ಮರಳು ಕಳ್ಳತನ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ.
ದಿನಾಂಕ:17/06/2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಚಟ್ನಹಳ್ಳಿ ಗೌತಹಳ್ಳಿ ಗ್ರಾಮದ ಚೀಕನಹಳ್ಳಿ-ಕನ್ನಾಫುರ ರಸ್ತೆಯಲ್ಲಿ ಅಕ್ರಮವಾಗಿ ಕೆಎ-13-ಬಿ-8914 ರ ಟಿಪ್ಪರ್ ಲಾರಿಯಲ್ಲಿ ಮರಳನ್ನು ಯಾವುದೇ ಪರವಾನಗಿ ಇಲ್ಲದೆ, ಕಳವು ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದು, ಸದರಿ ಟಿಪ್ಪರ್ ಅನ್ನು ಮರಳು ಸಮೇತ ಮರಳಿನ ಬೆಲೆ ಸುಮಾರು 10,000/- ರೂ ಗಳಾಗಿರುತ್ತದೆ. ಅಮಾನತ್ತುಪಡಿಸಿಕೊಂಡು ಬಂದು ಅರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ಆರ್ದಶ ಎಂ.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಅಕ್ರಮ ಗೋ ಮಾಂಸ ಸಾಗಾಟ ಪ್ರಕರಣಗಳು
ಕೊಪ್ಪ ಪೊಲೀಸ್ ಠಾಣೆ.
ದಿನಾಂಕ:16/06/2022 ರಂದು ಕೊಪ್ಪ ಠಾಣಾ ಸರಹದ್ದಿನ ಬಿಂತ್ರವಳ್ಳಿ ಗ್ರಾಮದ ಮಹೇಶ್ ಶೆಟ್ಟಿರವರ ಜಾಗದ ಎದುರಿಗೆ ಕೊಪ್ಪ - ಎನ್. ಆರ್. ಪುರ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ, ಕೆಎ-17-ಇವೈ-1141 ಸ್ಕೂಟಿಯಲ್ಲಿ ಅಬ್ದುಲ್ ಅಜೀಜ್ ಎ ಬಿನ್ ಅಬ್ದುಲ್ ರೆಹಮಾನ್ ಭದ್ರಾವತಿ ಶಿವಮೊಗ್ಗ ವಾಸಿ, ಈತನು ಅಕ್ರಮವಾಗಿ 20ಕೆಜಿ.610 ಗ್ರಾಂ. ದನದ ಮಾಂಸವನ್ನು ಮತ್ತು ಕೆಎ-18 ಇಎಫ್-5395 ಸ್ಕೂಟಿಯಲ್ಲಿ, ಮಹಮದ್ ತೌಶಿಪ್ ಬಿನ್ ಎಂ.ಎಂ. ಹಸನಬ್ಬ ವಾಸ ನೇತಾಜಿ ನಗರ, ಕೊಪ್ಪ ಈತನು ಅಕ್ರಮವಾಗಿ 19 ಕೆ.ಜಿ. 840 ಗ್ರಾಂ ದನದ ಮಾಂಸವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದು, ಅರೋಪಿತರನ್ನು ವಶಕ್ಕೆ ಪಡೆದು ಅರೋಫಿತರು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ದನದ ಮಾಂಸವನ್ನು ಮತ್ತು ಸ್ಕೂಟಿಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಫಿತರ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣಾ ಪಿ.ಎಸ್.ಐ. ಶ್ರೀನಾಥ ರೆಡ್ಡಿ ವಿ. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಅಕ್ರಮ ಗಾಂಜಾ ಸೇವನೆ ಪ್ರಕರಣ;
ಬಣಕಲ್ ಪೊಲೀಸ್ ಠಾಣೆ.
ದಿನಾಂಕ:16/06/2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಬಿಳಗುಳ ಗ್ರಾಮದ ಕುಮಾರ್ ಲೇ ಔಟ್ ಹೋಗುವ ರಸ್ತೆಯಲ್ಲ್ಲಿ ಸಿಕಂದರ್ ಬಿನ್ ಅತ್ತಾವುಲ್ಲಾ, ವಾಸ ಬಿಳಗುಳ ಗ್ರಾಮ ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು, ಸದರಿ ಅಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಠಾಣಾ ಪಿ.ಎಸ್.ಐ.ಆದರ್ಶ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ
ಮನುಷ್ಯ ಕಾಣೆ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ.
ದಿನಾಂಕ;16/06/2022 ರಂದು ಪಿರ್ಯಾದಿ ಮಂಜುನಾಥ ಜಿ.ಟಿ. ಬಿನ್ ತಮ್ಮಣ್ಣಗೌಡ, ಕೆ.ಎಂ. ರಸ್ತೆ ಮೂಡಿಗೆರೆ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಶಿಕಾ ಜಿ.ಎಂ ಇವಳು ದಿನಾಂಕ; 16/06/2022 ರಂದು ಬೆಳಿಗ್ಗೆ ಮನೆಯಲ್ಲಿ ಇದ್ದವಳು, ನಂತರಸಂಜೆ ಬಂದು ನೋಡಲಾಗಿ ಮನೆಯಲ್ಲಿ ಇರಲಿಲ್ಲ, ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಕು;ಶಿಕಾ ಜಿ.ಎಂ. 24 ವರ್ಷ, 5.5 ಅಡಿ, ಗೋದಿ ಮೈ ಬಣ್ಣ, ಕೋಲುಮುಖ, ತೆಳ್ಳನೆ ಶರೀರ, ಜಿನ್ಸ್ ಪ್ಯಾಂಟ್, ಟೀ ಶರಟು, ಧರಿಸಿರುತ್ತಾರೆ ಕನ್ನಡ, ಇಂಗ್ಲಿಷ್ ಇವಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ತರೀಕೆರೆ ಪೊಲೀಸ್ ಠಾಣೆ.
ದಿನಾಂಕ;16/06/2022 ರಂದು ಪಿರ್ಯಾದಿ ಕಲ್ಲೇಶಪ್ಪ, ಬಿನ್ ನಿಂಗಪ್ಪ ನಾಗೇನಹಳ್ಳಿ ತರೀಕೆರೆ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಬಿಂದು ಎನ್.ಎ. ಇವಳು ದಿನಾಂಕ; 15/06/2022 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಕು;ಬಿಂದು ಎನ್.ಎ. 19 ವರ್ಷ, 5 ಅಡಿ, ದುಂಡುಮುಖ, ಬಿಳಿ ಮೈ ಬಣ್ಣ, ದೃಡಕಾಯ ಶರೀರ, ಬಿಳಿ ಬಣ್ಣದ ಟಿ ಶರಟು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಇವಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಜ್ಜಂಪುರ ಪೊಲೀಸ್ ಠಾಣೆ.
ದಿನಾಂಕ;16/06/2022 ರಂದು ಸಂಜೆ ಪಿರ್ಯಾದಿ ವೀರಪ್ಪ ಸಂಗಪ್ಪ ಬಿನ್ ಸಂಗಪ್ಪ ಗಿರಿಯಾಪುರ ಅಜ್ಜಂಫುರ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಭೂವಿಕಾ ಇವಳು ದಿನಾಂಕ; 07/05/2022 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಕು: ಭೂವಿಕಾ 20 ವರ್ಷ, 5.2 ಅಡಿ, ದುಂಡುಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಪಿಂಕ್ ಕಲರ್ ಟಾಪ್ ಮತ್ತು ಬ್ಲೂ ಕಲರ್ ಜಿನ್ಸ್ ಧರಿಸಿರುತ್ತಾರೆ. ಇವಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.