ಅಭಿಪ್ರಾಯ / ಸಲಹೆಗಳು

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಕೊಪ್ಪ   ಪೊಲೀಸ್ ಠಾಣೆ.

ದಿನಾಂಕ: 18-12-2021 ರಂದು 12.20 ಗಂಟೆ ಸಮಯದಲ್ಲಿ ಕೊಂಬ್ರಿಹುಬ್ಬು ,ಕಾಚಿಗಲ್  ವಾಸಿ  ರೇಷ್ಮಾ ರವರು ನೀಡಿದ ದೂರಿನಲ್ಲಿ ದಿನಾಂಕ 18-12-2021 ರಂದು ಪಿರ್ಯಾದಿಯವರು ಕೆಎ- 18 ಇಜೆ-7011 ಸ್ಕೂಟಿಯಲ್ಲಿ ತನ್ನ ಸಹೋದರಿಯಾದ ಮಮ್ತಾಜ್ ರವರನ್ನು ಕೂರಿಸಿಕೊಂಡು ಕೊಪ್ಪ ಕೆನರಾಬ್ಯಾಂಕ್ ನಲ್ಲಿ ಕೆಲಸ ಮುಗಿಸಿ 11-30 ಗಂಟೆ ಸಮಯದಲ್ಲಿ ಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಬಳಿ ಬರುತ್ತಿರುವಾಗ ಕೊಪ್ಪದ ಕಡೆಯಿಂದ ಬಂದ ಕೆಎ-51 ಜಿ-5462 ಅಗ್ನಿಶಾಮಕ ದಳದ ವಾಹನದ ಚಾಲಕ  ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟಿಗೆ  ಡಿಕ್ಕಿ ಹೊಡೆಸಿದ ಪರಿಣಾಮ ಮಮ್ತಾಜ್ ರವರಿಗೆ ತಲೆಗೆ ತೀವ್ರತರಹದ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಪಘಾತಗೊಳಿಸಿದ ಕೆಎ-51 ಜಿ-5462 ವಾಹನದ ಸವಾರನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕೊಪ್ಪ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಜಯಪುರ  ಪೊಲೀಸ್ ಠಾಣೆ.

ದಿನಾಂಕ: 18-12-2021 ರಂದು 11-30  ಗಂಟೆ ಸಮಯದಲ್ಲಿ ಮಕ್ಕಿಕೊಪ್ಪ ವಾಸಿ ಆಲಿಹಸನ್ ಕುಟ್ಟಿರವರು ನೀಡಿದ ದೂರಿನಲ್ಲಿ ದಿನಾಂಕ 18-12-2021 ರಂದು ಬೆಳಗ್ಗೆ 10-45 ಗಂಟೆ ಸಮಯದಲ್ಲಿ  ಪಿರ್ಯಾದಿಯವರ ಮಗನಾದ ಮಹಮದ್ ರಪೀಕ್ ರವರು ಜಯಪುರ ಪಟ್ಟಣದಲ್ಲಿರುವ ಮಸೀದಿ ಬಳಿ ಮಣ್ಣು ತೆಗೆಯುವ ಕೆಲಸ ಮಾಡುತ್ತಿರುವಾಗ ದಿಬ್ಬದಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಇಂಜಿನ್ ನಂ ಕೆಎ- 54 ಟಿ- 5605 ಹಾಗೂ ಟ್ರಾಕ್ಟರ್ ಟ್ರಾಲಿಯನ್ನು ದುಡುಕಿನಿಂದ ಜೋರಾಗಿ ಚಲಾಯಿಸಿದ್ದರಿಂದ ಇಂಜಿನ್ ಹಿಮ್ಮುಖವಾಗಿ ಮಗುಚಿಕೊಂಡ ಪರಿಣಾಮ ಮಹಮದ್ ರಪೀಕ್ ರವರು ಇಂಜಿನ್ ಕೆಳಗೆ ಸಿಲುಕಿ ತೀವ್ರತರಹದ ಪೆಟ್ಟಾಗಿ  ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಜಯಪುರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಳ್ಳತನ ಪ್ರಕರಣ.

ಜಯಪುರ  ಪೊಲೀಸ್ ಠಾಣೆ.

ದಿನಾಂಕ:18-12-2021 ರಂದು ಜಯಪುರ  ಪೊಲೀಸ್ ಠಾಣಾ ಸರಹದ್ದಿನ ಜಲದುರ್ಗ ಮುತ್ತು ಮಾರಿಯಮ್ಮ ದೇವಸ್ಥಾನದ  ಕಮಿಟಿ ಕಾರ್ಯದರ್ಶಿ ರವರು ನೀಡಿದ ದೂರಿನಲ್ಲಿ ದಿನಾಂಕ:10-12-2021 ರಂದು ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ 9-00 ಗಂಟೆಗೆ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು  ದಿನಾಂಕ 17-12-2021 ರಂದು ಸಂಜೆ ದೇವಸ್ಥಾನ ಹೋಗಿ ನೋಡಲಾಗಿ ದೇವಸ್ಥಾನದ ಬಾಗಿಲು ಹೊಡೆದು ಗರ್ಭ ಗುಡಿಯಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಹೊಡೆದು ಹುಂಡಿಯಲ್ಲಿದ್ದ ಸುಮಾರು 15,000/- ರೂ ನಗದು ಹಣವನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರೂಗಿಸುವಂತೆ ನೀಡಿದ ದೂರಿನ ಮೇರೆಗೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 18-12-2021 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080