ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:16/03/2022 ರಂದು ಪಿರ್ಯಾದಿ  ರಮೇಶ್ ನಾಯ್ಕ ಬಿನ್ ನಾಗ್ಯನಾಯ್ಕ  ಬಾವಿಕೆರೆ, ಲಕ್ಕವಳ್ಳಿ ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:15/03/2022 ರಂದು ಪಿರ್ಯಾದಿ ಚಿಕ್ಕಪ್ಪನ ಮಗನಾದ ಮಂಜಾನಾಯ್ಕ ಇವರು ಬಾವಿಕೆರೆಯಿಂದ ಟಿ.ಎಂ ರಸ್ತೆಯ ಮಾರ್ಗದಲ್ಲಿ ರಂಗೇನಹಳ್ಳಿ ಕಡೆಗೆ  ಶಿವಾನಾಯ್ಕ ಬಿನ್ ಶೋಬ್ಯಾನಾಯ್ಕ ರವರೊಂದಿಗೆ ಕೆಎ-18-ಇ-8015 ರ ಬೈಕಿನಲ್ಲಿ  ಹೊಸಮನೆ ಗೇಟ್ ಸಮೀಪ ಬರುತ್ತಿರುವಾಸ ಲಕ್ಕವಳ್ಳಿ ಕಡೆಯಿಂದ ಬಾವಿಕೆರೆಗೆ ಕಡೆಗೆ ಕೆಎ-14-ಪಿ-5356 ಒಮಿನಿ ವಾಹನದ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಂಜಾನಾಯ್ಕ ಚಾಲಾಯಿಸುತ್ತಿದ್ದ  ಬೈಕಿಗೆ ಡಿಕ್ಕಿ ಪರಿಣಾಮ ಮಂಜಾನಾಯ್ಕ ಮತ್ತು ಶಿವಾನಾಯ್ಕರವರಿಗೆ ಪೆಟ್ಟಾಗಿದ್ದು ಇಬ್ಬರಿಗೂ ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು,   ಮಂಜಾನಾಯ್ಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಕೆಎ-14-ಪಿ-5356 ಒಮಿನಿ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:16/03/2022 ರಂದು ಪಿರ್ಯಾದಿ  ಸಿ.ಎಂ. ಲೋಹಿತ್ ಬಿನ್ ಸಿ.ಜಿ ಮುರುಗೇಶಪ್ಪ  ಚನ್ನಾಪುರ ಗ್ರಾಮ ಅಜ್ಜಂಫುರ ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:16/03/2022 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ  ಪಿರ್ಯಾದಿ ತಂದೆ ಸಿ.ಜಿ. ಮುರಗೇಶಪ್ಪ ರವರು ರಸ್ತೆ ದಾಟಿ ಮನೆಯ ಕಡೆ ಬರುತ್ತಿರುವಾಗ ಕೆಎ-17-ಎಫ್-1693 ಕೆ.ಎಸ್.ಆರ್.ಟಿ. ಬಸ್ ಚಾಲಕ ಬಸ್ಸನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪರಿಣಾಮ ಮುರಗೇಶಪ್ಪ ರವರಿಗೆ ಪೆಟ್ಟಾಗಿದ್ದು ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು  ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು,  ಅಪಘಾತ ಉಂಟು ಮಾಡಿದ ಕೆಎ-17-ಎಫ್-1693 ಕೆ.ಎಸ್.ಆರ್.ಟಿ. ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ:16/03/2022 ರಂದು ಪಿರ್ಯಾದಿ  ಮಾರಣ್ಣ ಬಿನ್ ಕರಿಯಪ್ಪ ಲಿಂಗದಹಳ್ಳಿ ಗ್ರಾಮ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ:16/03/2022 ರಂದು ಮದ್ಯಾಹ್ನ 1-00  ಗಂಟೆ ಸಮಯದಲ್ಲಿ  ಪಿರ್ಯಾದಿ ಮಗಳು ಭಾಗ್ಯ 19 ವರ್ಷ, ಇವಳು ಸ್ನೇಹಿತರ ಬಳಿ ನೋಟ್ಸ್ ಪಡೆದುಕೊಂಡು ಬರುತ್ತೇನೆಂದು ಮನೆಯಿಂದ ಹೋದವಳು ಮನೆಗೆ ಈವರೆಗೂ ವಾಪಸ್ಸು ಬಾರದೇ ಕಾಣೆಯಾಗಿದ್ದು ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 17-03-2022 11:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080