರಾತ್ರಿ ವೇಳೆಯಲ್ಲಿ ವಾಹನದಲ್ಲಿ ಸಂಚರಿಸಿ ದನಗಳನ್ನು ಕಳ್ಳತನ ಮಾಡುವಾಗ ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೆ.  ದನಗಳನ್ನು ಕಳ್ಳತನ ಮಾಡಿ ಅವುಗಳನ್ನು ಕಡಿದು ಮಾಂಸಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ ಆರೋಪಿತರುಗಳ  ವಿರುದ್ದ  ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀನಾಥರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ

ತರೀಕೆರೆ   ಪೊಲೀಸ್ ಠಾಣೆ

ದಿನಾಂಕ 16/08/2021 ರಂದು ಸಂಜೆ 06-15 ಗಂಟೆ  ಸಮಯದಲ್ಲಿ ತರೀಕೆರೆ ಪಟ್ಟಣದ ವಿಜಯನಗರ ಬಡಾವಣೆಯ 5 ನೇ ಕ್ರಾಸ್ ಬಳಿ ಅಕ್ರಮವಾಗಿ ಮಟ್ಕಾ ಜೂಜಾಟವಾಡಿಸುತ್ತಿದ್ದ ಪ್ರಕಾಶ ಬಿನ್ ರಾಮಕೃಷ್ಣಪ್ಪ, ಕೋಡಿಕ್ಯಾಂಪ್ ವಾಸಿ ಈತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಸಂಖ್ಯೆಗಳನ್ನು ಬರೆದಿರುವ ಒಂದು ಮಟ್ಕಾ ಚೀಟಿ, ಒಂದು ಪೆನ್ ಹಾಗೂ 2460/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ದ   ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಪುದ್ದು. ಕೆ. ಡಿ.ಸಿ.ಐ.ಬಿ.ವಿಭಾಗ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

 ಪಂಚನಹಳ್ಳಿ ಪೊಲೀಸ್ ಠಾಣೆ

ದಿನಾಂಕ 16/08/2021 ರಂದು 15-40 ಗಂಟೆ ಸಮಯದಲ್ಲಿ ಕಡೂರು ತಾಲ್ಲೂಕಿನ ಉಪ್ಪಿನಹಳ್ಳಿ ಕೆರೆಯ ಏರಿಯ ಹಿಂಭಾಗದಲ್ಲಿರುವ ಶ್ರೀ. ಭೈರವೇಶ್ವರ ದೇವಾಲಯದ ಹತ್ತಿರದಲ್ಲಿ ಜಮೀನಿಗೆ ಹೋಗುವ ದಾರಿಯ ಹತ್ತಿರ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಢುತ್ತಿದು ಸುರೇಶ ಎಂಬುವವನನ್ನು  ವಶಕ್ಕೆ ಪಡೆದು ಆರೋಪಿತ ಹೊಂದಿದ್ದ 49 ಪ್ಯಾಕ್ 90 ಎಂ.ಎಲ್ ನ ರಾಜಾವಿಸಿ ್ಕಪ್ಯಾಕೆಟ್ ಗಳನ್ನು ಗಳನ್ನು ವಶಕ್ಕೆ ಪಡೆದಿದ್ದು ಮದ್ಯದ ಅಂದಾಜು ಬೆಲೆ 1721/ - ರೂ ಆಗಿರುತ್ತೆ, ಆರೋಪಿ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಶ್ರೀಮತಿ.ಶೋಭಾ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್  ಠಾಣೆ.

ದಿನಾಂಕ ;16/08/2021 ರಂದು ಪಿರ್ಯಾದಿ ಶ್ರೀ ಪ್ರವೀಣ್ ರವರು ನೀಡಿದ ದೂರಿನಲ್ಲಿ ನನ್ನ ತಂಗಿ ಪವಿತ್ರ, 22 ವರ್ಷ ಈಕೆಯು ಈಗ್ಗೆ ಒಂದೂವರೆ ತಿಂಗಳಿನಿಂದ ಚಿಕ್ಕಮಗಳೂರು ನಗರದ ಕೆಂಪನಹಳ್ಳಿಯಲ್ಲಿ ನಾರಾಯಣಗೌಡರವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದು,  ದಿನಾಂಕ 15/08/2021 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಊಟ ಮಾಡಿ ನಾಯಿಗೆ ಊಟ ಹಾಕುತ್ತೇನೆಂದು ಮನೆಯಿಂದ ಹೊರಗೆ ಹೋದವಳು ಇಲ್ಲಿಯವರೆಗೂ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ತಂಗಿ ಪವಿತ್ರ, 22 ವರ್ಷ, 5.0 ಅಡಿ ಎತ್ತರ, ದುಂಡುಮುಖ, ಮೈಬಣ್ಣ -ಎಣ್ಣೆಗೆಂಪು ಮೈಬಣ್ಣ, ಬಾಷೆ ಕನ್ನಡ ಮತ್ತು ತಮಿಳು, ಮೈಕಟ್ಟು ಸಾದಾರಣ ಧರಿಸಿದ ಉಡುಪು; ಪಿಂಕ್ ಟಾಪ್ ಹಾಗೂ ಬಿಳಿ ಲೆಗ್ಗಿನ್ ಧರಿಸಿರುತ್ತಾಳೆ,  ಎಂದು ಕಾಣೆಯಾಗಿರುವ ನನ್ನ ತಂಗಿಯನ್ನು ಪತ್ತೆ ಮಾಡಿಕೊಡುವಂತೆ ಕೋರಿದ ದೂರಿನ ಮೇರೆಗೆ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಬಾಳೆಹೊನ್ನೂರು   ಪೊಲೀಸ್ ಠಾಣೆ

ದಿನಾಂಕ 15/08/2021 ರಂದು ರಾತ್ರಿ 11-45 ಗಂಟೆ ಸಮಯದಲ್ಲಿ ಬಾಳೆಹಿತ್ಲು ಗ್ರಾಮದ ಡ್ರೈವರ್ ರಾಜುರವರ  ಮನೆಯ ಬಳಿಯಿರುವ ಕಾಫಿತೋಟದೊಳಗೆ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಜೂಜಾಡುತ್ತಿದ್ದ 5 ಜನರನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಟಾರ್ಪಲ್, ಒಂದು ಟಾರ್ಚ್ , 3 ಮೊಬೈಲ್ ಗಳು  ಹಾಗೂ 11830 /- ರೂ ನಗದು ಹಣವನ್ನು  ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ   ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿಪಿ.ಎಸ್.ಐ. ನಿತ್ಯಾನಂದಗೌಡ .ಪಿ.ಡಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 17-08-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080