ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ  ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ:16/10/2021 ರಂದು  ತರೀಕೆರೆ ಟೌನ್ ಸುಂದರೇಶ್ ಬಡವಾಣೆಯಲ್ಲಿರುವ ಕೆರೆ ಪಕ್ಕದ ಖಾಲಿ ಜಾಗದಲ್ಲಿ  ಅಕ್ರಮವಾಗಿ ಇಸ್ಪೀಟ್  ಜೂಜಾಟ ಆಡುತ್ತಿದ್ದ  ಆರೋಪಿಗಳಾದ ಶ್ರೀನಿವಾಸ, ಯೋಗೀಶ, ಈಶ್ವರ ಟಿ.ಆರ್ , ಮಂಜುನಾಥ, ನವೀನ , ನಾಗರಾಜ, ಗೋವಿಂದ, ಯಶ್ವಂತ ರವರನ್ನು  ವಶಕ್ಕೆ ಪಡೆದು ಆರೋಪಿತರು ಇಸ್ಪೀಟ್ ಆಡಲು ಉಪಯೋಗಿಸಿದ 11,120 ರೂ ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಶ್ರೀ ರಾಘವೇಂದ್ರ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ 16/10/2021 ರಂದು ಚಿಕ್ಕಮಗಳೂರು ನಗರದ ಬೋಳರಾಮೇಶ್ವರ  ದೇವಸ್ಥಾನದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಹೊಂದಿದ್ದ ಎ.ಎನ್. ಸ್ವಾಮಿ ಬಿನ್ ನಿಂಗೇಗೌಡ ಅಂಬಳೆ ವಾಸಿ ಯನ್ನು ವಶಕ್ಕೆ ಪಡೆದು ಈತನು ಅಕ್ರಮವಾಗಿ ಹೊಂದಿದ 90 ಎಂ.ಎಲ್ ನ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 50 ಟೆಟ್ರಾ ಪ್ಯಾಕ್  ಇದರ ಬೆಲೆ 1,757/- ರೂ ಗಳಾಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ಎ.ಎನ್. ಸ್ವಾಮಿ ಈತನ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಡಿ.ಸಿ.ಆರ್.ಬಿ ವಿಭಾಗದ ಪಿ.ಎಸ್.ಐ. ಶ್ರೀ ಬಸವನಗೌಡ ಬಗಲಿ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 ವಂಚನೆ ಪ್ರಕರಣ

ಸಿ.ಇ. ಎನ್. ಪೊಲೀಸ್ ಠಾಣೆ.

ದಿನಾಂಕ 17/10/2021 ರಂದು ಪಿರ್ಯಾದಿ ಪೂರ್ಣೇಶ್ ಕೆ.ಪಿ. ಬಿನ್ ಲೇಟ್ ಪುಟ್ಟಸ್ವಾಮಿ ಇವರು ನೀಡಿದ ದೂರಿನಲ್ಲಿ ದಿನಾಂಕ:14/10/2021 ರಂದು ಮೊಬೈಲ್ ಪೇಸ್ ಬುಕ್ ನಲ್ಲಿ ಜಾಹಿರಾತು ಬಂದಿದ್ದು ಅದರಲ್ಲಿ ಒಂದು ಬೈಕ್ ಕೆಎ-23 ಈಎಸ್ 3818 ಹೊಂಡಾ ಶೈನ್ ಇದನ್ನು 23,000/- ರೂ ಗಳಿಗೆ ಮಾರಾಟ ಮಾಡುವುದಾಗಿ ಇದ್ದು ಅದರಂತೆ ಜಾಹಿರಾತಿನಲ್ಲಿದ್ದ  ಪೋನ್ ಕರೆ ಮಾಡಿ ವ್ಯವಹಾರ ಮಾತಾನಾಡಿ ಅವರ ಅಕೌಂಟ್ ನಂಬರ್ ಗೆ ಹಂತ ಹಂತ ವಾಗಿ 37,150/- ರೂ ಗಳನ್ನು ಹಾಕಿದ್ದು ಪೋನ್ ಪೇ ನಲ್ಲಿ ಹಾಕಿದ್ದು ಆರೋಪಿತರು ಇವರೆಗೂ ಬೈಕ್ ನ್ನು ನೀಡದೇ ಹಣವನ್ನು ವಾಪಾಸ್ಸು ಕೊಡದೇ ಮೋಸ ಮಾಡಿರುತ್ತಾರೆ. ಅದ್ದರಿಂದ ಅರೋಫಿತರ ವಿರುದ್ದ ಕ್ರಮ ಕೈಗೊಳ್ಳಲು ನೀಡದ ದೂರಿನ ಮೇರೆಗೆ ಸಿ.ಇ. ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 17-10-2021 08:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080