ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ .

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ 19/07/2021 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಅತ್ತಿಗುಂಡಿ ಗ್ರಾಮದ ಮುಬಾರಕ್ ಹೋಂ ಸ್ಟೇ ನಲ್ಲಿ  ಕೆಲಸ  ಮಾಡುತ್ತಿದ್ದ ಪಿರ್ಯಾಧಿ ಶ್ರೀಮತಿ ಬಸಮ್ಮ ಕೋಂ ತಿಪ್ಪೇಸ್ವಾಮಿ ಇವರ ಮಗಳೂ 18 ವರ್ಷದ ರೇಖಾ ಇವಳು ದಿನಾಂಕ 17/06/2021 ರಂದು ರಾತ್ರಿ ಪಿರ್ಯಾದಿ ಯೊಂದಿಗೆ ಇದ್ದವಳು ರಾತ್ರಿ ವೇಳೆ ಮನೆಯಿಂದ ಕಾಣೆಯಾಗಿದ್ದು ಅಕ್ಕಪಕ್ಕದ ಮನೆ ಹಾಗೂ ಸಂಬಂಧಿಕರ ಮನೆ ಹುಡುಕಾಡಿ ನೋಡಲಾಗಿ ಎಲ್ಲೂ ಪತ್ತೆಯಾಗದ ಕಾರಣ ರೇಖಾ ಇವಳನ್ನು ಪತ್ತೆ ಮಾಡಿ ಕೊಡಬೇಕಾಗಿ  ಕೋರಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಲ್ಲಂದೂರು ಪೊಲೀಸ್ ಠಾಣೆ .

ದಿನಾಂಕ;19.07.2021 ರಂದು ಪಿರ್ಯಾದಿ ಶ್ರೀಮತಿ ಹೂವಮ್ಮ ಕೊಂ ದೇವಯ್ಯ ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ  ಮಗಳೂ ನೇತ್ರಾವತಿ ಇವಳಿಗೆ ಆರೋಗ್ಯ ಸರಿ ಇಲ್ಲದೆ ಮನೆಯಲ್ಲಿ ಇದ್ದು ಇವಳಿಗೆ ವಿವಾಹ ಮಾಡಿರುವುದಿಲ್ಲ ಅದರೂ ದಿನಾಂಕ 28/06/2021 ರಂದು ಮದ್ಯಾಹ್ನ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಯಾರಿಗೂ ತಿಳಿಸದೆ ಅಕ್ಕಪಕ್ಕದವರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದು ಇದುವರೆಗೂ ಸಂಬಂದಿಕರ ಮನೆಗಳಲ್ಲೆಲ್ಲ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ  ನನ್ನ ಮಗಳು ಹೆಸರು ಕುಮಾರಿ ನೇತ್ರಾವತಿ ಕೋಂ ದಾವಯ್ಯ 30 ವರ್ಷ ಕೂಲಿಕೆಲಸ ಗಾಂಧಿನಗರ ಆವತಿ ಗ್ರಾಮ ಚಿಕ್ಕಮಗಳೂರು ಸಾಧಾರಣ ಮೈಕಟ್ಟು ಎಣ್ಣೆ ಗೆಂಪು ಬಣ್ಣ ಕಾಫಿ ಬಣ್ಣದ ಚೂಡಿದಾರ ಧರಿಸಿದ್ದು ಕನ್ನಡ ಭಾಷೆ ಮಾತಾನಾಡುತ್ತಾಳೆ. 4 ನೇ ತರಗತಿ ವ್ಯಾಸಂಗ ಮಾಡಿರುತ್ತಾಳೆ. ನನ್ನ ಮಗಳನ್ನು   ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ .

ದಿನಾಂಕ:18/07/2021 ರಂದು 19.00 ಗಂಟೆ ಸಮಯದಲ್ಲಿ  ಚಿಕ್ಕಮಗಳೂರು ತಾಲ್ಲೋಕು ಬಸವನಕೋಡಿ ಗ್ರಾಮದಲ್ಲಿ ಬಸ್ ಸ್ಯಾಂಡ್ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅರೋಪಿತನಾದ ಮಂಜೇಗೌಡ ಬಿನ್ ದೊಡ್ಡೇಗೌಡ, ವಾಸ ಹಂಚಿಹಳ್ಳಿ ಈತನನ್ನು ವಶಕ್ಕೆ ಪಡೆದು ಈತನ ವಶದಲ್ಲಿದ್ದ 90 ಎಂ.ಎಲ್. ನ 100 ಟೆಟ್ರಾ ಪ್ಯಾಕ್ ಓರಿಜನಲ್ ಚಾಯ್ಸ್ ವಿಸ್ಕಿಯನ್ನು ಅಂದಾಜು ಬೆಲೆ 3513/-  ರೂ ಮಧ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಸದರಿ ಮದ್ಯವನ್ನು ಆರೋಪಿತ ಜಾವಗಲ್ ನ ನಂದ ಬಾರ್ ನಿಂದ ಖರಿದಿಸಿರುವುದಾಗಿ ತಿಳಿಸಿರುತ್ತಾನೆ. ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಆರೋಪಿ ಮತ್ತು ನಂದ ಬಾರ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಪೊಲೀಸ್ ಠಾಣೆಯ ಪಿ.ಎಸ್.ಐ. ನೀತು ಆರ್. ಗುಡೆ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ:18/07/2021 ರಂದು 19.00 ಗಂಟೆ ಸಮಯದಲ್ಲಿ  ಕೊಪ್ಪ ಠಾಣಾ ಸರಹದ್ದಿನ  ಹೆಚ್. ಹೊಸೂರು ಗ್ರಾಮದ ನವೀನ್ ಎಂಬುವವರು ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅರೋಪಿತನಾದ ಹೆಚ್.ಎಸ್. ನವೀನ್ ಬಿನ್ ಸಿದ್ದಪ್ಪಗೌಡ , ವಾಸ ಹುಣಸೆಕೊಪ್ಪ ಹೆಚ್. ಹೊಸೂರು  ಈತನನ್ನು ವಶಕ್ಕೆ ಪಡೆದು ಈತನ ವಶದಲ್ಲಿದ್ದ 90 ಎಂ.ಎಲ್. ನ 70 ಟೆಟ್ರಾ ಪ್ಯಾಕ್ ಓರಿಜನಲ್ ಚಾಯ್ಸ್ ವಿಸ್ಕಿಯನ್ನು ಅಂದಾಜು ಬೆಲೆ 2459/-  ರೂ ಮಧ್ಯವನ್ನುಮತ್ತು ಅರೋಫಿ ಬಳಿ ಇದ್ದ ಮದ್ಯ ಮಾರಾಟದ ಮಾಡಿದ ಹಣ ರೂ 200/- ರೂ ವನ್ನು ಅಮಾನತ್ತುಪಡಿಸಿಕೊಂಡು ಬಂದು ಕೊಪ್ಪ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ  ಪ್ರಕರಣ ದಾಖಲಿಸಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀನಾಥ ರೆಡ್ಡಿ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 19-07-2021 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080