ಅಭಿಪ್ರಾಯ / ಸಲಹೆಗಳು

ಮರಳು ಕಳ್ಳತನ  ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:18-03-2022 ರಂದು ತರೀಕೆರೆ ತಾಲ್ಲೋಕು ಕರಕುಚ್ಚಿ ಗ್ರಾಮದ ತಾಂಡ್ಯದ ಗುಳಮ್ಮ ದೇವಾಲಯದ ಬಳಿ ಇರುವ ಭದ್ರಾ ನದಿಯಿಂದ  ಅಕ್ರಮವಾಗಿ ಮರಳನ್ನು ತೆಗೆದು ಕಳವು ಮಾಡುತ್ತಿದ್ದ ಸಚಿನ್ ಬಿನ್ ಮಂಜುನಾಥ  ಕರಕುಚ್ಚಿ ವಾಸಿ ಇವನು ಮಾಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಆರೋಫಿತನು ತಪ್ಪಿಸಿಕೊಂಡು ಹೋಗಿದ್ದು, ಆತನು ಹೊಳೆಯ ದಡದ ಸಂಗ್ರಹಿಸಿದ ಸುಮಾರು ಒಂದು ಟ್ಯಾಕ್ಟರ್ ಲೋಡ್ ನಷ್ಟು  ಅಂದಾಜು 3000/- ರೂ ಬೆಲೆಯ ಮರಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ ಎಂ.ಇ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:19/03/2022 ರಂದು ಪಿರ್ಯಾದಿ ಲೋಹಿತ್ ಬಿನ್ ರಮೇಶ್  ಅಸಂದಿ ಗ್ರಾಮ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ತಂಗಿ ದೀಪಾ ಇವಳು ದಿನಾಂಕ;14-03-2022 ರಂದು ರಾತ್ರಿ ಮನೆಯಲ್ಲಿ ಇದ್ದವಳು 7.30 ಗಂಟೆ ಸುಮಾರಿಗೆ ಮನೆಯಿಂದ ಹೋದವಳು ವಾಪಾಸ್ಸು ಬಾರದೇ ಕಾಣೆಯಾಗಿದ್ದು ಈ ವರೆಗೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಕಾಣೆಯಾಗಿರುವ ಕು; ದೀಪಾ 18 ವರ್ಷ  5.2 ಅಡಿ ಎತ್ತರ, ದುಂಡುಮುಖ ತೆಳ್ಳನೆ ಶರೀರ ಎಣ್ಣೆಗೆಂಪು ಬಣ್ಣ ಕಪ್ಪನೆ ಕೂಡಲು ಬಲಭಾಗದ ತುಟಿಯ ಮೇಲೆ ಮಚ್ಚೆ ಇರುತ್ತೆ  ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ತಂಗಿಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

 

ಇತ್ತೀಚಿನ ನವೀಕರಣ​ : 19-03-2022 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080