ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ .

ನಗರ  ಪೊಲೀಸ್ ಠಾಣೆ.

ದಿನಾಂಕ 19-04-2022 ರಂದುಹೇಮಂತ ಬಿನ್ ಪರಮೇಶ್ವರ , ಸಾರಗೋಡು ರೈಸ್ ಮಿಲ್ ಹತ್ತಿರ, ಜಯನಗರ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ , ನಾನು ಬೆಂಗಳೂರಿನ ಡಿಟಿಐಸಿಐ ಕಂಪೆನಿಯಲ್ಲಿ ಕೆಲಸವನ್ನು ಮನೆಯಿಂದಲೇ ನಿರ್ವಹಿಸುತ್ತಿದ್ದು , ದಿನಾಂಕ 18-04-2022 ರಂದು ಸಂಜೆ 06-30 ಗಂಟೆ ಸಮಯದಲ್ಲಿ ಡಿಟಿಐಸಿಐ ಕಂಪೆನಿಯವರು ನೀಡಿದ್ದ ಡೆಲ್ ಲ್ಯಾಟಿಟ್ಯೂಡ್ 5400 ಲ್ಯಾಪ್ಟಾಪ್ನಲ್ಲಿ ಕೆಲಸವನ್ನು ಮಾಡಿ 07-00 ಗಂಟೆ ಸಮಯದಲ್ಲಿ ಮನೆಯಲ್ಲಿ ತಂದೆ ತಾಯಿಯವರು ಹೊರಗೆ ಹೋಗಿದ್ದರಿಂದ ಮನೆಗೆ  ಬೀಗ ಹಾಕಿಕೊಂಡು ನಗರಕ್ಕೆ ಬಂದಿದ್ದು ,ನಂತರ ನಾನು  ಅಲ್ಲೇ ಇದ್ದ ನನ್ನ ತಂದೆ ತಾಯಿಗೆ ಮನೆಯ ಬೀಗದ ಕೀಯನ್ನು ನೀಡಿದ್ದು ,ಅವರು ರಾತ್ರಿ 08-00ಗಂಟೆಗೆ ಮನೆಗೆ ಬಂದಿದ್ದು, ನಾನು ರಾತ್ರಿ 09-00 ಗಂಟೆ ಸಮಯದಲ್ಲಿ ಮನೆಗೆ ಬಂದು ರೂಂಗೆ ಹೋಗಿ ನೋಡಿದಾಗ ರೂಂನಲ್ಲಿದ್ದ ಲ್ಯಾಪ್ಟಾಪ್ನ್ನು ಹಾಗೂ ಚಾರ್ಜನ ಅರ್ಧಭಾಗವನ್ನು ರೂಂನ ಕಿಟಕಿಯಿಂದ ಸೊಳ್ಳೆ ಪರದೆಯ ಬಾಗಿಲನ್ನು ತೆಗೆದು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿಕೊಂಡು ಹೋಗಿರುವ ಕಂಪೆನಿಯ ಲ್ಯಾಪ್ ಟಾಪ್ನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ   ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳ್ಳತನ ಪ್ರಕರಣ .

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ 18-04-2022 ರಂದು ಸಂಜೆ 16-45 ಗಂಟೆ ಸಮಯದಲ್ಲಿ ಲಕ್ಕವಳ್ಳಿ ಠಾಣಾ ಸರಹದ್ದಿನ ಕರಕುಚ್ಚಿ ಮುರಾಲು ಭದ್ರಾ ಹೊಳೆಯ ದಡದಲ್ಲಿದ್ದ  ಮರಳನ್ನು ಪುಟ್ಟಿಗಳಿಂದ ತೆಗೆದು ಸಂಗ್ರಹಿಸುತ್ತಿದ್ದ ಇಬ್ಬರು ಆಸಾಮಿಗಳು ನಮ್ಮಗಳನ್ನು ನೋಡಿ ಓಡಿಹೋಗಿದ್ದು , ಅವರ ಹೆಸರು ವಿಳಾಸ ತಿಳಿಯಲಾಗಿ 1) ಶರಣ ಬಿನ್ ಲೇಟ್ ಗೋವಿಂದಪ್ಪ, ತಾಷ್ಕೆಂಟ್ ನಗರ, ಭದ್ರಾವತಿ 2) ಅಯ್ಯಪ್ಪ ಬಿನ್ ಲೇಟ್ ದೊರೆಸ್ವಾಮಿ, ತಾಷ್ಕೆಂಟ್ ನಗರ, ಭದ್ರಾವತಿ ಎಂದು ತಿಳಿದಿದ್ದು , ಸದರಿ ಆಸಾಮಿಗಳು ಅಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಭದ್ರಾ ಹೊಳೆಯಿಂದ ತೆಗೆದು ಸಂಗ್ರಹಿಸಿದ್ದು ,ಸಂಗ್ರಹಿಸಿಟ್ಟಿದ್ದ  ಮರಳಿನ ಅಂದಾಜು ಬೆಲೆ 3000/- ರೂ ಆಗಿರುತ್ತೆ. ಸದರಿ ಆಸಾಮಿಗಳ ವಿರುದ್ದ  ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 19-04-2022 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080