ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ
ಗ್ರಾಮಾಂತರ    ಪೊಲೀಸ್  ಠಾಣೆ
ದಿನಾಂಕ:16/05/2021 ರಂದು ಗ್ರಾಮಾಂತರ  ಠಾಣಾ ವ್ಯಾಪ್ತಿಯಲ್ಲಿ  ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಕೈಮರದಿಂದ ಬ್ಯಾಗದಹಳ್ಳಿ ಕಡೆಗೆ ಹೋಗುವ ರಸ್ತೆ ಬದಿಯಲ್ಲಿರುವ ಚೆಕ್ ಪೋಸ್ಟ್ ಬಳಿಯಲ್ಲಿ  ಯಾರೋ ಒಬ್ಬ ಆಸಾಮಿಯು   ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಒಬ್ಬ ಆಸಾಮಿಯು  ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆತನ ಹೆಸರು ದೀಪು ಬಿನ್ ದೊಡ್ಡರಂಗಶೆಟ್ಟಿ  ಎಂದು ತಿಳಿಸಿದ್ದು ಆತನ ಬಳಿಯಿದ್ದ 90 ಎಂ.ಎಲ್ ನ ಓಲ್ಡ್ ತವೆರಿನ್ ಡಿಲೆಕ್ಸ್ ವಿಸ್ಕಿ ಯ 20 ಮದ್ಯದ ಪೌಚ್ ಗಳು, 180ಎಂ.ಎಲ್ನ ಓಲ್ಡ್ ತವೆರಿನ್ ವಿಸ್ಕಿಯ 8 ಪೌಚ್ ಗಳು ,ಒಟ್ಟು ಮದ್ಯದ ಮೌಲ್ಯ  1,396/- ರೂ ಆಗಿದ್ದು ಸದರಿ  ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ
ನಗರ  ಪೊಲೀಸ್  ಠಾಣೆ

ದಿನಾಂಕ: 17/05/2021 ರಂದು ಪಿರ್ಯಾದುದಾರರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದು ಕೊನೆಯ ಮಗ ಶಬ್ಬೀರ್,28 ವರ್ಷ ಟೈಲ್ಸ್ ಕೆಲಸಮಾಡಿಕೊಂಡಿದ್ದು  ಆತನಿಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದು ನನಗೆ ಈಗ ಮದುವೆ ಬೇಡ ಎಂದು ಹೇಳುತ್ತಿದ್ದು ಈ ವಿಚಾರಕ್ಕೆ  ನನಗೂ ಹಾಗೂ ಅವನ ಮದ್ಯೆ ಮನಸ್ತಾಪ ಉಂಟಾಗಿ ಟೈಲ್ಸ್ ಕೆಲಸಕ್ಕೆ ಹೋಗಿ ಬರುತ್ತೆನೆಂದು ಈಗ್ಗೆ 4 ತಿಂಗಳ ಹೋದವನು ಈವರೆವಿಗೂ  ಬಂದಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 

ಇತ್ತೀಚಿನ ನವೀಕರಣ​ : 17-05-2021 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080