ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ
ಮೂಡಿಗೆರೆ  ಪೊಲೀಸ್  ಠಾಣೆ
ದಿನಾಂಕ:18/05/2021 ರಂದು ಪಿರ್ಯಾದುದಾರರಾದ ಉದಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ:11/05/2021 ರಂದು ಬೆಳಿಗ್ಗೆ 9-00 ಗಂಟೆಗೆ ಗಬ್ಬಗಲ್ ಗ್ರಾಮದ ಯೋಗೀಶ ಗೌಡ ರವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು,  ನನ್ನ ಪತ್ನಿ ಅನಿತ ಪ್ರಾಯ 30 ವರ್ಷ ರವರು ತನ್ನ ಮಗ ಧನುಷ್ ರವರನ್ನು ಕರೆದುಕೊಂಡು ಯಾರಿಗೂ ಹೇಳದೆ ಕಾಣೆಯಾಗಿರುತ್ತಾರೆ, ಈ ವರೆಗೂ  ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿಲ್ಲವೆಂದು, ಕಾಣೆಯಾಗಿರುವ ಪತ್ನಿ ಮತ್ತು ಮಗನನ್ನು  ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್  ಠಾಣೆ
ದಿನಾಂಕ: 18/05/2021 ರಂದು ಕಡೂರು ಠಾಣಾ ಸರಹದ್ದಿನ ಬಂಟಿಗನಹಳ್ಳಿ ವಾಸಿಯಾದ ಜಯಣ್ಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16/05/2021 ರಂದು ರಾತ್ರಿ  ಸುಮಾರು 1-00 ಗಂಟೆ ಸಮಯದಲ್ಲಿ ರೂಪಾಳು ಯಾರಿಗೂ ಮನೆ ಬಿಟ್ಟು ಹೋಗಿದ್ದು ಇದುವರೆಗೂ ಸಂಬಂಧಿಕರ ಸ್ನೇಹಿತರ ಹಾಗೂ ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿಲ್ಲವೆಂದು, ಕಾಣೆಯಾಗಿರುವ ಪತ್ನಿ ಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಬೈಕ್ ಕಳ್ಳತನ ಪ್ರಕರಣ ;
ಅಜ್ಜಂಫುರ ಪೊಲೀಸ್ ಠಾಣೆ
ದಿನಾಂಕ 18/05/2021 ರಂದು  ಪಿರ್ಯಾಧಿ ಮೊಹಮ್ಮದ್ ಸಮಿವುಲ್ಲಾ ಬಿನ್  ಅಬ್ದುಲ್ಲಾ ಎಂಬುವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನಲ್ಲಿ ಈಗ್ಗೆ ಸುಮಾರು 6 ವರ್ಷಗಳಿಂದ ತಮ್ಮಟದಹಳ್ಳಿ ಗೇಟ್ ಬಳಿ ಸ್ಟಾರ್ ಇಂಜಿನಿಯರಿಂಗ್ ಕೆಲಸದ ಅಂಗಡಿ ಇಟ್ಟುಕೊಂಡಿದ್ದು,  ದಿನಾಂಕ: 15/05/2021 ರಂದು  ಕೆಎ-16-ಇಎಫ್-4291 ಟಿವಿಎಸ್ ಅಪಾಚಿ ಬೈಕನ್ನು ಅಂಗಡಿ ಬಳಿ ನಿಲ್ಲಿಸಿ, ಹೊಸದುರ್ಗ ರಸ್ತೆಯಲ್ಲಿರುವ  ಸಿದ್ದರಾಮೇಶ್ವರ ಕಿರಾಣಿ ಅಂಗಡಿ ರಿಪೇರಿ ಇದ್ದು ನೋಡಿಕೊಂಡು ಬರಲೆಂದು ಬೈಕ್ ನಿಲ್ಲಿಸಿ ಹೋಗಿದ್ದು , ವಾಪಾಸ್ಸು ಬಂದು ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು , ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈವರೆಗೂ ಬೈಕ್ ನ್ನು ಹುಡುಕಿದರು ಪತ್ತೆಯಾಗಿಲ್ಲವೆಂದು, ಕಳ್ಳತನವಾಗಿರುವ ನನ್ನ ಬಾಬ್ತು  ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 

ಇತ್ತೀಚಿನ ನವೀಕರಣ​ : 18-05-2021 09:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080