ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಬಾಳೆಹೊನ್ನೂರು   ಪೊಲೀಸ್ ಠಾಣೆ.

ದಿನಾಂಕ:-18-09-2021 ರಂದು ವಿಜಯ ಬಿನ್ ಕೃಷ್ಣಪ್ಪನಾಯ್ಕ, ಬೀರ್ಗೂರುಗಬ್ಗಲ್ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 17-09-2021 ರಂದು ಸಂಜೆ 0-00 ಗಂಟೆ ಸಮಯದಲ್ಲಿ ನನ್ನ ಅಣ್ಣನಾದ ಸದಾನಂದ , 30 ವರ್ಷ, ಇವರು ಅಂಗವಿಕಲರಾಗಿದ್ದು ಸರ್ಕಾರದಿಂದ ನೀಡಿದ್ದ ತ್ರಿಚಕ್ರ ವಾಹನದಲ್ಲಿ ಮಾಗುಂಡಿ ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ, ಪರಿಚಯಸ್ಥರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ನನ್ನ ಅಣ್ಣನಾದ ಸದಾನಂದರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ   ಪ್ರಕರಣ.

ಬೀರೂರು  ಪೊಲೀಸ್ ಠಾಣೆ,

ದಿನಾಂಕ 17-09-2021 ರಂದು ಸಂಜೆ 06-45 ಗಂಟೆ ಸಮಯದಲ್ಲಿ ಕೆ.ದಾಸರಹಳ್ಳಿಯ ಅಪ್ಪಾಜಿ ಜನರಲ್ ಸ್ಟೋರ್ ಅಂಗಡಿಯ ಬಳಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ  ಲಕ್ಷ್ಮೀಕಾಂತ @ ಶರತ್ ಬಿನ್ ಆನಂದಪ್ಪ, ಕೆ.ದಾಸರಹಳ್ಳಿ ವಾಸಿ ಈತನನ್ನು ವಶಕ್ಕೆ ಪಡೆದು , ಆತನ ಬಳಿಯಿದ್ದ 90 ಎಂ.ಎಲ್. ನ 95 ಮದ್ಯದ ಪೌಚ್ಗಳನ್ನು ವಶಕ್ಕೆ ಪಡೆದು ಮದ್ಯದ ಅಂದಾಜು ಬೆಲೆ 3325/- ರೂ ಆಗಿದ್ದು ,  ಲಕ್ಷ್ಮೀಕಾಂತರವರ  ವಿರುದ್ದ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.  ಬಸವರಾಜಪ್ಪ. ಹೆಚ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ.

ಬಣಕಲ್   ಪೊಲೀಸ್ ಠಾಣೆ,

ದಿನಾಂಕ 16-09-2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಕೂಡಳ್ಳಿ ಗ್ರಾಮದ ಸೇತುವೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟವಾಡಿಸುತ್ತಿದ್ದ  ಸಿದ್ದಿಕ್ ಬಿನ್ ಮಹಮದ್, ಶಾಂತಿನಗರ, ಮೂಡಿಗೆರೆ ವಾಸಿ ಈತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ನಂಬರ್ ಗಳನ್ನು ಬರೆದಿರುವ ಒಂದು ಮಟ್ಕಾ ಚೀಟಿ, ಒಂದು ಮಾನ್ ಟೆಕ್ಸ್ ಮೆಗಾ ಟಾಪ್ ಕಂಪೆನಿಯ  ಬಾಲ್ ಪೆನ್ ಹಾಗೂ 1050/- ರೂ ನಗದು ಹಣವನ್ನು ಅಮಾನತ್ತುಪಡಸಿಕೊಂಡು ಆರೋಪಿಯ ವಿರುದ್ದ   ಬಣಕಲ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಶ್ರೀಮತಿ. ಗಾಯತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ನಗರ  ಪೊಲೀಸ್ ಠಾಣೆ,

ದಿನಾಂಕ 16-09-2021 ರಂದು 20-15 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಶಿಫಾ ಮೆಡಿಕಲ್ ಹತ್ತಿರ ಅಕ್ರಮವಾಗಿ ಮಟ್ಕಾ ಜೂಜಾಟವಾಡಿಸುತ್ತಿದ್ದ  ಇಮ್ರಾನ್ @ ಇಮ್ರಾನ್ ಖಾನ್, 28 ವರ್ಷ, ಟಿಪ್ಪುನಗರ ವಾಸಿ ಈತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ನಂಬರ್ ಗಳನ್ನು ಬರೆದಿರುವ ಒಂದು ಮಟ್ಕಾ ಚೀಟಿ, ಒಂದು ನೀಲಿ ಇಂಕಿನ ಬಾಲ್ ಪೆನ್ ಹಾಗೂ 1720/- ರೂ ನಗದು ಹಣವನ್ನು ಅಮಾನತ್ತುಪಡಸಿಕೊಂಡು ಆರೋಪಿಯ ವಿರುದ್ದ   ನಗರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ದೇವರಾಜ .ಎಸ್.ದಿರಾದರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರ

ಇತ್ತೀಚಿನ ನವೀಕರಣ​ : 18-09-2021 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080