ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಮತ್ತು ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ;
ಸಖರಾಯಪಟ್ಟಣ   ಪೊಲೀಸ್  ಠಾಣೆ
ದಿನಾಂಕ:19/05/2021 ರಂದು  ಸಖರಾಪಟ್ಟಣ  ಠಾಣಾ ವ್ಯಾಪ್ತಿ  ಸ್ವಾಮಿಕಟ್ಟೆಹಳ್ಳಿ ಹಳ್ಳದ ಹತ್ತಿರ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಒಬ್ಬ ಅಸಾಮಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದು ಕಂಡು ಬಂದಿದ್ದು, ದಾಳಿ ಮಾಡಿದಾಗ ಅಲ್ಲಿಂದ ಸಾರ್ವಜನಿಕರು ಸಮವಸ್ತ್ರದಲ್ಲಿ ಪಿರ್ಯಾದಿ ಮತ್ತು ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅರೋಪಿತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ  ಹೆಚ್.ಕೆ ರಂಗಸ್ವಾಮಿ  ಬಿನ್ ಲೇಟ್  ಕಾಡಪ್ಪ ವಾಸ ಪರಿಶಿಷ್ಟ ಕಾಲೋನಿ ಹುಲಿಕೆರೆ ಎಂದು ತಿಳಿಸಿದ್ದು ,   ಆರೋಪಿತನ  ವಶದಲ್ಲಿದ್ದ ರಾಜಾವಿಸ್ಕಿಯ 90 ಎಂ. ಎಲ್.  ನ 40 ಪೌಚ್ ಗಳು ಬೆಲೆ 1405/- ಮದ್ಯವನ್ನು ಮತ್ತು ನಗದು ಹಣ 150/-ವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಹರೀಶ್ ಆರ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.


ಸಖರಾಯಪಟ್ಟಣ  ಪೊಲೀಸ್  ಠಾಣೆ
ದಿನಾಂಕ:19/05/2021 ರಂದು  ಸಖರಾಪಟ್ಟಣ  ಠಾಣಾ ವ್ಯಾಪ್ತಿ  ಬಾಣೂರು ಗ್ರಾಮದ ಎಂ ಹೊಸಳ್ಳಿ ರಸ್ತೆಯ ವಾಟರ್ ಟ್ಯಾಂಕ್ ಪಕ್ಕದಲ್ಲಿ  ಹತ್ತಿರ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಒಬ್ಬ ಅಸಾಮಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದು ಕಂಡು ಬಂದಿದ್ದು, ದಾಳಿ ಮಾಡಿದಾಗ ಅಲ್ಲಿಂದ ಸಾರ್ವಜನಿಕರು ಸಮವಸ್ತ್ರದಲ್ಲಿ ಪಿರ್ಯಾದಿ ಮತ್ತು ಸಿಬ್ಬಂದಿಯವರನ್ನು  ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅರೋಪಿತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ  ತಿಮ್ಮಶೆಟ್ಟಿ  ಬಿನ್ ಲೇಟ್ ಶಂಕರಶೆಟ್ಟಿ ವಾಸ ಬಾಣೂರು ಗ್ರಾಮ ಎಂದು ತಿಳಿಸಿದ್ದು ,   ಆರೋಪಿತನ  ವಶದಲ್ಲಿದ್ದ ರಾಜಾವಿಸ್ಕಿಯ 90 ಎಂ. ಎಲ್. ನ 25 ಪೌಚ್ ಗಳು ಬೆಲೆ 878.25/- ಮದ್ಯವನ್ನು ಮತ್ತು ನಗದು ಹಣ 200/- ವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ . ಹರೀಶ್ ಆರ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ


ಬಣಕಲ್   ಪೊಲೀಸ್  ಠಾಣೆ
ದಿನಾಂಕ:18/05/2021 ರಂದು  ಬಣಕಲ್ ಠಾಣಾ ವ್ಯಾಪ್ತಿ  ಹೊರಟ್ಟಿ ಗ್ರಾಮದ ವಾಸಿ ತನಿಯಪ್ಪ ಪೂಜಾರಿ ಎಂಬುವರು ಅವರ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ತನಿಯಪ್ಪರವರು  ತಮ್ಮ ಅಂಗಡಿಯ ಮುಂದೆ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದು ಸಾರ್ವಜನಿಕರು ದಾಳಿ ವೇಳೆ ಓಡಿ ಹೋಗಿದ್ದು, ಆರೋಪಿ ತನಿಯಪ್ಪ ಪೂಜಾರಿಯನ್ನು ವಶಕ್ಕೆ ಪಡೆದು ಆರೋಫಿ ವಶದಲ್ಲಿದ್ದ ನಂ 01 ಹೈವೆ ಡಿಲಕ್ಸ್ ವಿಸ್ಕಿ 90 ಎಂ. ಎಲ್. ನ 48 ಪೌಚ್ ಗಳು ಬೆಲೆ 1343/- ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ . ಶ್ರೀನಾಥ ರೆಡ್ಡಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಮತ್ತು ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ
ಕಡೂರು ಪೊಲೀಸ್  ಠಾಣೆ

ದಿನಾಂಕ: 19/05/2021 ರಂದು ಕಡೂರು ಪುರಸಭಾ ಮುಖ್ಯಾಧಿಕಾರಿಗಳಾದ ಹೆಚ್.ಎನ್.. ಮಂಜುನಾಥ  ರವರು  ಕಡೂರು ಪಟ್ಟಣದ 31 ಎಕರೆಯಲ್ಲಿನ ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ನಿವಾಸಿಗಳು ಅಕ್ರಮ ಗುಂಡಿ ತೆಗೆದು ಮಣ್ಣನ್ನು ರಸ್ತೆಗೆ ಹಾಕಿದ್ದ, ವಿಚಾರವಾಗಿ ಪಿರ್ಯಾದಿ ಮತ್ತು ಪುರಸಭೆ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿನ ನಿವಾಸಿಗಳಲ್ಲಿ ಲಕ್ಷ್ಮಮ್ಮ, ಶೋಭಾ,  ಚೆಲುವೆಮ್ಮ,  ಗಾಯತ್ರಿ  ಮಮ್ತಾಜ್, ಫಾತಿಮಾ, ಪದ್ಮ, ವಾಣಿ, ಪುಷ್ಪಾ ಹಾಗೂ ಇತರರರು ಅಕ್ರಮವಾಗಿ ನೀರನ್ನು ತಮ್ಮ ಮನೆಗಳಿಗೆ ಬಿಟ್ಟುಕೊಳ್ಳುತ್ತಿದ್ದು ಕಂಡು ಬಂದಿದ್ದು,  ಈ ವಿಚಾರವಾಗಿ ಕೇಳಲಾಗಿ ಟಿ. ಮೂತರ್ಿ ರವರು ಪೈಪ್ ಲೈನ್ ಹಾಕಿಕೊಳ್ಳಲು ಹೇಳಿದ್ದಾಗಿ ತಿಳಿಸಿದ್ದು, ಅಲ್ಲೇ ಇದ್ದ ಟಿ.ಮೂತರ್ಿ ರವರು  ಪಿರ್ಯಾದಿಗೆ ಮತ್ತು ಅಧಿಕಾರಿಗಳಿಗೆ ಏರು ದ್ವನಿಯಲ್ಲಿ ಮಾತಾನಾಡಿ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಜನರನ್ನು ಗುಂಪು ಸೇರಿಸಿಕೊಂಡು ಸಾಮಾಜಿಕ ಅಂತರನ್ನು ಕಾಯ್ದಕೊಳ್ಳದೇ, ಅವಾಚ್ಯ ಶಬ್ದ ಬೈದು, ಕೊಲೆ ಬೆದರಿಕೆ ಹಾಕಿ ಇಲ್ಲಿಂದ ಹೊಗುವಂತೆ ಪಿರ್ಯಾದಿಯನ್ನು ಮತ್ತು ಅಧಿಕಾರಿಗಳಿಗೆ ಬೆದರಿಕೆ ಹಾಕಿ, ನೂಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 

ಇತ್ತೀಚಿನ ನವೀಕರಣ​ : 19-05-2021 09:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080