ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಮಲ್ಲಂದೂರು  ಪೊಲೀಸ್ ಠಾಣೆ.

ದಿನಾಂಕ 17/06/2021 ರಂದು ಶಿರವಾಸೆ ಗ್ರಾಮಕ್ಕೆ ಹೋಗಿ ವಾಪಾಸ್ ಮುತ್ತೋಡಿ ಚೆಕ್ಪೊಸ್ಟ್ ಹತ್ತಿರದ ತಿರುವಿನಲ್ಲಿ ಮಲ್ಲಂದೂರು ಕಡೆಗೆ ಬರುತ್ತಿರುವಾಗ ಮಲ್ಲಂದೂರು ಕಡೆಯಿಂದ ಒಂದು ಬಿಳಿ ಬಣ್ಣದ ಮಾರುತಿ ಜಿಪ್ಸಿ ವಾಹನದ ಚಾಲಕ ನಮ್ಮಗಳನ್ನು ನೋಡಿ ಜೀಪಿನಿಂದ ಇಳಿದು ವಾಹನವನ್ನು  ಅಲ್ಲಿಯೇ ಬಿಟ್ಟು ಓಡಿಹೋಗಿದ್ದು , ಬಿಟ್ಟು ಹೋಗಿದ್ದ ವಾಹನವನ್ನು ಪರಿಶೀಲಿಸಲಾಗಿ ವಾಹನದ ನಂಬರ್ ಕೆಎ01 ಎಂಪಿ 4167 ಜಿಪ್ಸಿ ವಾಹನವಾಗಿದ್ದು , ವಾಹನದಲ್ಲಿ  ರಟ್ಟಿನ ಬಾಕ್ಸ್ಗಳಿದ್ದು  ಪರಿಶೀಲಿಸಲಾಗಿ ರಟ್ಟಿನ ಬಾಕ್ಸ್ ಗಳಲ್ಲಿ  ಒಟ್ಟು 195.36 ಲೀಟರ್ ನಷ್ಟು ಮದ್ಯವಿದ್ದು , ಮದ್ಯದ ಅಂದಾಜು ಬೆಲೆ  82,693 /- ರೂ ಆಗಿದ್ದು ,ಜಿಪ್ಸಿ ವಾಹನದ ಮಾಲೀಕನ ಹೆಸರು ತಿಳಿಯಲಾಗಿ ಸಂತೋಷ್ ಬಿನ್ ಪುಟ್ಟೇಗೌಡ, ಮಲ್ಲಂದೂರು ವಾಸಿ ಎಂದು ತಿಳಿದಿದ್ದು ಚಾಲಕನ ಹೆಸರು ಅಭಿಷೇಕ್ ಬಿನ್ ಮಂಜುನಾಥ ,ಬ್ಯಾರವಳ್ಳಿ ವಾಸಿ ಎಂದು ತಿಳಿದಿದ್ದು ಮದ್ಯ  ಆರೋಪಿತರ ವಿರುದ್ದ  ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಸಿಪಿಐ.ಸತ್ಯನಾರಾಯಣ, ಆಲ್ದೂರು ವೃತ್ತ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಲಿಂಗದಹಳ್ಳಿ   ಪೊಲೀಸ್ ಠಾಣೆ.

ದಿನಾಂಕ 18/06/2021 ರಂದು ಕೊವಿಡ್ ಸಂಬಂಧ ರೌಂಡ್ಸ್ ಮಾಡುತ್ತಿರುವಾಗ ತರೀಕೆರೆ ಕಡೆಯಿಂದ ಲಿಂಗದಹಳ್ಳಿ ಕಡೆಗೆ ಒಬ್ಬ ಆಸಾಮಿಯು ಮದ್ಯವನ್ನು ಬೈಕಿನಲ್ಲಿ ಇಟ್ಟುಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು ಲಿಂಗದಹಳ್ಳಿ ಪಿಳ್ಳಯ್ಯನ ಕೆರೆಯ ಏರಿಯ ಮೇಲೆ ಒಬ್ಬ ವ್ಯಕ್ತಿ ಬೈಕಿನಲ್ಲಿ ಬರುತ್ತಿದ್ದು ನಮ್ಮಗಳನ್ನು ನೋಡಿ  ಓಡಿಹೋಗಲು ಪ್ರಯತ್ನಿಸಿದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ರಮೇಶ ಬಿನ್ ಸತ್ಯನಾರಾಯಣ ಆಚಾರ್ ಬೀದಿ ತರೀಕೆರೆ ಟೌನ್ ಎಂದು ತಿಳಿಸಿದ್ದು ಬೈಕನ್ನು ಪರಿಶೀಲಿಸಲಾಗಿ ಕೆಎ16  ಕ್ಯೂ 9486 ಆಗಿದ್ದು 90ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 96  ಪೌಚ್ ಗಳಿದ್ದು , ಮದ್ಯದ ಅಂದಾಜು ಬೆಲೆ 3372 ರೂ ಆಗಿರುತ್ತೆ. ಆರೋಪಿತನು ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಮದ್ಯವನ್ನು ಸಾಗಾಟ ಮಾಡುತ್ತಿದ್ದು   ಆರೋಪಿತನ   ವಿರುದ್ದ ಲಿಂಗದಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯರ್ಾಚರಣೆಯಲ್ಲಿ ಪಿಎಸ್ಐ. ರಫೀಕ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-06-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080