ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

 ದಿನಾಂಕ 16-02-22 ರಂದು ಅಲ್ದೂರು ಠಾಣಾ ಸರಹದ್ದಿನ ತೋರಣಮಾವು ಗ್ರಾಮದಿಂದ ಕೋಟೆವೂರು ಗ್ರಾಮದ ಕಡೆಗೆ ಹಾದು ಹೋಗಿರುವ ಟಾರು ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಅಂದರ್ -ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1] ತೆಜೇಶ್ ಸಿ.ಅರ್. ಬಿನ್ ರಾಜು 2] ರಾಹೀಲ್ ಷರೀಪ್ ಬಿನ್ ಅಸ್ಲಮಾಂ ಷರೀಪ್ 3] ಮಂಜುನಾಥ ಡಿ.ಆರ್. ಬಿನ್ ಲೇಟ್ ರಾಮೇಗೌಡ 4] ಮಹೇಶ ಬಿನ್ ಧರ್ಮೇಗೌಡ  5] ಮೊಹಮ್ಮದ್ ಪೈರೋಜ್ ಬಿನ್ ಮೊಹಮ್ಮದ್ ಅಲಿ 6] ಪೂರ್ಣೇಶ ಕೆ.ಸಿ. ಬಿನ್ ಚಂದ್ರೇಗೌಡ 7] ಮೊಹಮ್ಮದ್ ಸಲೀಂ ಬಿನ್ ಮೊಯ್ದಿನ್ ರವರನ್ನು ವಶಕ್ಕೆ ಪಡೆದು ಆರೋಫಿತರು ಇಸ್ಪೀಟ್ ಆಡಲು ಬಳಸಿದ 52 ಇಸ್ಪೀಟ್ ಎಲೆಗಳು, 17330/- ರೂ ನಗದು ಹಣ, ಹಾಗು 2 ಕಾರುಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಅಲ್ದೂರು ಠಾಣೆಯಲ್ಲಿ ಅರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಅಲ್ದೂರು ವೃತ್ತ ನಿರೀಕ್ಷಕರಾದ ಶ್ರೀ ಸತ್ಯನಾರಾಯಣ,. ಕೆ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;17-02-2022 ರಂದು ಶ್ರೀಮತಿ ಸುಪಿಯಾ ಖಾನ ಕೋಂ ಮಾಜಂ ಆಲಿ ಆರ್.ಶಿಲ್ ಎಸ್ಟೇಟ್ ಹೆಸ್ಗಲ್  ಗ್ರಾಮ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಗಂಡ ಮಾಜಂ ಆಲಿ ಇವರು ಆರ್.ಶಿಲ್ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದು  ದಿನಾಂಕ 01-02-2022 ರಂದು ಬೆಳಿಗ್ಗೆ ಮೂಡಿಗೆರೆ ಪೇಟೆಗೆ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ಕಾಣೆಯಾಗಿದ್ದು ಹುಡುಕಲಾಗಿ ಇಲ್ಲಿಯವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಮಾಜಂ 23 ವರ್ಷ, 5.2 ಅಡಿ ಎತ್ತರ,  ಸಾದಾರಣ ಮೈಕಟ್ಟು, ಗೋದಿ ಬಣ್ಣ  ಹಿಂದಿ ಬೆಂಗಾಲಿ ಭಾಷೆ ಮಾತನಾಡುತ್ತಾನೆ. ಕಾಣೆಯಾಗಿರುವ ತನ್ನ ಗಂಡ ಮಾಜಂ ಆಲಿ ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ;17-02-2022 ರಂದು ಚಂದ್ರಪ್ಪ ಬಿ.ಜಿ. ಬಿನ್ ಗೋವಿಂದೇಗೌಡ ಹೆನ್ನಂಗಿ ಆಳೇಹಳ್ಳಿ  ಗ್ರಾಮ ನ.ರಾ.ಪುರ  ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ವಿನುತ ಬಿ.ಸಿ. ಇವಳು ದಿನಾಂಕ 16-02-2022 ರಂದು ಬೆಳಿಗ್ಗೆ ಮನೆಯಲ್ಲಿ ಇದ್ದವಳು ಮನೆಯಿಂದ ಯಾರು ಇಲ್ಲದ ವೇಳೆಯಲ್ಲಿ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ಕಾಣೆಯಾಗಿದ್ದು ಹುಡುಕಲಾಗಿ ಇಲ್ಲಿಯವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗಳು ವಿನುತಾ ಬಿ.ಸಿ. ಇವಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನ.ರಾ.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 17-02-2022 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080