ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಮೂಡಿಗೆರೆ  ಪೊಲೀಸ್ ಠಾಣೆ.

          ದಿನಾಂಕ 17/07/2021 ರಂದು ಬಿಳಗುಳ ಗ್ರಾಮಗಗಸ್ತಿನ ಸಿಬ್ಬಂದಿಯಾದ ಪಿಸಿ 208 ರವರು ಬಿಳಗುಳ ಗ್ರಾಮದ ಶಿವಾಜಿನಗರದ ಲಕ್ಷ್ಮೀ ಹೋಟೆಲ್ ನಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಮಾರಟ ಮಾಡುತ್ತಿದ್ದಾರೆಂದು ಮಾಹಿತಿ ಬಂದಿದೆ ಎಂದು ತಿಳಿಸಿದ್ದು ದಾಳಿ ಮಾಡಲಾಗಿ ಲಕ್ಷ್ಮೀ ಹೋಟೆಲ್ ನಲ್ಲಿ ಇಬ್ಬರು ವ್ಯಕ್ತಿಗಳು ಮದ್ಯವನ್ನು ಸೇವನೆ ಮಾಡುತ್ತಿದ್ದು ಹೋಟೆಲ್ ಮಾಲೀಕನ್ನನು ವಶಕ್ಕೆ ಪಡೆದು ಹೆಸರು ಕೇಳಲಾಗಿ ಆನಂದ ಡಿ. ಪೂಜಾರಿ,ಶಿವಾಜಿ ನಗರ, ಬಿಳಗುಳ ಗ್ರಾಮ ಎಂದು ತಿಳಿಸಿದ್ದು , ಮದ್ಯ ಮಾರಾಟದ ಬಗ್ಗರ ಯಾವುದೆ ಪರವಾನಗಿಯನ್ನು ಹೊಂದದೆ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪಿತನ ವಿರುದ್ದ ಮೂಡಿಗೆರೆ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ.ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ಹೆಂಗಸು ಕಾಣೆ ಪ್ರಕರಣ

ಮಹಿಳಾ   ಪೊಲೀಸ್ ಠಾಣೆ .

          ದಿನಾಂಕ 17.07.2021 ರಂದು ಕೃಷ್ಣಮೂರ್ತಿ ಬಿನ್ ಲೇಟ್ ನಾಗರಾಜ್ ಕಲ್ಲುದೊಡ್ಡಿ ಶಾಂತಿನಗರ  ವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನನಗೆ 2 ಜನ ಮಕ್ಕಳಿದ್ದು, ಮೊದಲನೆಯವನು ನಂದಕುಮಾರ್ 23 ವರ್ಷ ಹಾಗೂ ಎರಡನೆಯವಳು ಮಗಳು ಸಿಂಚನ, 20 ವರ್ಷ.  ಈಗ್ಗೆ ಒಂದು ವರ್ಷದ ಹಿಂದೆ ಕಲ್ಲುದೊಡ್ಡಿ ಸುರೇಶನೊಂದಿಗೆ ಮದುವೆ ಮಾಡಿಕೊಟ್ಟಿದ್ದು , 6 ತಿಂಗಳ ಹಿಂದೆ ಗಂಡನನ್ನು ಬಿಟ್ಟು ನಮ್ಮ ಮನೆಯಲ್ಲಿ ಕೂಲಿಕೆಲಸ ಮಡಿಕೊಂಡು ವಾಸವಾಗಿರುತ್ತಾಳೆ. ಈ ದಿವಸ ನಾವೆಲ್ಲಾ ಕೂಲಿಕೆಲಸಕ್ಕೆ ಬೆಳಿಗ್ಗೆ ಹೋಗಿದ್ದು ನನ್ನ ಮಗಳು ಒಬ್ಬಳೆ ಮನೆಯಲ್ಲಿ ಇರುತ್ತಾಳೆ.  ಕೆಲಸ ಮುಗಿಸಿ ವಾಪಾಸ್ ಮನೆಗೆ ಬಂದಾಗ ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದವರ ಮನೆಗಳಲ್ಲಿ,  ಸಂಬಂಧಿಕರ,ಸ್ನೇಹಿತರ ಹಾಗೂ ನೆಂಟರಿಷ್ಟರ  ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ  ನನ್ನ ಮಗಳನ್ನು  ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಮಹಿಳಾ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಕೊಲೆ ಪ್ರಕರಣ.

ಕಡೂರು ಪೊಲೀಸ್ ಠಾಣೆ.

          ದಿನಾಂಕ;18/07/2021 ರಂದು ಪ್ರಕರಣದ ಪಿರ್ಯಾದಿ ಶ್ರೀಮತಿ ಮಮತ  ಇವರು ಕಡೂರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾಧು ಏನೆಂದರೆ, ತನ್ನ ಗಂಡನಾದ ಪ್ರಕಾಶ್ ಇವರು  ಕೆ.ಎ. 66-0586 ಆಟೋವನ್ನು ಹೊಂದಿದ್ದು, ದಿ:14/07/2021 ರಂದು ಸದರಿ ಆಟೋ ಬಾಡಿಗೆಗೆ ಹೋಗಿ ಬರುತ್ತೇನೆಂದು ಹೇಳಿ ಮಧ್ಯಾಹ್ನ 2-30 ಗಂಟೆಗೆ ಹೋದವರು ರಾತ್ರಿ ಸುಮಾರು 10-00 ಗಂಟೆಯಲ್ಲಿ ಪಿರ್ಯಾದಿ ಮಮತಳಿಗೆ ಪೋನ್ ಮಾಡಿ ತಾನು ಯಾವುದೋ ಬಾಡಿಗೆಗೆ ಹೋಗುತ್ತಿದ್ದೇನೆ ಊಟ ಮಾಡಿ ಮಲಗಿಕೊಳ್ಳಿ ಎಂದು ತಿಳಿಸಿದ್ದರಿಂದ ಪಿರ್ಯಾದಿ ಮಲಗಿ ಬೆಳಗ್ಗೆ ಆದರೂ ತನ್ನ ಗಂಡ ಬಾರದೆ ಇದ್ದುದ್ದರಿಂದ ಪೋನ್ ಮಾಡಿದಾಗ ಪೋನ್ ಸ್ವೀಚ್ ಆಫ್ ಎಂದು ಬಂದಿದ್ದು, ಯಾವುದೋ ಬೇರೆ ಕಾರ್ ಬಾಡಿಗೆ ಹೋಗಿರಬೇಕೆಂದು ತಿಳಿದು, ದಿ:16/07/2021 ರವರೆಗೆ ತನ್ನ ಗಂಡ ಬಾರದೆ ಇದ್ದುದ್ದನ್ನು ಕಂಡು ಎಲ್ಲಾ ಕಡೆ ಹುಡುಕಿ, ದಿ:17/07/2021 ರಂದು ಬೆಳಗ್ಗೆ 10-00 ಗಂಟೆಗೆ ಕಡೂರು ಪೊಲೀಸ್ ಠಾಣೆಗೆ ದೂರು ಕೊಡಲು ಬಂದಾಗ ಕಡೂರು ಪೊಲೀಸಿನವರು ಅಪರಿಚಿತ ಶವದ ಪೋಟೋ ತೋರಿಸಿದಾಗ, ಅದು ತನ್ನ ಗಂಡ ಪ್ರಕಾಶನ ಶವದ ಫೋಟೋ ಆಗಿರುತ್ತದೆ. ಶವ ಇದ್ದ ಚಿಕ್ಕಮಗಳೂರಿನ ಎಂ. ಜಿ. ಆಸ್ಪತ್ರೆಗೆ ಬಂದು ನೋಡಿದಾಗ ತನ್ನ ಗಂಡ ಪ್ರಕಾಶನದೆ ಶವವಾಗಿದ್ದು, ಮೂಗಿನಲ್ಲಿ ರಕ್ತ ಬಂದಿದ್ದು, ಎಡಪಕ್ಕೆ ಹತ್ತಿರ ಪೆಟ್ಟಾಗಿರುತ್ತದೆ. ಅಲ್ಲದೆ ಕುತ್ತಿಗೆಯನ್ನು ಯಾವುದೋ ದಾರ ಅಥವಾ ಹಗ್ಗದಿಂದಲೋ ಬಿಗಿದಿರುವ ಗುರುತು ಕಂಡು ಬಂದಿರುತ್ತದೆ. ಪೊಲೀಸರಲ್ಲಿ ಈ ಬಗ್ಗೆ ವಿಚಾರಿಸಿದಾ ಕಡೂರಿನ ಹೇಮಗಿರಿ ಗ್ರಾಮದಿಂದ ಎಸ್. ಕೋಡಿಹಳ್ಳಿಗೆ ಹೋಗುವ ಗುಡ್ಡದ ಬಳಿ ಠಾರು ರಸ್ತೆಯ ಪಕ್ಕ ಇಳಿಜಾರಿನ ಪೊದೆಯಲ್ಲಿ ದೊರಕಿರುವುದಾಗಿ ತಿಳಿಸಿರುತ್ತಾರೆ ಮತ್ತು ಅವರ ಆಟೊ ರಿಕ್ಷಾ, ಮೊಬೈಲ್ ಅವರ ಬಳಿ ವಸ್ತುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ತನ್ನ ಗಂಡನನ್ನು ದಿ:14/07/2021 ರಂದು ರಾತ್ರಿ ಸುಮಾರು  10.00 ಗಂಟೆಯ ನಂತರದ ಅವಧಿಯಲ್ಲಿ ಹೇಮಗಿರಿ ಗ್ರಾಮದಿಂದ ಎಸ್. ಕೋಡಿಹಳ್ಳಿಗೆ ಹೋಗುವ ರಸ್ತೆಯಲ್ಲಿ ಯರೋ ದುಷ್ಕಮರ್ಿಗಳು ಕುತ್ತಿಗೆಯನ್ನು ಯಾವುದೋ ದಾರ ಅಥವಾ ಹಗ್ಗದಿಂದಲೋ ಬಿಗಿದು ಕೊಲೆ ಮಾಡಿ ಆಟೊ ರಿಕ್ಷಾ, ಮೊಬೈಲ್ ಅವರ ಬಳಿ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಆರೋಪಿಗಳನ್ನು ಪತ್ತೆ ಮಾಡುವಂತೆ ಕೋರಿದ ದೂರಿನ ಮೇರೆಗೆ  ಈ ಬಗ್ಗೆ  ಕಡೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 

ಇತ್ತೀಚಿನ ನವೀಕರಣ​ : 18-07-2021 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080