ಅಭಿಪ್ರಾಯ / ಸಲಹೆಗಳು

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.
ಎನ್ ಆರ್ ಪುರ  ಪೊಲೀಸ್ ಠಾಣೆ.
ದಿನಾಂಕ 17-04-2022 ರಂದು ಮಹಮದ್ ಇರ್ಪಾನ್, ತುಮಕೂರು ಟೌನ್ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ,ದಿನಾಂಕ 17-04-2022  ರಂದು ಬೆಳಗಿನ ಜಾವ ಸುಮಾರು 01-00 ಗಂಟೆ ಸಮಯದಲ್ಲಿ ಕೆಎ-18 ಎನ್- 7788 ಸ್ಕಾರ್ಪಿಯೋ ಕಾರಿನಲ್ಲಿ ನರಾಪುರ ಶಿವಮೊಗ್ಗ ರಸ್ತೆಯ ಮಡಬೂರು ಗ್ರಾಮದ ಹತ್ತಿರ ಬರುತ್ತಿರುವಾಗ ಕಾರನ್ನು ಅದರ ಚಾಲಕ ಮಹಮದ್ ಫರಾನನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ , ಕಾರಿನಲ್ಲಿದ್ದ ನನಗೆ, ಸಿದ್ದಿಕ್ ಹುಸೇನ್ ಹಾಗೂ ಅಸ್ಗರ್ರವರಿಗೆ ತಲೆಗೆ, ಎಡಗಣ್ಣಿಗೆ ಪೆಟ್ಟಾಗಿದ್ದು ಪಿರ್ಯಾದಿಯ ತಮ್ಮನಾದ ಮಹಮದ್ ಫರಾನ್ ರವರಿಗೆ ಬಲಗಾಲಿನ ತೊಡೆಗೆ, ಮೈಕೈಗೆ ತೀವ್ರತರಹದ ಪೆಟ್ಟಾಗಿದ್ದು  ಸ್ಥಳದಲ್ಲಿಯೇ ಮೃತಪಟ್ಟಿದ್ದಾಗಿರುತ್ತೆ, ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ನ.ರಾ .ಪುರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಸಖರಾಯಪಟ್ಟಣ  ಪೊಲೀಸ್ ಠಾಣೆ.
ದಿನಾಂಕ 18-04-2022 ರಂದು ಕೃಷ್ಣೇಗೌಡ, ಸಂಕೋಡನಹಳ್ಳಿ, ಅರಸೀಕೆರೆ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ,ಈ ದಿವಸ ದಿನಾಂಕ 17-04-2022  ರಂದು ರಾತ್ರಿ ಸುಮಾರು 9-15 ಗಂಟೆ ಸಮಯದಲ್ಲಿ ಸಖರಾಐಪಟ್ಟಣದ ಬಾಲಕಿಯರ ಹಾಸ್ಟೆಲ್ ಮುಂದೆ ಇರುವ ರಾಷ್ರೀಯ ಹೆದ್ದಾರಿಯಲ್ಲಿರುವ ಡಿವೈಡರ್ ಪಕ್ಕದಲ್ಲಿ ಒಬ್ಬಳು ಹೆಂಗಸು ಬಿದ್ದಿದ್ದನ್ನು ಮನು ಮತ್ತು ಆನಂದನಾಯ್ಕ ರವರು ನೋಡಿದ್ದು ಅವರ ತಲೆಗೆ ತೀವ್ರ ತರಹದ ಪೆಟ್ಟು ಬಿದ್ದಿದ್ದು ಅವರ ಹೆಸರು ಕೇಳಲಾಗಿ ನಾಗಮ್ಮ ವಾಸ ಶಂಕರಹಳ್ಳಿ ಎಂದು ತಿಳಿಸಿದ್ದು ಕೂಡಲೇ ಆಕೆಯನ್ನು 108 ವಾಹನದಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಚಿಕಿತಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ನಾಗಮ್ಮರವರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಯಾವುದೋ ಅಪರಿಚಿತ ವಾಹನದ ಚಾಲಕ ವಾಹನವನ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಗಮ್ಮರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾಗಮ್ಮರವರು  ಮೃತಪಟ್ಟಿದ್ದಾಗಿರುತ್ತೆ, ಅಪರಿಚಿತ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ


 

ಇತ್ತೀಚಿನ ನವೀಕರಣ​ : 18-04-2022 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080