ಅಭಿಪ್ರಾಯ / ಸಲಹೆಗಳು

ಕೊಲೆ  ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:19-11-2021 ರಂದು ಶಾಂತಪ್ಪ ಬಿನ್ ಲೇ ರಾಜು ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗನಾದ ಶೇಷಪ್ಪ @ ಶಶಿ ಇವನು ಕಬ್ಬಿನಹಳ್ಳಿ ಎಸ್ಟೇಟ್ ಕೂಲಿ ಲೈನ್ ಮನೆಯಲ್ಲಿ ವಾಸವಿದ್ದು, ರೈಟರ್ ರವರು ದಿನಾಂಕ 18-11-2021 ರಂದು ರಾತ್ರಿ 7.00 ಗಂಟೆಯಲ್ಲಿ ಶೇಷಪ್ಪ ಮತ್ತು ಮನು ಕೂಲಿ ಕೆಲಸಕ್ಕೆ ಬರಲು ತಿಳಿಸಲು ಹೋದಾಗ ಎಷ್ಟು ಕೂಗಿದರೂ ಯಾರೂ ಮಾತಾನಾಡಲಿಲ್ಲವೆಂದು  ಮನೆಯ ಬಾಗಿಲು ತೆಗೆದು ನೋಡಿದಾಗ ಶೇಷಪ್ಪನು ಗೋಡೆಯ ಬದಿಯಲ್ಲಿ ಮಲಗಿದಂತಿದ್ದು ರಕ್ತ ಚೆಲ್ಲಾಡಿದ್ದು ಶೇಷಪ್ಪನ ಕುತ್ತಿಗೆಯ ಬಳಿ ಕತ್ತಿಯಿಂದ ಕಡಿದ ಗುರುತ್ತಿರುತ್ತದೆ. ಅವನ್ನನು ಯಾರೋ ಕೊಲೆ ಮಾಡಿರುವುದಾಗಿದ್ದು, ಮನು ಶೇಷಪ್ಪನನ್ನು ಕೊಲೆ ಮಾಡಿರುವ ಅನುಮಾನವಿದ್ದು,  ಕೊಲೆ ಮಾಡಿರುವ ಮನು ರವರ ಮೇಲೆ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೆರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಜಾನುವಾರು ಮಾಂಸ ಮಾರಾಟ ಪ್ರಕರಣ

 ಮೂಡಿಗರೆ ಪೊಲೀಸ್ ಠಾಣೆ

ದಿನಾಂಕ:19-11-2021 ರಂದು ಮೂಡಿಗೆರೆಯ ಮಾಕೋನಹಳ್ಳಿ ಗ್ರಾಮದಿಂದ ಬೇಲೂರು ಕಡೆಯಿಂಧ ರಸ್ತೆಯಲ್ಲಿ ಸುರಜ್ ಜಮಾಲ್ ಬಿನ್ ಅಬ್ದುಲ್ ಖಲೀಕ್ ರವರು ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದು, ಅವನನ್ನು ವಶಕ್ಕೆ ಪಡೆದು 10 ಕೆ.ಜಿ ದನದ ಮಾಂಸವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ರವಿ ಜಿ.ಎ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ

ದಿನಾಂಕ-18-11-2021 ರಂದು ಪಿರ್ಯಾದಿ ಗೌಸ್ ಅಹಮ್ಮದ್ ಬಿನ್ ನಿಸಾರ್ ಅಹಮ್ಮದ್ ರವರು ನೀಡಿದ ದೂರಿನಲ್ಲಿ ತನ್ನ ಹೆಂಡತಿ ದಿನಾಂಕ 18-11-2021 ರಂದು ಮನೆಯಿಂದ ತನ್ನ ಎರಡು ಮಕ್ಕಳು ಮಹಮ್ಮದ್ ಖಲಂದರ್ ಅಹಮ್ಮದ್ ಮತ್ತು ಶಾರಿಯಾ ಬಿಬಿ ರವರನ್ನು ಕರೆದುಕೊಂಡು ಹೋಗಿದ್ದು ಮನೆಯಿಂದ ಹೋದವರು ವಾಪಾಸ್ಸು ಈವರೆಗೂ ಮನೆಗೆ ಬಾರದೇ ಇದ್ದು, ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ಮತ್ತು ಮಕ್ಕಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

 ದಿನಾಂಕ 19-11-2021 ರಂದು ಪಿರ್ಯಾದಿ ಹಾಲಾನಾಯ್ಕ ಹೊಸಳ್ಳಿ ತಾಂಡ್ಯ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಬಾಭ್ತು ಅಡಿಕೆ ತೋಟದಲ್ಲಿ ಇದ್ದ ಅಡಿಕೆ ಗೋನೆಯನ್ನು ದಿನಾಂಕ;17-11-2021 ರ ರಾಥ್ರಿ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸುಮಾರು 1 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕಳ್ಳತನ ಮಾಡಿದ್ದು ಅದರ ಮೌಲ್ಯ 6500ರೂ ಗಳಾಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಡಿಕೆಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 19-11-2021 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080