ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

 ದಿನಾಂಕ 18-02-22 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮೂಡಿಗೆರೆ ಪಟ್ಟಣದ ಪಿ.ಬಿ. ರಸ್ತೆಯಲ್ಲಿ ಅನ್ವರ್ ಹುಸೇನ್ ಅವರ ಟೈಲರ್ ಅಂಗಡಿ ಮುಂದೆ ಓಮಿನಿ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿತರಾದ 1] ಪ್ರದೀಪ್ ಕುಮಾರ್ ಜಿ.ಎಲ್. ಬಿನ್ ಲೋಕಪ್ಪಗೌಡ 2. ನಯನ ಜಿ.ಜಿ. ಬಿನ್ ಲೇಟ್ ಗೋಪಾಲ ಗುತ್ತಿ ಗ್ರಾಮ ರವರನ್ನು  ವಶಕ್ಕೆ ಪಡೆದು ಆರೋಪಿತರು ಅಕ್ರಮವಾಗಿ ಹೊಂದಿದ್ದ 7040 ಎಂ.ಎಲ್. ಮದ್ಯ ಅಂದಾಜು ಬೆಲೆ 3264 ರೂ ಅಗಿದ್ದು, ಹಾಗು ಕೆಎ-18-ಎಮ್-2968 ಓಮಿನಿ ಕಾರನ್ನು ಅಮಾನತ್ತುಪಡಿಸಿಕೊಂಡು ಬಂದು ಮೂಡಿಗೆರೆ ಠಾಣೆಯಲ್ಲಿ ಅರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕರಾದ ಶ್ರೀ ಸೋಮಶೇಖರ್ ಜೆ.ಸಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ;18-02-2022 ರಂದು ಮೊಹಮ್ಮದ್ ಶಾಹುಲ್ ಅನ್ಸರ್ ಬಿನ್ ಅಬ್ದುಲ್ ಖಾದರ್ ಇಸಾಕ್ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ದಿನಾಂಕ 16-02-2022 ರಂದು ಭೂತನಕಾಡಿನ ತಮ್ಮ ದಿನಸಿ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 17-02-2022 ರಂದು ಬೆಳಿಗ್ಗೆ  ಹೋಗಿ ನೋಡಲಾಗಿ ಅಂಗಡಿಯಲ್ಲಿ ಇದ್ದ ದಿನಸಿ ಸಾಮಾನುಗಳನ್ನು ಅಂದಾಜು ಬೆಲೆ  ಒಟ್ಟು 87,000/- ಬೆಲೆಯ  ವಸ್ತುಗಳನ್ನು ಯರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿದ್ದು  ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ದಿನಸಿ ಸಾಮಾನುಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;18-02-2022 ರಂದು ಹೆಚ್.ಆರ್. ನಾಗರಾಜ ಬಿನ್ ಲೇಟ್ ನಿಂಗಪ್ಪ ಯರೆಹೊಸೂರು  ಗ್ರಾಮ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತನ್ನ ಬಾಬ್ತು ಕೆಎ-18-ಎಕ್ಸ್ 7072 ಬಜಾಜ್ ಡಿಸ್ಕವರಿ ಬೈಕ್ ನ್ನು  ದಿನಾಂಕ:15-02-2022 ರಂದು ಅಜ್ಜಂಫುರ ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದು ಅದೇ ದಿನ ವಾಪಾಸ್ಸು ಬಂದು ನೋಡಲಾಗಿ ಸದರಿ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ವರೆಗೂ ಹುಡುಕಿದರೂ ಸಹ ಬೈಕ್ ಪತ್ತೆಯಾಗದೇ ಇದ್ದು  ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೈಕ್ ನ್ನು   ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 18-02-2022 08:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080