ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ

 ದಿನಾಂಕ 19/10/2021 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀಮತಿ ರತ್ನಮ್ಮ ಕೊಂ ಲೇಟ್ ಮಂಜುನಾಥ ಇವರ ಮಗ ಮಾರುತಿ 14 ವರ್ಷ ಈತನು ತನ್ನ ಬಾಬ್ತು  ಸೈಕಲ್ ನಲ್ಲಿ ಉಡೆವಾ ಕಡೆಯಿಂದ ಲಿಂಗದಹಳ್ಳಿ ಕಡೆಗೆ ಹೋಗುತ್ತಿರುವಾಗ ಹಿಂಭಾಗದಿಂದ ಬಂದ ಕೆಎ-05-ಡಬ್ಲ್ಯೂ 0876 ಕಾರಿನ ಚಾಲಕ ತನ್ನ ಕಾರನ್ನು ಜೊರಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಮಗನ ಸೈಕಲ್ ಗೆ ಅಪಘಾತಪಡಿಸಿ, ಕಾರನ್ನು ನಿಲ್ಲಿಸದೇ ಹೋಗಿರುತ್ತಾನೆ. ಅಪಘಾತದಲ್ಲಿ ಪಿರ್ಯಾದಿ ಮಗ ಮಾರುತಿ ಮೃತಪಟ್ಟಿದ್ದು ಅಪಘಾತಪಡಿಸಿದ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ

ಬಸವನಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:19/10/2021 ರಂದು ಚಿಕ್ಕಮಗಳೂರು ಅಲ್ಲಂಪುರ ಗ್ರಾಮದ ಶಾಂತಿನಗರದ ವಾಸಿ ಶ್ರೀನಿವಾಸ @ ರಂಗನಾಥ ಬಿನ್ ಕೃಷ್ಣಪ್ಪ  ರವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನು ಅಕ್ರಮವಾಗಿ ಹೊಂದಿದ್ದ ಓರಿಜಿನಲ್  ಚಾಯ್ಸ್ ವಿಸ್ಕಿಯ 90 ಎಂ.ಎಲ್. ನ 88 ಟೆಟ್ರಾಪ್ಯಾಕ್ ಒಟ್ಟು ಮದ್ಯದ ಬೆಲೆ 3082/- ರೂ ಗಳಾಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಬಸವನಹಳ್ಳಿ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಆರ್.ಬಿ ವಿಭಾಗದ ಪಿ.ಎಸ್.ಐ. ಶ್ರೀ ಬಸನಗೌಡ ಬಗಲಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕುದುರೆಮುಖ ಪೊಲೀಸ್ ಠಾಣೆ.

ದಿನಾಂಕ:18/10/2021 ರಂದು  ಮೂಡಿಗೆರೆ ತಾಲ್ಲೋಕು ಸಂಸೆ ನೆಲ್ಲಿಬೀಡು ಗ್ರಾಮದ ನರೇಂದ್ರ ಗೌಡ ರವರು ತಮ್ಮ ಅಂಗಡಿ ಪಕ್ಕದಲ್ಲಿ ಶೆಡ್ ನಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು  ಆರೋಪಿಯನ್ನು ವಶಕ್ಕೆ  ಪಡೆದು ಆರೋಪಿತನು ಅಕ್ರಮವಾಗಿ ಹೊಂದಿದ್ದ 180 ಎಂ.ಎಲ್. ನ 22 ಟೆಟ್ರಾಪ್ಯಾಕ್ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿ 90 ಎಂ.ಎಲ್. ನ 04 ಟೆಟ್ರಾಪ್ಯಾಕ್ ಕ್ಯಾಪ್ಟನ್ ಮಾರ್ಟಿನ್  ವಿಸ್ಕಿ  ಒಟ್ಟು ಮದ್ಯದ ಬೆಲೆ 1672/- ರೂ ಗಳಾಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಕುದುರೆಮುಖ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀ ಹರ್ಷವರ್ಧನ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕುದುರೆಮುಖ ಪೊಲೀಸ್ ಠಾಣೆ.

ದಿನಾಂಕ:18/10/2021 ರಂದು  ಮೂಡಿಗೆರೆ ತಾಲ್ಲೋಕು ನೆಲ್ಲಿಬೀಡು ಗ್ರಾಮದ ಅರುಣ್ ರವರು ತಮ್ಮ  ಕೋಳಿ ಅಂಗಡಿ ಪಕ್ಕದ ರೂಮ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು  ಆರೋಪಿಯನ್ನು ವಶಕ್ಕೆ  ಪಡೆದು ಆರೋಪಿತನು ಅಕ್ರಮವಾಗಿ ಹೊಂದಿದ್ದ ಮೈಸೂರು ಲ್ಯಾನ್ಸ್ರ್ ವಿಸ್ಕಿಯ 180 ಎಂ.ಎಲ್. ನ 29 ಟೆಟ್ರಾಪ್ಯಾಕ್ ಹಾಗೂ 90 ಎಂ.ಎಲ್. ನ 46 ಟೆಟ್ರಾಪ್ಯಾಕ್ ಒಟ್ಟು ಮದ್ಯದ ಬೆಲೆ 4160/- ರೂ ಗಳಾಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಕುದುರೆಮುಖ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀ ಹರ್ಷವರ್ಧನ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:18/10/2021 ರಂದು  ಚಿಕ್ಕಮಗಳೂರು ತಾಲ್ಲೋಕು ಧರಗುಣೆ ಗ್ರಾಮದ ಸೋಮಶೇರ್ ಬಿನ್ ಲೇಟ್ ಗೋವಿಂದಪ್ಪ  ರವರು ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ  ಪಡೆದು ಆರೋಪಿತನು ಅಕ್ರಮವಾಗಿ ಹೊಂದಿದ್ದ ಒಲ್ಡ್ ತವರಿನ್ ವಿಸ್ಕಿಯ 180 ಎಂ.ಎಲ್. ನ 45 ಟೆಟ್ರಾಪ್ಯಾಕ್ ಹಾಗೂ ಓರಿಜಿನಲ್  ಚಾಯ್ಸ್ ವಿಸ್ಕಿಯ 90 ಎಂ.ಎಲ್. ನ 96 ಟೆಟ್ರಾಪ್ಯಾಕ್ ಒಟ್ಟು ಮದ್ಯದ ಬೆಲೆ 7276/- ರೂ ಗಳಾಗಿದ್ದು, ಸದರಿ ಮದ್ಯವನ್ನು ಮತ್ತು ಆರೋಫಿ ಬಳಿ ಇದ್ದ 120/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಸಿ.ಇ. ಎನ್.   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀ ರಫೀಕ್ ಎಂ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ಹತ್ಯಾ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ; 18/10/2021 ರಂದು ಚಿಕ್ಕಮಗಳೂರು ನಗರದ ಸಂತೆ ಮೈದಾನದ ಬಳಿ ಎ.ಕೆ. ಕಾಲೋನಿ ವಾಸಿಯಾದ ಮಹಮ್ಮದ್ ಎಕ್ಬಾಲ್ ಬಿನ್ ಫಜಲೂರ್ ರೆಹಮಾನ್ ರವರು ತಮ್ಮ ಮನೆಯ ಮಹಡಿಯಲ್ಲಿ ತಗಡಿನ ಶೀಟ್ ಶೆಡ್ ನಲ್ಲಿ ಅಕ್ರಮವಾಗಿ ಗೋ ಮಾಂಸ ವನ್ನು ಮಾರಾಟ ಮಾಡುತ್ತಿದ್ದು, ಒಂದು ಡೈರಿ ಡೇ ಪ್ರೀಜರ್ ನಲ್ಲಿ 1  ಕೆ.ಜಿ. ಯ 30 ಪ್ಯಾಕೇಟ್ ಹಾಗೂ ಇನ್ನೊಂದು  ಪ್ರೀಜರ್ ನಲ್ಲಿ 35 ಕೆ .ಜಿ ದನದ ಮಾಂಸ ಇದ್ದು ಒಟ್ಟು 675 ಕೆ.ಜಿ ದನದ ಮಾಂಸ ಹಾಗೂ 2 ಪ್ರೀಜರ್ ಹಾಗೂ ತೂಕದ ಬಟ್ಟುಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಫಿತನ ವಿರುದ್ದ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಶ್ರೀ ಗುರುಪ್ರಸಾದ್ ಎನ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ; 18/10/2021 ರಂದು ಮೂಡಿಗೆರೆ ಬಿಳೂಗಳ ವಾಸಿ ಗಣೇಶ್ ಎ.ಆರ್. ಬಿನ್ ಲೇಟ್ ರಾಜು  ರವರು ನೀಡಿದ ದೂರಿನಲ್ಲಿ ತಮ್ಮ ಹೆಂಡತಿ ಜೀವಿತ ದಿನಾಂಕ 18/10/2021 ರಂದು 14.30 ಗಂಟೆ ಸಮಯದಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸಂಘದ ಹಣ ಕಟ್ಟಲು ಚಿನ್ನವನ್ನು ಗಿರವಿಯಿಟ್ಟು ಬರುತ್ತೇನೆಂದು ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ತನ್ನ ಹೆಂಡತಿ ಚಹರೆ   ಹೆಸರು:ಜೀವಿತ, 21 ವರ್ಷ ಎತ್ತರ; 5 ಅಡಿ ಎಣ್ಣೆಗೆಂಪು ಬಣ್ಣ , ತುಳು ಕನ್ನಡ ಮತ್ತು ಮಲೆಯಾಳಿ ಬಾಷೆ ಮಾತಾನಾಡುತ್ತಾಳೆ, ಜಿನ್ಸ್ ಟಾಪ್ ಮತ್ತು ಕೆಂಪು ಪ್ಯಾಂಟು ಧರಿಸಿರುತ್ತಾಳೆ. ಬಲ ತುಟಿಯ ಮೇಲ್ಬಾಗದಲ್ಲಿ ಕಪ್ಪು ಮಚ್ಚೆ ಇರುತ್ತೆ . ಎಂದು ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಇತ್ತೀಚಿನ ನವೀಕರಣ​ : 19-10-2021 07:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080