ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ

ದಿನಾಂಕ:18-11-2021 ರಂದು ಶಿವಕುಮಾರ್ ಬಿನ್ ತಿಮ್ಮಾಬೋವಿ ಇವರು ನೀಡಿದ ದೂರಿನಲ್ಲಿ ದಿನಾಂಕ 15-11-2021 ರಂದು ಪಿರ್ಯಾದಿ ಮತ್ತು ಹನುಮಂತಾಬೋವಿ ಇವರು ಕೆಎ-66-ಇ-0907 ರಂದು ಮದ್ಯಾಹ್ನ ಬಜಾಜ್ ಡಿಸ್ಕವರಿ ಬೈಕಿನಲ್ಲಿ ಲಿಂಗದಹಳ್ಳಿಯ ಪಿಳ್ಳಯ್ಯನ ಕೆರೆ ಹತ್ತಿರ ಬರುತ್ತಿರುವಾಗ ಹಿಂಭಾಗದಿಂದ ಕೆಎ-66-ಎಂ-2485 ನಂಬರಿನ ಕಾರಿನ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿಗೆ ಮತ್ತು ಹನುಮಂತಬೋವಿ ರವರಿಗೆ ತಲೆಗೆ ಮತ್ತು ಬಲಗೈಗೆ ಪೆಟ್ಟಾಗಿದ್ದು ಕಾರಿನ ಚಾಲಕನ ಮೇಲೆ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

 ಮೂಡಿಗರೆ ಪೊಲೀಸ್ ಠಾಣೆ

ದಿನಾಂಕ:17-11-2021 ರಂದು ಮೂಡಿಗೆರೆ ಪಟ್ಟಣದ ವಾಸಿ ಪ್ರವೀಣ್ ಪೂಜಾರಿ ಬಿನ್ ರಾಜು ಪೂಜಾರಿ ಇವರು ನೀಡಿದ ದೂರಿನಲ್ಲಿ ಪಿರ್ಯಾದುದಾರರು ಹಾಲಿನ ಡೈರಿ ವ್ಯಾಪಾರ ಮಾಡುತ್ತಿದ್ದು ದಿನಾಂಕ:16-11-2021 ರಂದು ಎಂದಿನಂತೆ ರಾತ್ರಿ 8-00 ಗಂಟೆ ಅಂಗಡಿ ಬಾಗಿಲು ಹಾಕಿಕೊಂಡು ಹೋಗಿದ್ದು ದಿನಾಂಕ:17-11-2021 ಬಾಗಿಲು ತೆರೆಯಲು ಬಂದಾಗ ಬಾಗಿಲು ತೆರೆದಿದ್ದು ಅನುಮಾನ ಬಂದು ಅಂಗಡಿಯನ್ನು ನೋಡಲಾಗಿ ಕ್ಯಾಶ್ ಟ್ರಾಯರ್ ನಲ್ಲಿ ಇಟ್ಟಿದ್ದ 14,401 /- ರೂ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳ್ಳತನವಾಗಿರುವ ನಗದನ್ನು ಕೊಡಿಸಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ-17-11-2021 ರಂದು ಪಿರ್ಯಾದಿ ಶ್ರೀಮತಿ ಭಾಗ್ಯ ಕೋಂ ಪ್ರಕಾಶ್, ರವರು ನೀಡಿದ ದೂರಿನಲ್ಲಿ ದಿನಾಂಕ:14-11-2021 ರಂದು ಪಿರ್ಯಾಧಿಯವರ ಗಂಡ ಪ್ರಕಾಶ್ ಇವರು ಸಂಜೆ ಗಂಟೆಗೆ ಮಹಲ್ ಗೆ ಹೋಗಿ ಬರುವುದಾಗಿ ಗಾಳಿಕೆರೆ ಎಸ್ಟೇಟ್ ನಿಂದ ಹೋದವರು ವಾಪಾಸ್ಸು ಈವರೆಗೂ ಮನೆಗೆ ಬಾರದೇ ಇದ್ದು, ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲವೆಂದು ಪ್ರಕಾಶ್ ರವರ ಚಹರೆ ಹೆಸರು ಪ್ರಕಾಶ್, 55 ವರ್ಷ, ಕೋಲುಮುಖ, ಸಾಧಾರಣ ಮೈಕಟ್ಟು, 5.5.ಅಡಿ ಎತ್ತರ, ಗೋದಿ ಮೈಬಣ್ಣ, ಕನ್ನಡ ಮತ್ತು ಲಂಬಾಣ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮಿಶ್ರೀತ ಬಿಳಿ ಬಣ್ಣದ ಪ್ಯಾಂಟು ಮತ್ತು ಬಿಳಿ ಬಣ್ಣದ ಶರಟು ಧರಿಸಿರುತ್ತಾರೆ.  ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 18-11-2021 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080