ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

ಸಿ.ಎ. ಎನ್. ಪೊಲೀಸ್ ಠಾಣೆ.

ದಿನಾಂಕ: 20/07/2021 ರಂದು ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 05/07/2021 ರಂದು ಪಿರ್ಯಾದಿ ಮೊಬೈಲ್ ಗೆ ಯಾರೋ ಪೋನ್ ಮಾಡಿ ಮೇಸೇಜ್ ಹಾಕಿದ್ದು ಅದ್ದನ್ನು ಪಿರ್ಯಾದಿಯವರು ಒಫನ್ ಮಾಡಿ  ನೋಡಲಾಗಿ ಅದರಲ್ಲಿ ಜಾಬ್ ಅಫರ್ ಎಂದು ಇದ್ದು ಪಿರ್ಯಾದಿಯವರು ಲಿಂಕ್ ಕ್ಲಿಕ್ ಮಾಡಿ  ವ್ಯಾಟ್ಸ್ಪ್  ನಲ್ಲಿ ಮೇಸೇಜ್ ಬಂದಿದ್ದು ನಿಮಗೆ ಲಿಂಕ್ ಕಳುಹಿಸಿದ್ದು ಅದರಲ್ಲಿ ಒಪನ್ ಮಾಡಿ ಗೂಗಲ್ ಪೇ, ಪೋನ್ ಪೇ ಡಿಜಿಟಲ್ ಪೇ ಮುಖಾಂತರ ಹಣ ಹಾಕಿದರೆ ಪ್ರೋಸಸ್ ಕಂಪ್ಲಿಟ್ ಆಗುತ್ತದೆ ನಾವು ನಿಮಗೆ ಕಮೀಷನ್ ಹಣವನ್ನು ಕೊಡುತ್ತೇವೆಂದು ನಂಬಿಸಿ ಪಿರ್ಯಾಧಿಯವರಿಂದ ದಿನಾಂಕ 5/07/2021 ರಿಂದ 16/07/2021 ರ ವರೆಗೆ ಒಟ್ಟು 6,50,000ರೂಗಳನ್ನು ಪಿರ್ಯಾದಿ ಮತ್ತು ಅವರ ಸ್ನೇಹಿತರಿಂದ ಮತ್ತು ಸಂಬಂದಿಕರಿಂದ ಡಿಜಿಟಲ್ ಪೇಮೆಂಟ್ ಮಾಡಿ ಮೋಸ ಹೋಗಿರುತ್ತಾರೆಂದು ಈ ರೀತಿ ಮೋಸ ಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಹಣ ವಾಪಾಸ್ಸು ಕೊಡಿಸುವಂತೆ ನೀಡಿದ  ದೂರಿನ ಮೇರೆಗೆ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ಸಂಚಾರಿ  ಪೊಲೀಸ್ ಠಾಣೆ.

ದಿನಾಂಕ: 20/07/2021 ರಂದು ಪಿರ್ಯಾದಿ ಕಿರಣ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 19/07/2021 ರಂದು ರಾತ್ರಿ 12.00 ಗಂಟೆಯಿಂದ 2.00 ಗಂಟೆ ಮದ್ಯದ ಅವಧಿಯಲ್ಲಿ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಚಿಕ್ಕಕುರುಬರಹಳ್ಳಿ ಸಮುದಾಯ ಭವನದ ಮುಂಭಾಗದ ರಸ್ತೆಯಲ್ಲಿ ಪಿರ್ಯಾದಿಯವರ ಚಿಕ್ಕಪ್ಪನ ಮಗ ಅಕಾಶ್ ರವರಿಗೆ ಯಾವುದೋ ಒಂದು ವಾಹನವು ಅಪಘಾತವನ್ನುಂಟು ಮಾಡಿದ್ದು  ವಾಹನವನ್ನು ನಿಲ್ಲಿಸದೇ ಹೋಗಿದ್ದು ಆಕಾಶ್ ರವರಿಗೆ ಎಡಭಾಗದ ಹಣೆಯ ಮೇಲೆ ಮುಖಕ್ಕೆ ಕಿವಿಯ ಹತ್ತಿರ ಪೆಟ್ಟಾಗಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುವುದಾಗಿ ಅಪಘಾತ ಪಡಿಸಿದ ವಾಹನದ ಚಾಲಕನ ಮೇಲೆ ಕ್ರಮ  ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 20-07-2021 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080