ಅಭಿಪ್ರಾಯ / ಸಲಹೆಗಳು

ಅಕ್ರಮ ಗೋ ಸಾಗಾಣಿಕೆ  ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;19/05/2022 ರಂದು ಬೆಳಗ್ಗೆ 01-30 ಗಂಟೆ ಸಮಯದಲ್ಲಿ ಮೂಡಿಗೆರೆ ಠಾಣಾ ಸರಹದ್ದಿನ ಬಿದರಹಳ್ಳಿ ಬಳಿ  ಬಣಕಲ್ ಕಡೆಯಿಂದ ಆಶೋಕ ಲೇಲ್ಯಾಂಡ್ ವಾಹನ ಸಂಖ್ಯೆ ಕೆಎ-21-ಎ-8355 ರಲ್ಲಿ ಅಕ್ರಮವಾಗಿ 3 ಎಮ್ಮೆಗಳು ಹಾಗೂ 1 ಕರುವನ್ನು ಸಾಗಾಣೀಕೆ ಮಾಡುತ್ತಿದ್ದು, ತಪಾಸಣೆ ವೇಳೆ ಆರೋಫಿತರು ವಾಹನವನ್ನು  ಬಿಟ್ಟು ಓಡಿ ಹೋಗಿದ್ದು , ವಾಹನವನ್ನು  ವಶಕ್ಕೆ ಪಡೆದು  ಜಾನುವಾರುಗಳನ್ನು ಅಮಾನತ್ತುಪಡಿಸಿಕೊಂಡು ಬಂದು ವಾಹನ ಚಾಲಕ ಮತ್ತು ಇತರರ ವಿರುದ್ದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ಶ್ರೀ ರವಿ. ಜಿ.ಎ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ; 19/05/2022 ರಂದು ಪಿರ್ಯಾದಿ ರಾಘವೇಂದ್ರ, ಚಿಂಚೋಳ್ಳಿ, ಕಲರ್ಬುಗಿ ಜಿಲ್ಲೆ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;17/05/2022 ರಂದು ಪಿರ್ಯಾದಿ ತಂದೆ ಜಗದೇವಪ್ಪ ರವರು ಬೀರೂರು ಕಡೂರು ಮದ್ಯೆ ಉಳಕಿನ ಕಲ್ಲು ಕ್ರಾಸ್ ಬಳಿ ಇರುವ ಶಾನ್ ಹೋಟೇಲ್ ಮುಂಭಾಗದಲ್ಲಿ ಎನ್.ಹೆಚ್. 206 ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಾಹನದ ಚಾಲಕ  ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿ ವಾಹನವನು ನಿಲಿಸದೇ ಹೋಗಿದ್ದು,  ಚಿಕಿತ್ಸೆಗೆ ದಾಖಲಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅಪಘಾತಪಡಿಸಿದ ಅಪರಿಚಿತ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ  ಠಾಣೆಯಲ್ಲಿ  ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ಕರ್ತವ್ಯಕ್ಕೆ ಆಡ್ಡಿ ಮತ್ತು ನೌಕರನ ಮೇಲೆ ಹಲ್ಲೆ ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ;19-05-2022 ರಂದು ಪಿರ್ಯಾದಿ ನೂರ್ ಪಾಷ, ಜಿಲ್ಲಾ ವರ್ಕ ಬೋರ್ಡ್ ಅದಿಕಾರಿ, ಚಿಕ್ಕಮಗಳೂರು ರವರು  ಮೂಡಿಗೆರೆ ಮುಸ್ಲಿಂ ಖಬ್ರಸ್ಥಾನದ ಒತ್ತುವರಿ ಮಾಡಿಕೊಂಡಿರುವ ಕೆ.ಪಿ. ಒಮ್ಮರ್ ಬಿನ್ ಲೇಟ್ ಫಕ್ರುದ್ದೀನ್ ಮೂಡಿಗೆರೆ ವಾಸಿ ಇವರಿಗೆ ನೋಟೀಸ್ ನೀಡಲು ಹೋದಾಗ ಕೆ.ಪಿ. ಒಮ್ಮರ್  ರವರು  ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈ ಯಿಂದ ಹೊಡೆದು ಹಲ್ಲೆ ಮಾಡಿ, ಸರ್ಕಾರಿ ಕೆಲಸ ಮಾಡಲು ಅಡ್ಡಿಪಡಿಸಿದ್ದು ಆರೋಫಿತನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಅರೋಫಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:18-05-2022 ರಂದು ಪಿರ್ಯಾಧಿ ರವಿ ಬಿನ್ ವೇಲು ವಾಸ ಆರಿಶಿನ ಗುಪ್ಪೆ, ಮಲ್ಲೇನಹಳ್ಳಿ, ಚಿಕ್ಕಮಗಳೂರು ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳಾದ ಲಾವಣ್ಯ 22 ವರ್ಷ,  ಇವಳು ದಿನಾಂಕ;17/05/2022 ರಂದು ಮನೆಯಿಂದ ಕೊರಿಯರ್ ತೆಗೆದುಕೊಂಡು ಬರುತ್ತೇನೆಂದು ಹೋದವಳು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಲಾವಣ್ಯ , 22 ವರ್ಷ, ದುಂಡುಮುಖ, ಸಾದಾರಣ ಮೈಕಟ್ಟು, 5 ಅಡಿ ಎತ್ತರ, ಬಿಳಿ ಮೈಬಣ್ಣ ಕನ್ನಡ ಮತ್ತು ಮಲೆಯಾಳಿ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಟೀ ಶರಟು  ಮತ್ತು ನೀಲಿ ಬಣ್ಣದ ಪ್ಯಾಂಟ್ ಹಾಗೂ ಕ್ರೀಂ ಬಣ್ಣದ ಜರ್ಕಿನ್ ಧರಿಸಿರುತ್ತಾಳೆ. ಕಾಣೆಯಾಗಿರುವ ಲಾವಣ್ಯ ಇವಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 19-05-2022 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080