ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ

ಜಯಪುರ ಪೊಲೀಸ್ ಠಾಣೆ.

ದಿನಾಂಕ:17-03-2022 ರಂದು ಪಿರ್ಯಾದಿ ಎ.ಎಸ್. ರಾಘವೇಂದ್ರ ಬಿನ್ ಸುಬ್ಬರಾವ್ ರವರು ನೀಡಿದ ದೂರಿನಲ್ಲಿ ಕಲ್ಲುಗುಡ್ಡೆ ಗ್ರಾಮದಲ್ಲಿ ಪಿರ್ಯಾದಿ ಬಾಬ್ತು ತೋಟದಲ್ಲಿ ಬೆಳೆದಿದ್ದ ಕಾಫಿ, ಅಡಿಕೆ ಮತ್ತು ಕಾಳು ಮೆಣಸು ಬೆಳೆದಿದ್ದು  ಹೋಗಿದ್ದು, 50 ಕೆ.ಜಿ. ತೂಕದ 75 ಚೀಲ ಕಾಫಿ ಬೀಜದ ಮೂಟೆಗಳನ್ನು ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದು  ದಿನಾಂಕ 16-03-2022 ರಂದು ರಾತ್ರಿ ಗಂಟೆಯಿಂದ ದಿನಾಂಕ 17-03-2022 ರಂದು ಬೆಳಿಗಿನ ಅವಧಿಯಲ್ಲಿ  ಯಾರೋ ಕಳ್ಳರು ಕಳ್ಳತನ 20 ಚೀಲ ಕಾಫಿಚೀಲವನ್ನು ಮಾಡಿಕೊಂಡು ಹೋಗಿರುವುದಾಗಿ ಕಳುವಾಗಿರುವ ಕಾಫಿ ಬೀಜದ ಅಂದಾಜು ಬೆಲೆ ಸುಮಾರು 80,000/-ರೂ ಗಳಾಗಿದ್ದು,  ಕಳ್ಳತನ ಮಾಡಿಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಕೈಗೊಂಡು ಕಳುವಾಗಿರುವ ಕಾಫಿಬೀಜದ ಚೀಲಗಳನ್ನು  ಪತ್ತೆ ಮಾಡಿಕೊಡಬೇಕಾಗಿ ಕೋರಿದ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಸಾಗಾಣಿಕೆ  ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:17-03-2022 ರಂದು ಚಿಕ್ಕಮಗಳೂರು ನಗರದ ಕಲ್ಯಾಣನಗರದ ಕಡೆಯಿಂಧ ದೀಪಾ ನರ್ಸಿಂಗ್ ಹೋಂ ರಸ್ತೆಯಲ್ಲಿ ಕೆಎ-13-ಎಂ-3131 ರ ಓಮಿನಿ ವಾಹನದಲ್ಲಿ ಅರೋಫಿತರು ದನದ ಕರುಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ದನದ ಕರುಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ವಾಹನದಲ್ಲಿ ಇದ್ದ ಆರೋಫಿತರಾದ 1] ಮೊಹಮ್ಮದ್ ಮುಝೀಬ್ ಬಿನ್ ಮೊಹಮ್ಮದ್ ಹನಿಫ್ 2] ಸೈಯದ್ ಸಖಿಬ್ ಬಿನ್ ಸಾದಿಕ್ ಅಹಮ್ಮದ್ 3] ಅಕ್ರಂ ಬಿನ್ ಅನ್ವರ್ ಖಾನ್ ರವರನ್ನು ವಶಕ್ಕೆ ಪಡೆದು ಸಾಗಾಣಿಕೆ ಮಾಡುತ್ತಿದ 10 ಕರುಗಳನ್ನು ವಶಕ್ಕೆ ಪಡೆದು ಕರುಗಳನ್ನು ಸಾಗಿಸುತ್ತಿದ್ದ  ಕೆಎ-13 ಎಂ-3131 ರ ಓಮಿನಿ ವಾಹನವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶರತ್ ಎಲ್. ಎಂ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮರಳು ಕಳ್ಳತನ  ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:17-03-2022 ರಂದು ಮೂಡಿಗೆರೆ ತಾಲ್ಲೋಕು ಚೆಕ್ಕುಡಿಗೆ ಗ್ರಾಮದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಒಂದು ಪಿಕಪ್ ವಾಹನವು ಚೆಕ್ಕುಡಿಗೆ ಗ್ರಾಮದಿಂದ ಹುರುಡಿ ಸರ್ಕಲ್ ಕಡೆಗೆ ನಾರಾಯಣಗೌಡರ ಮನೆಯ ಮುಂಭಾಗ ಬರುತ್ತಿದ್ದು ಅರೋಪಿತನು ಪಿಕಪ್ ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದು, ವಾಹನದ ಸಂಖ್ಯೆ ಕೆಎ-18-ಸಿ-0840 ಅಗಿದ್ದು ವಾಹನದಲ್ಲ್ಲಿ ಇದ್ದ ಸುಮಾರು 2000/- ರೂ ಬೆಲೆಬಾಳುವ ಮರಳನ್ನು ಅಮಾನತ್ತುಪಡಿಸಿಕೊಂಡು ಬಂದು ವಾಹನದ ಮಾಲಿಕರಾಧ ಗೋಪಾಲ ಬಿನ್ ಲೇಟ್ ಶಿವಪ್ಪಗೌಡ  ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ರವಿ ಜಿ.ಎ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಜಯಪುರ ಪೊಲೀಸ್ ಠಾಣೆ.

ದಿನಾಂಕ:18/03/2022 ರಂದು ಪಿರ್ಯಾದಿ ಮಂಜಮ್ಮ ಬಿನ್ ರಾಮೇಗೌಡ ಗೋರಗುಂಟೆ ಪಾಳ್ಯ ಬೆಂಗಳೂರು ಗ್ರಾಮ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗ ನಟರಾಜ 35 ವರ್ಷ, ಈತನು ಗಾರೆ ಕೆಲಸಕ್ಕೆ ಬಸರಿಕಟ್ಟೆ ಗ್ರಾಮದಲ್ಲಿ ಮಾಡುತ್ತಿದ್ದವನು ದಿನಾಂಕ:07/03/2022 ರಂದು  ವಾಪಾಸ್ಸು ಬೆಂಗಳೂರಿಗೆ ಹೋಗಲು ಮೇಸ್ತ್ರೀ ವೆಲುಮುರುಗನ್ ಮತ್ತು ಇತರರೊಂದಿಗೆ ಜಯಪುರಕ್ಕೆ ಬಂದಿದ್ದು, ನಂತರ ಅವರೊಂದಿಗೆ ಬೆಂಗಳೂರಿಗೆ ಮನೆಗೆ ಬಾರದೇ ಕಾಣೆಯಾಗಿದ್ದು, ಈ ವರೆಗೂ ತನ್ನ ಮಗ ಪತ್ತೆಯಾಗದೇ ಇದ್ದು ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 18-03-2022 08:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080