ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಹರಿಹರಪುರ ಪೊಲೀಸ್ ಠಾಣೆ.

ದಿನಾಂಕ 16-01-2022 ರಂದು ಹರಿಹರಪುರ ಪೊಲೀಸ್ ಠಾಣೆಯ ವ್ಯಾಫ್ತಿಯ ಚಾಲ್ಮನೆ ಗ್ರಾಮದ ಬಾನೋಳಿಬೈಲ್ ನಲ್ಲಿ ಪ್ರಕಾಶ ಎಂಬುವನು ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದು  ಅರೋಪಿಯನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 22 ಟೆಟ್ರಾಪ್ಯಾಕ್ ಮದ್ಯ,  180 ಎಂ.ಎಲ್.ನ 3 ಟೆಟ್ರಾಪ್ಯಾಕ್ ಮದ್ಯ, 330 ಎಂ.ಎಲ್. ನ 15 ಟೆಟ್ರಾಪ್ಯಾಕ್ ಮದ್ಯ ವನ್ನು ಅಂದಾಜು ಬೆಲೆ 2,912/- ರೂ ಗಳಾಗಿದ್ದು, ಅಮಾನತ್ತುಪಡಿಸಿಕೊಂಡು ಬಂದು ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ವಿಠಲ್ ವಾಡವಾನೆ ಮತ್ತು ಸಿಬ್ಬಂದಿಯವರಾಧ ಮಾರುತಿ ಖರಾತ, ಪ್ರೇಮ್ ಸಾಗರ್ ನಾಯ್ಕ, ರೂಪ ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ಹತ್ಯಾ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ16-01-2022  ರಂದು ಸಂಜೆ ಚಿಕ್ಕಮಗಳೂರು ನಗರದ ಶಂಕರಪುರ ಎರಡನೇ ತಿರುವಿನ ನಿಸಾರ್ ಅಹ್ಮದ್ ರವರ ಮನೆಯ ಪಕ್ಕದ ತೆಂಗಿನ ಮರ ಇರುವ ಮನೆಯಲ್ಲಿ ಅಕ್ರಮವಾಗಿ ಗೋ ಮಾಂಸವನ್ನು ಮಾರಾಟ ಮಾಡುತ್ತಿದ್ದ ನಿಸಾರ್ ಅಹ್ಮದ್ ಬಿನ್ ಬಾಷಾ ಸಾಬ್ ಮತ್ತು ವಿಜಯ@ ವಿಜಿ ಬಿನ್ ಸುಂದರ್  ರವರುಗಳನ್ನು ವಶಕ್ಕೆ ಪಡೆದು ಅರೋಪಿತರು ಅಕ್ರಮವಾಗಿ ಹೊಂದಿದ್ದ 60 ಕೆ.ಜಿ. ತೂಕದ ದನದ ಮಾಂಸ ಮತ್ತು ದನದ ಅಂಗಾಂಗಗಳನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಜೋಸೆಫ್ ಡಿಸೋಜಾ ಎ.ಎಸ್.ಐ. ಶೇಷಪ್ಪಶೆಟ್ಟಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:16-01-2022  ರಂದು  ನಗರ ಠಾಣಾ ಸರಹದ್ದಿನ ಸಂತೆ ಮೈದಾನದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅರೋಪಿತರಾದ 1] ಪ್ರಕಾಶ್ ಬಿನ್ ಕೃಷ್ಣಪ್ಪ, 2] ಯುವರಾಜ ಬಿನ್ ಚಂದ್ರು 3] ಮುಬಾರಕ್ ಬಿನ್ ಫಾರೂಕ್ 4] ಮಹದೇವ ಬಿನ್ ಗುರುಸಿದ್ದಪ್ಪ 5] ಅಶೋಕ ಬಿನ್ ಕಾಳ 6] ಶಿವರಾಜು ಬಿನ್ ಬೊಜಮೆಸ್ತ್ರಿ 7] ಪ್ರವೀಣ್ ಬಿನ್ ಕಿಟ್ಟು ರವರನ್ನು  ವಶಕ್ಕೆ ಪಡೆದು ಅರೋಪಿತನು ಜೂಜಾಡಲು ಉಪಯೋಗಿಸಿದ 5370/- ರೂ ನಗದು, 52 ಇಸ್ಪಿಟ್ ಎಲೆಗಳು, ಹಾಗೂ ಒಂದು ಪ್ಲಾಸ್ಟಿಕ್ ಟಾರ್ಪಲ್ ಅನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಜೋಸೆಫ್ ಡಿಸೋಜಾ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:16-01-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ರಾಜು ಬಿ, ಬಿನ್ ಬಸವರಾಜು ಹೆಸಗಲ್ ಗ್ರಾಮದ ಚಂದ್ರೇಗೌಡ ರವರ ಕೂಲಿ ಲೈನ್ ಮನೆಯಲ್ಲಿ ವಾಸ ರವರು ನೀಡಿದ ದೂರಿನಲ್ಲಿ ದಿನಾಂಕ:27/12/2021 ರಂದು ಪಿರ್ಯಾದಿಯ ಹೆಂಡತಿ ಕೂಲಿ ಲೈನ್ ಮನೆಯಲ್ಲಿ ಮಗಳೊಂದಿಗೆ ಇದ್ದವಳು ಕೆಲಸ ಮುಗಿಸಿ ವಾಪಾಸ್ಸು ಬಂದು ನೋಡಲಾಗಿ, ತನ್ನ ಹೆಂಡತಿ ಸುಮ ಮಗಳು ಮಾನಸಳನ್ನು ಕರೆದುಕೊಂಡು ಮನೆಯಿಂದ ಹೋಗಿದು,್ದ ಈ ವರೆಗೂ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಸುಮಾ ಕೊಂ ರಾಜು 27 ವರ್ಷ , 5 ಅಡಿ ಎತ್ತರ , ಎಣ್ಣೆಗೆಂಪು ಬಣ್ಣ ಮೈ ಬಣ್ಣ ಸಾದಾರಣ ಮೈಕಟ್ಟು, ಕನ್ನಡ ಮತ್ತು ಹಿಂದಿ ಬಾಷೆ ಮಾತಾನಾಡುತ್ತಾಳೆ. ಮಗಳು ಮಾನಸ 6 ವರ್ಷ, ಕೆಂಪು ಬಣ್ಣದ ಪ್ರಾಕ್ ಧರಿಸಿರುತ್ತಾಳೆ. ಕಾಣೆಯಾಗಿರುವ ಹೆಂಡತಿ ಮತ್ತು ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 17-01-2022 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080