ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ:17/04/2022 ರಂದು ಪಿರ್ಯಾದಿ ಮಹಮ್ಮದ್ ಇರ್ಫಾನ್ ಬಿನ್ ಅಪ್ತಬ್ ಅಹಮ್ಮದ್, ವಾಸ ತುಮಕೂರು ಟೌನ್,  ಇವರು ನೀಡಿದ ದೂರಿನಲ್ಲಿ, ದಿನಾಂಕ:16/04/2022 ರಂದು ರಾತ್ರಿ ಪಿರ್ಯಾದಿಯ ಮತ್ತು ಇತರೆ 3 ಜನರು ಕೆಎ-16-ಎನ್-7788 ಸ್ಕಾರ್ಪಿಯೋ ಕಾರಿನಲ್ಲಿ ಪಿರ್ಯಾದಿ ತಮ್ಮ ಮೊಹಮ್ಮದ್ ಫಾರನ್ ಚಾಲನೆ ಮಾಡಿಕೊಂಡು ಮಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಹೋಗುತ್ತಿರುವಾಗ ಎನ್.ಅರ್. ಪುರದಿಂದ ಮುಂದೆ, ಹೋಗುತ್ತಿರುವಾಗ ದಿನಾಂಕ:17-04-2022 ರಂದು ಬೆಳಿಗ್ಗೆ 1-00 ಗಂಟೆ ಸಮಯದಲ್ಲಿ ನ.ರಾ.ಪುರ ಶಿವಮೊಗ್ಗ ರಸ್ತೆಯ ಮಡಬೂರು ಗ್ರಾಮದ ಹತ್ತಿರ ಬರುತ್ತಿರುವಾಗ ಕಾರನ್ನು  ದುಡುಕು ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ, ಕಾರು ಚಾಲಕನ ನಿಯಂತ್ರಣ ತಪ್ಪಿ ಒಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಪಿರ್ಯಾದಿಗೆ, ಸಿದ್ದಿಕ್ ಹುಸೇನ್, ಅಸ್ಗರ್ ರವರಿಗೆ ಪೆಟ್ಟಾಗಿದ್ದು & ಪಿರ್ಯಾದಿ ತಮ್ಮನಿಗೆ ತೀವ್ರ ತರಹದ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು. ಅಪಘಾತ ಉಂಟು ಮಾಡಿದ ಮೊಹಮ್ಮದ್ ಫಾರನ್ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:16/04/2022 ರಂದು ಬಾಳೆಹೊನ್ನೂರು ಠಾಣಾ ಸರಹದ್ದಿನ ಸ್ಥಿರೂರು ಗ್ರಾಮದ ಕುಕ್ಕುಡಿಗೆ ರಾಮೇಗೌಡ ರವರ ತೋಟದ ಕೂಲಿ ಲೈನ್ ಮನೆಯಲ್ಲಿ ಕೊನೆಯ ಜಗುಲಿಯಲ್ಲಿ 4-5 ಜನರು ದನದ ಮಾಂಸವನ್ನು ಕಡಿದಿರುವ ಬಗ್ಗೆ  ಮಾಹಿತಿ ಮೇರೆಗೆ ಬಾಳೆಹೊನ್ನೂರು ಠಾಣಾ ಸಿಬ್ಬಂದಿಯವರಾದ ಬಸವರಾಜು ಬಿ ಈಟಿ ಮತ್ತು ಕಾರ್ತಿಕ್ ರವರು ಸ್ಥಳಕ್ಕೆ ಹೋಗಿ ನೋಡಿದಾಗ ಕೂಲಿ ಲೈನ್ ಮನೆಯಲ್ಲಿ 4-5 ಇದ್ದವರು ಪಿರ್ಯಾದಿಯವರನ್ನು ಕಂಡು ಓಡಿ ಹೋಗಿದ್ದು ಅದರಲ್ಲಿ ಇಬ್ಬರನ್ನು ಹಿಡಿದುಕೊಂಡಿದ್ದು ಅವರು ಸಹ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ, ಪುನಃ ಅವರನ್ನು ಹಿಡಿಯಲು ಪ್ರಯತ್ನಿಸಿದ್ದು, ಆ ವೇಳೆಗೆ ಅಲ್ಲಿಗೆ ರಾಮೇಗೌಡರವರ ಪಕ್ಕದ ಮನೆ ವಾಸಿ ರತೀಶ್ ಎಂಬುವರು ಬಂದು ಪಿರ್ಯಾದಿಯವರಿಗೆ ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ. ನಂತರ ಸ್ಥಳದಲ್ಲಿ ಇದ್ದ ಬಿಳಿ ಪ್ಲಾಸ್ಟಿಕ್ ಚೀಲದ ಮೇಲೆ ದನದ ಮಾಂಸವನ್ನು ಕಡಿದು ಹಾಕಿದ್ದು ಮಾಂಸವು ಸುಮಾರು 100 ಕೆ.ಜಿ ಯಷ್ಟು ಇದ್ದು, ಆರೋಪಿತರು ಯಾವುದೋ ದನವನ್ನು ಕಳ್ಳತನ ಮಾಡಿಕೊಂಡು ಬಂದು ದನವನ್ನು ಕಡಿದು ಮಾಂಸವನ್ನು ಮಾರಾಟ ಮಾಡಿರುವುದು ಕಂಡು ಬಂದಿದ್ದು, ಅರೋಫಿತರ ವಿರುದ್ದ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ರತೀಶ್ ಇವರ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 17-04-2022 08:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080