ಮರಣಾಂತಿಕ ರಸ್ತೆ ಅಪಘಾತ ಪ್ರಕರಣ
ಕಡೂರು ಪೊಲೀಸ್ ಠಾಣೆ.
ದಿನಾಂಕ;18/06/2022 ರಂದು ಕುಮಾರ್ ಬಿ.ಎಸ್. ಬಿನ್ ಸಿದ್ದಪ್ಪ , ವಾಸ ಬಂಡಿಕೊಪ್ಪಲು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;18/06/2022 ರಂದು ಸಂಜೆ ಪಿರ್ಯಾದಿ ತಾಯಿ ಸಿದ್ದಮ್ಮ ಇತರರು ಕಡೂರುನಿಂದ ಬಂಡಿಕೊಪ್ಪಲಿಗೆ ನಡೆದುಕೊಂಡು ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಹತ್ತಿರ ಬರುತ್ತಿರುವಾಗ ಕೆಎ-18-ಸಿ-4901 ನಂಬರಿನ ಅಟೋದಲ್ಲಿ ಚಾಲಕ ಅಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿದ್ದಮ್ಮ ಮತ್ತು ವಿಮಲ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸಿದ್ದಮ್ಮನಿಗೆ ತಲೆಗೆ ಎದೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದು, ವಿಮಲ ರವರಿಗೆ ಬಲಭುಜಕ್ಕೆ ತಲೆಗೆ ಬಲಕೈಗೆ ಪೆಟ್ಟಾಗಿದ್ದು ಅಟೋದಲ್ಲಿದ್ದ ಚಂದನಾ ಇವರು ಸಹ ಪೆಟ್ಟಾಗಿದ್ದು ಅಪಘಾತಪಡಿಸಿದ ಆಟೋ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ
ಅಕ್ರಮ ಗಾಂಜಾ ಸೇವನೆ ಪ್ರಕರಣಗಳು;
ಕೊಪ್ಪ ಪೊಲೀಸ್ ಠಾಣೆ.
ದಿನಾಂಕ:18/06/2022 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಕೊಪ್ಪ ಠಾಣಾ ಸರಹದ್ದಿನ ಕೊಪ್ಪ ಪಟ್ಟಣದ ಬೃಂದಾವನ ಲೇ ಔಟ್ ವಾಟರ್ ಟ್ಯಾಂಕ್ ಸಮೀಪ ನಿತೀನ್ ಬಿನ್ ಶಂಕರ್, ರಾಘವೇಂದ್ರ ನಗರ ಹರಂದೂರು ಗ್ರಾಮ ಕೊಪ್ಪ ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು, ಸದರಿ ಅಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣಾ ಪಿ.ಎಸ್.ಐ. ಶ್ರೀನಾಥ ರೆಡ್ಡಿ ವಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಗ್ರಾಮಾಂತರ ಪೊಲೀಸ್ ಠಾಣೆ.
ದಿನಾಂಕ:18/06/2022 ರಂದು ಸಂಜೆ ಸಮಯದಲ್ಲಿ ಗ್ರಾಮಾಂತರ ಠಾಣಾ ಸರಹದ್ದಿನ ಬಿಳೇಕಲ್ಲು ಲೇ ಔಟ್ ಸಮೀಪ ಎಸ್. ಮಹಾವೀರ್ ಬಿನ್ ಸಜ್ಜನ್ ರಾಜ್ , ಗಣಪತಿ ದೇವಸ್ಥಾನ ಎದುರು ಚಿಕ್ಕಮಗಳೂರು ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು, ಸದರಿ ಅಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಐ. ಶ್ರೀಮತಿ ಸ್ವರ್ಣ ಜಿ.ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಬೀರೂರು ಪೊಲೀಸ್ ಠಾಣೆ.
ದಿನಾಂಕ:18/06/2022 ರಂದು ಬೀರೂರು ಠಾಣಾ ಸರಹದ್ದಿನ ಬೀರೂರು ಪಟ್ಟಣದ ರೈಲ್ವೆ ನಿಲ್ದಾಣದ ಮಾಲು ಸ್ಲೀಪರ್ಸ್ ರಸ್ತೆಯಲ್ಲಿ ದೇವರಾಜ ಬಿನ್ ನಿಂಗರಾಜ, ನೆಹರು ನಗರ 2 ನೇ ಕ್ರಾಸ್ ಹಳೆ ಅಜ್ಜಂಪುರ ರಸ್ತೆ ಬೀರೂರು ಟೌನ್ ವಾಸಿ ಮತ್ತು ಬಳ್ಳಾರಿ ಕ್ಯಾಂಪ್ ಹಿರಿಯಂಗಳ ಕಡೆ ಹೋಗುವ ರಸ್ತೆಯಲ್ಲಿ ಸುಹಾಸ್ ಬಿನ್ ಬಸವರಾಜ, ವಾಸ 1ನೇ ಕ್ರಾಸ್ ಅಜ್ಜಂಫುರ ರಸ್ತೆ , ಬೀರೂರು ಟೌನ್ ವಾಸಿ ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದು, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬೀರೂರು ಠಾಣಾ ಪಿ.ಎಸ್.ಐ ವಿಶ್ವನಾಥ ಎನ್.ಸಿ..ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಅಲ್ದೂರು ಪೊಲೀಸ್ ಠಾಣೆ.
ದಿನಾಂಕ:18/06/2022 ರಂದು ಅಲ್ದೂರು ಠಾಣಾ ಸರಹದ್ದಿನ ಅಲ್ದೂರು ಪಟ್ಟಣದ ಯಜಮಾನ್ ಗುಡ್ಡದ ರಸ್ತೆಯಲ್ಲಿ ಕಿಶೋರ್ ಎ.ಬಿ. ಬಿನ್ ಬಾಬು, ಸಂತೆ ಮೈದಾನ, ಅಲ್ದೂರು ಟೌನ್ ವಾಸಿ, ಮತ್ತು ಮನೋಜ್ ಹೆಚ್. ಯು. ಬಿನ್ ಉಮೇಶ ಹೊಸಳ್ಳಿ ಅಲ್ದೂರು ವಾಸಿ ಹಾಗೂ ಅಲ್ದೂರು ಸಂತೆ ಮೈದಾನದ ಶೆಡ್ ನಲ್ಲಿ ಪ್ರದೀಪ ಬಿನ್ ಚೆಲುವ ರಾಜು , ಹೊಸಳ್ಳಿ ಅಲ್ದೂರು ವಾಸಿ ಇವರುಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದು, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಲ್ದೂರು ಠಾಣಾ ಪಿ.ಎಸ್.ಐ ಶ್ರೀಮತಿ ಶಿವರುದ್ರಮ್ಮ ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ತರೀಕೆರೆ ಪೊಲೀಸ್ ಠಾಣೆ.
ದಿನಾಂಕ:18/06/2022 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ತರೀಕೆರೆ ಠಾಣಾ ಸರಹದ್ದಿನ ತರೀಕೆರೆ ಪಟ್ಟಣದ ಬಕೋಡಿಕ್ಯಾಂಪ್ ಸರ್ಕಲ್ ನ ಅಟೋ ಸ್ಟಾಂಡ್ ರಸ್ತೆಯ ಬದಿ ಚರಣ್ ಬಿನ್ ಲೋಕೇಶ್ವರ್. ಚೆನ್ನಕೇಶ್ವರ ಬೀದಿ, ತರೀಕೆರೆ ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು, ಸದರಿ ಅಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ ಠಾಣಾ ಪಿ.ಎಸ್.ಐ. ಅನಿಲ್ ಕುಮಾರ್ ನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣ.
ಬೀರೂರು ಪೊಲೀಸ್ ಠಾಣೆ.
ದಿನಾಂಕ:19-06-2022 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಬೀರೂರು ಪೊಲೀಸ್ ಠಾಣಾ ಸರಹದ್ದಿನ ಕೆ. ಚಟ್ನಹಳ್ಳಿ ಗ್ರಾಮದ ಎನ್. ಹೆಚ್. 206 ರಸ್ತೆಯಲ್ಲಿ ಅಂಜನಪ್ಪ ಬಿನ್ ಲಕ್ಕಪ್ಪ ವಾಸ ಕೆ, ಚಟ್ನಹಳ್ಳಿ ಈತನು ಅಕ್ರಮವಾಗಿ ಮದ್ಯವನ್ನು ಮಾರಾಟ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 30 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1050/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬೀರೂರು ಠಾಣಾ ಪಿ.ಎಸ್.ಐ. ವಿಶ್ವನಾಥ ಎನ್.ಸಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ
ಕಳಸ ಪೊಲೀಸ್ ಠಾಣೆ.
ದಿನಾಂಕ:18-06-2022 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಕಳಸ ಪೊಲೀಸ್ ಠಾಣಾ ಸರಹದ್ದಿನ ತನೂಡಿ ಗ್ರಾಮ ಕಗ್ಗನಹಳ್ಳದಲ್ಲಿ ಜಗನ್ನಾಥ ಬಿನ್ ಬಿನ್ ಲೇಟ್ ಸಂಜೀವಶೆಟ್ಟಿ ವಾಸ ಕಗ್ಗನಹಳ್ಳ ತನೂಡಿ ಈತನು ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 180 ಎಂ.ಎಲ್. ನ 24 ಟೆಟ್ರಾಪ್ಯಾಕ್ ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕಳಸ ಠಾಣಾ ಪಿ.ಎಸ್.ಐ. ಹರ್ಷ ವರ್ಧನ್ ಹೆಚ್. ಕೆ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ.
ದಿನಾಂಕ:18-06-2022 ರಂದು ಮೂಡಿಗೆರೆ ಪೊಲೀಸ್ ಠಾಣಾ ಸರಹದ್ದಿನ ಬಿಜುವಳ್ಳಿ ಗ್ರಾಮದ ಸುಂಡೇಕೆರೆ ಹಳ್ಳದ ಪಂಪ್ ಹೌಸ್ ಪಕ್ಕದ ಜಾಗದಲ್ಲಿ ಅಕ್ರಮವಾಗಿ ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ವಿಜಯ್ ಕೆ.ಎಂ> ಬಿನ್ ಲೇಟ್ ಮಂಜುನಾಥ ಗೌಡ 2] ಜಯ್ಯಪ್ಪ ಹೆಚ್. ಎ. ಬಿನ್ ಅಣ್ಣಪ್ಪ 3] ಕುಮಾರ್ ಬಿನ್ ಮಲ್ಲಯ್ಯ , 4] ರಿಜ್ವಾನ್ ಬಿನ್ ಹುಸೇನ್ ಷರೀಪ್ 5] ಸೂರಿ ಬಿನ್ ವೆಂಕಟೇಶ 6] ಮೂರ್ತಿ ಕೆ.ಎ. ಬಿನ್ ಅಪ್ಪಣ್ಣಗೌಡ 7] ರಾಮು ಬಿನ್ ರಾಜು 8] ಪ್ರಕಾಶ್ ಪಿ.ಎಸ್. ಬಿನ್ ಶಂಕರ್ ನಾಯರ್ ಅರೋಪಿತರನ್ನು ವಶಕ್ಕೆ ಪಡೆದು, ಅರೋಪಿತರು ಜೂಜಾಡಲು ಬಳಸಿದ 2680/- ರೂ ನಗದು ಹಣ, 52 ಇಸ್ಪೀಟ್ ಎಲೆಗಳು ಹಾಗೂ ಒಂದು ಚಾಪೆಯನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಠಾಣಾ ಪಿ.ಎಸ್.ಐ. ಆದರ್ಶ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ.
ದಿನಾಂಕ;19/06/2022 ರಂದು ಪಿರ್ಯಾದಿ ವಿನಯ್ ಬಿನ್ ಲೇಟ್ ಗೋಪಾಲ ವಾಸ ಇಂದಿರಾನಗರ ಸೈಟ್ ನಂದೀಪುರ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತಂಗಿ ವಿನೋದ ಇವಳು ದಿನಾಂಕ; 18/06/2022 ರಂದು ಮದ್ಯಾಹ್ನ 1.30 ಗಂಟೆ ಯಿಂದ 3.00 ಗಂಟೆ ಮದ್ಯ ಅವಧಿಯಲ್ಲಿ ಮನೆಯಲ್ಲಿ ಯರಿಗೂ ಹೇಳದೆ ಮನೆಯಿಂದ ಯಾರಿಗೂ ಹೇಳದೆ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಕು;ವಿನೋಧ ಎನ್.ಜಿ. 26 ವರ್ಷ, 5.0 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದೃಡಕಾಯ ಶರೀರ, ಕನ್ನಡ, ತುಳು ಬಾಷೆ ಮಾತಾನಾಡುತ್ತಾಳೆ, ಚೂಡಿದಾರ ಮತ್ತು ನೇರಳೆ ಬಣ್ಣದ ಸ್ವೆಟರ್ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಮಗಳು ಕು: ವಿನೋದ ಎನ್.ಜಿ. ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ