Feedback / Suggestions

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಕಡೂರು  ಪೊಲೀಸ್ ಠಾಣೆ.

ದಿನಾಂಕ: 18-12-2021 ರಂದು  ಕಡೂರು ಠಾಣಾ ಸರಹದ್ದಿನ ಕೋಟೆ ಎಮ್ಮೇದೊಡ್ಡಿ ವಾಸಿ ಶ್ರೀಮತಿ ಸುಶೀಲಾ ಬಾಯಿ ರವರು ನೀಡಿದ ದೂರಿನಲ್ಲಿ  ಕಂಸಾಗರ  ಸಮೀಪದ ಜಾತ್ರೆ ಬೈಲಿನಲ್ಲಿ ಪಿರ್ಯಾದಿಯು  ತನ್ನ ಪರಿಚಯವಿರುವ ಬಸವಲಿಂಗಪ್ಪ ರವರ ಟಿವಿಎಸ್  ನಂಬರ್ ಕೆಎ-04 ಹೆಚ್ ಎಕ್ಸ್ 1769 ರಲ್ಲಿ  ತನ್ನ ತಂಗಿ ಗಂಡ ರಮೇಶ ನೊಂದಿಗೆ 3 ಜನ ಹೋಗುತ್ತಿರುವಾಗ ಬಿಸಲೇಹಳ್ಳಿ ಕಡೆ ಹೋಗಲು ಟಿವಿಎಸ್ ನ್ನು ಕ್ರಾಸ್ ಮಾಡುವಾಗ ಚಿಕ್ಕಮಗಳೂರು ಕಡೆಯಿಂದ ಬಂದ ಕೆಎ-13-ಸಿ-7677 ರ ಲಾರಿ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದು ಟಿ.ವಿ.ಎಸ್. ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಅಪಘಾತದಲ್ಲಿ ಟಿ.ವಿ.ಎಸ್. ಚಾಲನೆ ಮಾಡುತ್ತಿದ್ದು ಬಸವಲಿಂಗಪ್ಪ ರವರು ಸ್ಥಳದಲ್ಲೇ ಮೃತಪಟ್ಟಿದ್ದು, ರಮೇಶ ರವರು ಅಸ್ಪತ್ರೆಯಲ್ಲಿ ಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪಿರ್ಯಾದಿಯವರಿಗೆ ತೀವ್ರತರಾವದ ಗಾಯವಾಗಿದ್ದು ಅರೋಪಿ ಲಾರಿ ಚಾಲಕ ಆಪಘಾತ ಮಾಡಿ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಸದರಿ ಲಾರಿ ಚಾಲಕನ ಮೇಲೆ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಢೂರು   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಅಲ್ದೂರು  ಪೊಲೀಸ್ ಠಾಣೆ.

ದಿನಾಂಕ:18-12-2021 ರಂದು ಅಲ್ದೂರು  ಪೊಲೀಸ್ ಠಾಣಾ ಸರಹದ್ದಿನ ಹಚ್ಚಡ ಗ್ರಾಮದ ವಾಸಿ ಮೀನಾಕ್ಷಿ ಕೋಂ ಗೋಪಾಲ ಎಂಬುವರು ತಮ್ಮ ಅಂಗಡಿಯ ಮುಂದಿನ ಠಾರು ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು,  ಆರೋಪಿತೆಯನ್ನು ವಶಕ್ಕೆ ಪಡೆದು ಆರೋಪಿತಳು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 80 ಟೆಟ್ರಾಪ್ಯಾಕ್ನ ಮದ್ಯವನ್ನು ವಶಕ್ಕೆ ಪಡೆದು ಅಂದಾಜು ಬೆಲೆ 2810/- ರೂ ಅಗಿದ್ದು ಆರೋಪಿತಳ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಶಿವರುದ್ರಮ್ಮ ಎಸ್.  ಹಾಗೂ ಕಿರಣ್ ಡಿ.ಅರ್.,  ಆನಂದ ಕೆ.ಸಿ., ಮಂಜುನಾಥ ಸಿ.ಡಿ. ವಸಂತ್ ಕೆ. ಮಹೇಶ್ ಹೆಚ್.ಪಿ. ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಅಲ್ದೂರು  ಪೊಲೀಸ್ ಠಾಣೆ.

ದಿನಾಂಕ:18-12-2021 ರಂದು ಅಲ್ದೂರು  ಪೊಲೀಸ್ ಠಾಣಾ ಸರಹದ್ದಿನ ಕಂಡರ್ ಕಸ್ಕೆ ಗ್ರಾಮದ ಕರಡಿಖಾನ್ ಎಸ್ಟೇಟ್  ಕೂಲಿಲೈನ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದು   ಆರೋಪಿತರು ಇಸ್ಫಿಟ್ ಆಡಲು ಬಳಸಿದ 10350/- ರೂಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಶಿವರುದ್ರಮ್ಮ ಎಸ್.  ಹಾಗೂ ಸಿಬ್ಬಂದಿಯವರು  ಪಾಲ್ಗೊಂಡಿರುತ್ತಾರೆ

Last Updated: 19-12-2021 07:20 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080