ಅಭಿಪ್ರಾಯ / ಸಲಹೆಗಳು

 

ಅಕ್ರಮ ಗಾಂಜಾ ಪ್ರಕರಣ

ಬಣಕಲ್  ಪೊಲೀಸ್ ಠಾಣೆ.

ದಿನಾಂಕ:20/06/2021 ರಂದು ಬಣಕಲ್ ಠಾಣಾ ವ್ಯಾಪ್ತಿ ಯಲ್ಲಿ ಯಾರೋ ಜನ ಅಸಾಮಿಗಳು ಹಿರೋ ಹೊಂಡಾ ಸ್ಲೆಂಡರ್ ಬೈಕ್ ನಲ್ಲಿ ಗಾಂಜಾ ವನ್ನು ಉಜಿರೆಯಿಂದ ಚಾಮರ್ಡಿ ಮಾರ್ಗವಾಗಿ  ಬಣಕಲ್ ಕಡೆಗೆ ತೆಗೆದುಕೊಂಡು ಬರುತ್ತಿರುವ  ಮಾಹಿತಿ ಮೇರೆಗೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ವ್ತಾಹನ ತಪಾಸಣೆ ಮಾಡುವಾಗ ಕೆಎ-66-ಈ-7556 ನೊಂದಾಣಿ ಸಂಖ್ಯೆ ಯ ಬೈಕಿನಲ್ಲಿ ಬಂದ ಆರೋಪಿತರಾದ ಇಮ್ರಾನ್  ಖಾನ್ @ ಇಮ್ರಾನ್ ಬಿನ್ ಲೇಟ್ ವಜೀರ್,  32 ವರ್ಷ ವಾಸ ಗೌರಿ ಕಾಲುವೆ , ಚಿಕ್ಕಮಗಳೂರು ಮತ್ತು  ರಾಹುಲ್ ಬಿನ್ ಸತೀಶ ಬ್ಯಾಗದಹಳ್ಳಿ  ಕೈಮರ ಚಿಕ್ಕಮಗಳೂರು ರವರನ್ನು ವಶಕ್ಕೆ ಪಡೆದು ಅರೋಫಿತರು  ಅಕ್ರಮವಾಗಿ ಹೊಂದಿದ್ದ 15,000/- ರೂ ಬೆಲೆಬಾಳುವ ಸುಮಾರು 428 ಗ್ರಾಂ ತೂಕದ ಒಣಗಿದ ಕಡ್ಡಿ ಬೀಜ ಮಿಶ್ರಿತ ಗಾಂಜಾ ಸೋಪ್ಪನ್ನು ಹೊಂದಿದ್ದು ಸದರಿ ಗಾಂಜಾ ಸೊಪ್ಪನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ವೃತ್ತ ಸಿ.ಪಿ.ಐ ಹೆಚ್.ಎಂ.ಜಗನ್ನಾಥ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು   ಪೊಲೀಸ್ ಠಾಣೆ.

ದಿನಾಂಕ 20/06/2021 ರಂದು ಕಡೂರು ಠಾಣಾ ವ್ಯಾಪ್ತಿ ಮಾಡಾಳು ಗ್ರಾಮ ವಾಸಿ ಭರತ ಎಂ.ಎಂ. ನರಸಿಂಹಮೂರ್ತಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ರಮ್ಯ ಎಂ.ಹೆಚ್. ಇವಳನ್ನು ಪಿರ್ಯಾದಿ ಮದುವೆ ಅಗಿದ್ದು 2 ಜನ ಮಕ್ಕಳಿದ್ದು ತನ್ನ ಹೆಂಡತಿ ದಿನಾಂಕ 02/06/2021 ರಂದು ಬೆಳಿಗ್ಗೆ 5-00 ಗಂಟೆಗೆ ಮನೆಯಿಂದ ನನಗೆ ಹೊಡ್ಡೆ ನೋವಾಗುತ್ತಿದೆ ಅಮ್ಮನ ಹತ್ತಿರ ರಂಚು ಹಾಕಿಸಿಕೊಂಡು ಬರುತ್ತೇನೆಂದು ಹೋದವಳು ಅವರ ಮನೆಯಿಂದ 6-00 ಗಂಟೆಗೆ  ಶೌಚಾಲಯಕ್ಕೆ ಹೋಗಿ ಬರುತ್ತೆನೆ ಎಂದು ಹೋದವಳು ವಾಪಾಸ್ಸು ಮನೆಗೆ ಬಂದಿಲ್ಲವೆಂದು ಎಲ್ಲಾ ಕಡೆ ಹುಡುಕಾಡಿದರೂ ತನ್ನ ಹೆಂಡತಿ ಪತ್ತೆ ಅಗಿಲ್ಲವೆಂದು ರಮ್ಯ ಎಂ.ಹೆಚ್. 27 ವರ್ಷ, ದೃಡಕಾಯ ಶರೀರ, 4 1/2 ಅಡಿ ಎತ್ತರ,  ಎಣ್ಣೆಗೆಂಪು ಬಣ್ಣ, ಕನ್ನಡ ಮಾತಾನಾಡುತ್ತಾಳೆ ಇವಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ .

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 19/06/2021 ರಂದು ಚಿಕ್ಕಬಳ್ಳೇಕೆರೆ ಗ್ರಾಮದ ರೇವಣ್ಣ ಎಂಬುವವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ನಮ್ಮಗಳನ್ನು ನೋಡಿ ಆರೋಪಿಯು ಓಡಿಹೋಗಿದ್ದು ಆತನ ಹೆಸರು ವಿಳಾಸ ತಿಳಿಯಲಾಗಿ ರೇವಣ್ಣ ಬಿನ್ ಗೋವಿಂದಪ್ಪ, ಚಿಕ್ಕಬಳ್ಳೇಕೆರೆ ವಾಸಿ ಎಂದು ತಿಳಿಯಿತು. ಆತನು ಬಿಟ್ಟುಹೋಗಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ ರಾಜಾವಿಸ್ಕಿಯ 35  ಮದ್ಯದ ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1229/- ರೂ ಅಗಿದ್ದು ಆರೋಪಿತನ ವಿರುದ್ದ  ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ತಿಪ್ಪೇಶ್.ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 19/06/2021 ರಂದು ಚಿಕ್ಕಬಳ್ಳೇಕೆರೆ ಗ್ರಾಮದ ರುದ್ರೇಶ  ಎಂಬುವವರು ಚಿಕ್ಕಬಳ್ಳೇಕೆರೆಯಲ್ಲಿ ಪಾಳುಬಿದ್ದಿರುವ ಶಾಲಾ ಕಟ್ಟಡದ ಹತ್ತಿರ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ನಮ್ಮಗಳನ್ನು ನೋಡಿ ಆರೋಪಿಯು ಓಡಿಹೋಗಿದ್ದು ಆತನ ಹೆಸರು ವಿಳಾಸ ತಿಳಿಯಲಾಗಿ ರುದ್ರೇಶ ಬಿನ್ ಮಲ್ಲಪ್ಪ, ಚಿಕ್ಕಬಳ್ಳೇಕೆರೆ ವಾಸಿ ಎಂದು ತಿಳಿಯಿತು. ಆತನು ಬಿಟ್ಟುಹೋಗಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ ರಾಜಾವಿಸ್ಕಿಯ 38  ಮದ್ಯದ ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1334 /- ರೂ ಅಗಿದ್ದು ಆರೋಪಿತನ ವಿರುದ್ದ  ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ತಿಪ್ಪೇಶ್.ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ   ಪೊಲೀಸ್ ಠಾಣೆ.

ದಿನಾಂಕ 19/06/2021 ರಂದು ತಿಮ್ಮನಹಳ್ಳಿ  ಗ್ರಾಮದ ಗಂಗಪ್ಪ   ಎಂಬುವವರು ಅಂಗಡಿಯ ಮುಂಬಾಗದ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಆರೋಪಿ ಗಂಗಪ್ಪನನ್ನು ವಶಕ್ಕೆ ಪಡೆದು  ಆತನ ಬಳಿಯಿದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ  180 ಎಂ.ಎಲ್ ನ ಒರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ  11  ಮದ್ಯದ ಪೌಚ್ ಹಾಗೂ 180 ಎಂ.ಎಲ್ ನ 8 ಪಿಎಂರೇರ್ ಬ್ಲೆಂಡ್ ಆಫ್ ಇಂಡಿಯನ್ ವಿಸ್ಕಿಯ 09 ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1553 /- ರೂ ಅಗಿದ್ದು ಆರೋಪಿತನ ವಿರುದ್ದ  ಗ್ರಾಮಾಂತರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಮುದ್ದಪ್ಪ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ಇತ್ತೀಚಿನ ನವೀಕರಣ​ : 25-06-2021 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080