ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ: 16-11-2021 ರಂದು ಪಿರ್ಯಾದಿ ಅಬೂಬುಕರ್ ಬಿನ್ ಸಿದ್ದಿಕ್  ರವರು ನೀಡಿದ ದೂರಿನಲ್ಲಿ ಅಲ್ದೂರು ಠಾಣಾ ಸರಹದ್ದಿನ ಕೆಳಗೂರು, ಬಳಿ ಚಿಕ್ಕಮಗಳೂರು ಕಡೆಯಿಂದ  ಕೆಎ-19- ಎಡಿ-1003 ಟಾಟಾ ಗೂಡ್ಸ್ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಮೂಡಿಗೆರೆ ಕಡೆಯಿಂಧ ಬಂದ ಕೆ.ಎಸ್. ಆರ್. ಟಿ.ಸಿ. ಬಸ್ ಚಾಲಕ ಬಸ್ಸನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಾಗ  ಗೂಡ್ಸ್ ವಾಹನ ಸಂಪೂರ್ಣ ಜಖಂ ಗೊಂಡು ಹಿಂದೆ ಬರುತ್ತಿದ್ದ ಕೆಎ-18-ಎಂ-9342 ನಂಬರಿನ ಕಾರ್ ಸಹ ಜಖಂ ಅಗಿದ್ದು ಕಾರಿನಲ್ಲಿದ್ದ  ಮದನ್ ಟಿ.ಎಂ. ಎಂಬುವರಿಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದು, ಅಪಘಾತಕ್ಕೆ ಕಾರಣವಾದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ  ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಮಲ್ಲಂದೂರು ಪೊಲೀಸ್ ಠಾಣೆ.

ಅಕ್ರಮ ಮಧ್ಯ ಮಾರಾಟ.

ದಿನಾಂಕ:16/11/2021ರಂದು ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಿಮನೆಯ ಪ್ರಕಾಶ್ ರವರ ಅಂಗಡಿಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು  ಆರೋಪಿಯನ್ನು ವಶಕ್ಕೆ ಪಡೆದು 90 ಎಂ. ಎಲ್. ನ 15ಟೆಟ್ರಾ ಪ್ಯಾಕ್ ಮದ್ಯವನ್ನು  ಅಂದಾಜು ಬೆಲೆ 526/- ರೂ  ಅಗಿದ್ದು, ಅಮಾನತ್ತುಪಡಿಸಿಕೊಂಡು ಬಂದು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  ಈ ಕಾರ್ಯಾಚರಣೆಯಲ್ಲಿ  ಮಲ್ಲಂದೂರು ಠಾಣಾ  ಪಿಎಸ್ಐ,  ಶ್ರೀಮತಿ ನಂದಿನಿ ಶೆಟ್ಟಿ  ಮತ್ತು ಸಿಬ್ಬಂದಿಯವರುಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 17-11-2021 07:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080