ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.

ಲಿಂಗದಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:17-12-2021 ರಂದು ಲಿಂಗದಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಕೃಷ್ಣಪುರ ಗ್ರಾಮದ ವಾಸಿ ಶ್ರೀ ರಾಮಪ್ಪ ಜಿ.ಎಸ್. ಬಿನ್ ಶೆಟ್ಟಿಗೌಡ ರವರು  ನೀಡಿದ ದೂರಿನಲ್ಲಿ ದಿನಾಂಕ:17-12-2021 ರಂದು ಬೆಳಿಗ್ಗೆ 11-30  ಗಂಟೆ ಸಮಯದಲ್ಲಿ  ಪಿರ್ಯಾದಿಯವರ ಮಗಳು ರಾಗಿಣಿ 23 ವರ್ಷ ಇವಳು ಮನೆಯಲ್ಲಿ ಇದ್ದವಳು ಮನೆಯಲ್ಲಿ ಹೇಳದೆ  ಯಾವುದೋ ಕಾರಿನಲ್ಲಿ ಹೋಗಿದ್ದು ಇಲ್ಲಿಯವರೆಗೂ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲವೆಂದು ಕಾಣೆಯಾಗಿರುವ ನನ್ನ ಮಗಳು ರಾಗಿಣಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ:17-12-2021 ರಂದು ಕಡೂರು ಪೊಲೀಸ್ ಠಾಣಾ ಸರಹದ್ದಿನ ಮಲ್ಲೇಶ್ವರ ಗ್ರಾಮದ ವಾಸಿ ಶ್ರೀ ರುದ್ರೇಶ್ ರವರು  ನೀಡಿದ ದೂರಿನಲ್ಲಿ ದಿನಾಂಕ:26-10-2021 ರಂದು ಬೆಳಿಗ್ಗೆ 5-00  ಗಂಟೆ ಸಮಯದಲ್ಲಿ  ಪಿರ್ಯಾದಿಯವರ ಮಗಳು ಉಷಾ ಇವಳು ಮನೆಯಲ್ಲಿ ಇದ್ದವಳು ಮನೆಯಿಂದ ಹೊರ ಹೋಗಿದ್ದು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲವೆಂದು ಕಾಣೆಯಾಗಿರುವ ನನ್ನ ಮಗಳು ಉಷಾಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:17-12-2021 ರಂದು ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನ ಬೆಣಕುಣಸೆ ಗ್ರಾಮದ ವಾಸಿ ಶ್ರೀ ಪರಮೇಶ್ವರಪ್ಪ ರವರು  ನೀಡಿದ ದೂರಿನಲ್ಲಿ ದಿನಾಂಕ:14-12-2021 ರಂದು ಬೆಳಿಗ್ಗೆ 9.30  ಗಂಟೆ ಸಮಯದಲ್ಲಿ  ಪಿರ್ಯಾದಿಯವರ ಮಗ ಬಿ.ಪಿ.ನಾಗರಾಜ ಇವನು ಮನೆಯಲ್ಲಿ ಇದ್ದವನು ಮನೆಯಲ್ಲಿ ಯಾರಿಗೂ ಹೇಳದೆ ಮನೆಯಿಂದ ಹೋಗಿದ್ದು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲವೆಂದು ಕಾಣೆಯಾಗಿರುವ ನನ್ನ ಮಗ ಬಿ.ಪಿ. ನಾಗರಾಜನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಸಖರಾಯಪಟ್ಟಣ  ಪೊಲೀಸ್ ಠಾಣೆ.

ದಿನಾಂಕ: 17-12-2021 ರಂದು 13.00 ಗಂಟೆ ಸಮಯದಲ್ಲಿ ಹೊನ್ನೇನಹಳ್ಳಿ ವಾಸಿ  ಮಹೇಂದ್ರ ಬಿನ್ ಪುಟಪ್ಪ ರವರು ನೀಡಿದ ದೂರಿನಲ್ಲಿ  ಪಿರ್ಯಾದಿ ಅಣ್ಣ ಸತೀಶ್ ರವರು ದಿನಾಂಕ 17-12-2021 ರಂದು ಬೆಳಿಗ್ಗೆ 9-30 ಗಂಟೆಗೆ ದೇವನೂರಿಗೆ ನಡೆದುಕೊಂಡು ಹೋಗುತ್ತಿರುವಾಗ ಹೂವಿನಹಳ್ಳಿ ಬಳಿ ರಸ್ತೆಯಲ್ಲಿ  ಬಂದ ಕೆಎ-31-ಜೆ-6767 ರ ಬೈಕಿನ ಸವಾರ ವಿಜಯಕುಮಾರ್ ನು ಬೈಕ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಸತೀಶ್ ಹೆಚ್.ಪಿ. ಗೆ ಡಿಕ್ಕಿ ಹೊಡೆಸಿದ ಪರಿಣಾಮ ಸತಿಶ್ ಹೆಚ್.ಪಿ ರವರಿಗೆ ತಲೆಗೆ ಮತ್ತು ಮೈಕೈಗೆ ತೀವ್ರ ಪೆಟ್ಟು ಬಿದ್ದು  ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತಗೊಳಿಸಿದ ಕೆಎ-31-ಜೆ-6767 ರ ಬೈಕಿನ ಸವಾರ ವಿಜಯಕುಮಾರ್ ನ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 17-12-2021 08:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080