ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಹರಿಹರಪುರ ಪೊಲೀಸ್ ಠಾಣೆ

ದಿನಾಂಕ:18-01-2022 ರಂದು ಪಿರ್ಯಾದಿ ಸುರೇಶ ಬಿನ್ ನಾಗಪ್ಪಗೌಡ ಇವರು ನೀಡಿದ ದೂರಿನಲ್ಲಿ ದಿನಾಂಕ:17-01-2022 ರಂದು ರಾತ್ರಿ 11.00 ಗಂಟೆ ಸಮಯದಲ್ಲಿ ವಿನಯ ರವರ ಬಾಬ್ತು ಕೆಎ-14-ಪಿ-9968 ನೇ ನಂಬರಿನ  ಕಾರಿನಲ್ಲಿ ರಾಜಶೇಖರ ಮತ್ತು ಮಣಿಕಂಠ ಹಾಗೂ ನಾನು ನೀಲುವಾಗಿಲಿನಿಂದ ದಿಂದ ಹರಿಹರಪುರಕ್ಕೆ  ಹೋಗುತ್ತಿರುವಾಗ ಕಾರನ್ನು ಚಾಲಕ ವಿನಯ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಸಿಗದಾಳ್ ಸೇತುವೆ ಹತ್ತಿರ ಕಾರು ಬಲಭಾಗಕ್ಕೆ ಹೋಗಿ ಬಲಭಾಗದ ಕಬ್ಬಿಣದ ತಡೆಗೋಡೆಗೆ ಹೊಡೆದು ಪಲ್ಟಿಯಾಗಿ ಅಲ್ಲೆ ಇದ್ದ ಮರಕ್ಕೆ ಡಿಕ್ಕಿ ಹೊಡೆದು ಕಾರು ಗದ್ದೆಗೆ ಬಿದ್ದ ಪರಿಣಾಮ ಕಾರಿನ ಪ್ರಯಾಣಿಸುತ್ತಿದ್ದ ರಾಜಶೇಖರ ಮತ್ತು ಮಣಿಕಂಠ ರವರಿಗೆ ತೀವ್ರತರವಾದ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಕಾರಿನ ಚಾಲಕನಿಗೂ ನನಗೂ ಸಣ್ಣಪುಟ್ಟಗಾಯವಾಗಿದ್ದು, ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ವಿನಯ್ ನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕೋವೀಡ್ ನಿಯಮ ಉಲ್ಲಂಘನೆ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ;18-01-2022 ರಂದು ಪಿರ್ಯಾಧಿ ಜಿತೇಂದ್ರಸಿಂಗ್, ರಾಜಸ್ವ ನಿರೀಕ್ಷಕರು, ಸಖರಾಯಪಟ್ಟಣ ರವರು ನೀಡಿದ ದೂರಿನಲ್ಲಿ ಸಖರಾಯಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಜಾತ್ರೆಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ನಿಷೇದಿಸಿದ್ದರು ಸಹ ದೆವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಭಟ್ ರವರು ಸಖರಾಯಟ್ಟಣ ವಾಸಿಗಳಾದ ನವೀನ, ವರುಣ್ ಗೌಡ, ರೀತು, ಸಂದೀಪ, ಸಚಿನ್, ಗಣೇಶ್ ಗೌಡ, ಉಲ್ಲಾಸ್, ಮತ್ತು ನೀತಿನ್ ರವರ ಮುಂದಾತ್ವದಲ್ಲಿ, ಶ್ರೀ ರಂಗನಾಥ ದೇವಸ್ಥಾನದ ಜಾತ್ರೆಯನ್ನು ದಿನಾಂಕ:17-01-2022 ರಂದು ಜಾತ್ರೆಯಲ್ಲಿ ಸಾರ್ವಜನಿಕರು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದೆಗೊಳ್ಳದೆ ಗ್ರಾಮದಲ್ಲಿ ಕೋವೀಡ್ -19 ಸೋಂಕು ಹರಡುವ ಸಾದ್ಯತೆ ಇದ್ದರು ಸಹ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದೆ ಸಾರ್ವಜನಿಕರನ್ನು ಗುಂಪು ಗುಂಪಾಗಿ ಸೇರಿಸಿಕೊಂಡು ಜಾತ್ರೆ ಮಹೋತ್ಸವನ್ನು ನಡೆಸಿ ಕೋವಿಡ್ -19 ನಿಯಮವನ್ನು ಉಲ್ಲಂಘನೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:17-01-2022 ರಂದು ತರೀಕೆರೆ ಠಾಣಾ ಸರಹದ್ದಿನ ಬಿ ರಾಮನಹಳ್ಳಿ ಗ್ರಾಮದ ಮೂರ್ತಿ ಎಂಬುವರು ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90.ಎಂ.ಎಲ್. ನ 32 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1124/- ರೂ ಅಗಿದ್ದು, ಅಮಾನತ್ತುಪಡಿಸಿಕೊಂಡು ಬಂದು ತರೀಕೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಕೃಷ್ಣನಾಯ್ಕ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:18-01-2022 ರಂದು ತರೀಕೆರೆ ಠಾಣಾ ಸರಹದ್ದಿನ ಚೌಡೇಶ್ವರಿ ಕಾಲೋನಿಯಲ್ಲಿರುವ ದೇವೇಂದ್ರರಾವ್ ರವರಿಗೆ ಸೇರಿದ ಕ್ಯಾಂಟಿನ್ ನಲ್ಲಿ ದೇವೇಂದ್ರ ರಾವ್ ರವರು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಮಟ್ಕಾ ಜೂಜಾಡಲು ಸಾರ್ವಜನಿಕರಿಂದ ಸಂಗ್ರಹಿಸಿದ  2190/- ರೂ,ನಗದು ಹಣವನ್ನು ಅಮಾನತ್ತುಪಡಿಸಿಕೊಂಡು, ಅರೋಫಿಯು ಸದರಿ ಹಣವನ್ನು ಧನಂಜಯ ರವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದ ಮೇರೆಗೆ ಇಬ್ಬರು ಅರೋಫಿತರ ವಿರುದ್ದ ತರೀಕೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಕೃಷ್ಣನಾಯ್ಕ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮರಳು ಕಳ್ಳತನ  ಪ್ರಕರಣ

ಯಗಟಿ ಪೊಲೀಸ್ ಠಾಣೆ.

ದಿನಾಂಕ:18-01-2022 ರಂದು ಯಗಟಿ ಠಾಣಾ ಸರಹದ್ದಿನ ಯಗಟಿ-ಬೆಲಗೂರು ರಸ್ತೆಯಲ್ಲಿ ನಂಬರ್ ಇಲ್ಲದ ಮಹಿಂದ್ರಾ ಟ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿಕೊಂಡು  ಸಾಗಾಣಿಕೆ ಮಾಡುತ್ತಿದ್ದು ದಾಳಿ ವೇಳೆ  ಅರೋಪಿತನು ಟ್ಯಾಕ್ಟರ್ ನ್ನು ಬಿಟ್ಟು ಓಡಿ ಹೋಗಿದ್ದು, ಆರೋಪಿತನು ಬಿಟ್ಟು ಹೋದ ಟ್ಯಾಕ್ಟರ್ ನ್ನು ಮರಳು ಸಮೇತ ಅಮಾನತ್ತುಪಡಿಸಿಕೊಂಡು ಬಂದು ಯಗಟಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಶಶಿಕುಮಾರ್  ವೈ. ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 18-01-2022 08:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080