ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:20-01-2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಕೋಡಿಹಳ್ಳಿ ಗ್ರಾಮದಲ್ಲಿ ಉದಯಕುಮಾರ್ ಬಿನ್ ಲೇಟ್ ಹುಲಿಯಪ್ಪ ಈತನು ಅವರ ಮನೆಗೆ ಹೋಗುವ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 50 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1756/- ರೂ ಅಗಿದ್ದು, ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಗೆನೋಜಾ ಕೆ.ಟಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ:20-01-2022 ರಂದು ಅಜ್ಜಂಫುರ ಠಾಣಾ ಸರಹದ್ದಿನ ಜಾವೂರು ಗ್ರಾಮ ವಾಸಿ ಮಲ್ಲಿಕಾರ್ಜುನ ರವರು ನೀಡಿದ ದೂರಿನಲ್ಲಿ ಪಿರ್ಯಾಧಿಯವರ ಅತ್ತೆ ಶ್ರೀಮತಿ ಉಮಾದೇವಿಯವರು ಪಿರ್ಯಾದಿಯ ಮನೆಯಲ್ಲಿದ್ದು ದಿನಾಂಕ:17.01.2022 ರಂದು ಸಂಜೆ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು  ಈವರೆಗೂ ಪಿರ್ಯಾಧಿಯವರು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಉಮಾದೇವಿ ಯವರ ಚಹರೆ 66 ವರ್ಷ, ಸಾದಾರಣ ಮೈಕಟ್ಟು, 5 ಅಡಿ ಎತ್ತರ, ಗೋದಿ ಮೈ ಬಣ್ಣ ಕನ್ನಡ ಮಾತಾನಾಡುತ್ತಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಇರುತ್ತದೆ ಕನ್ನಡಕ ಧರಿಸುತ್ತಾರೆ . ಮನೆಯಿಂದ ಹೋಗುವಾಗ ಬಿಳಿ ಮತ್ತು ಗುಲಾಬಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ಬೌಸ್ಲ ನ್ನು ಧರಿಸಿರುತ್ತಾರೆಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ:19-01-2022 ರಂದು ಪಿರ್ಯಾದಿ ದೌಲತ್ ಬಾಷಾ  ಇವರು ನೀಡಿದ ದೂರಿನಲ್ಲಿ ದಿನಾಂಕ:19-01-2022 ರಂದು ಪಿರ್ಯಾದಿಯ ಮಗ ಶಾಹಿದ್ ತನ್ನ ಬಾಭ್ತು ಕೆಎ-18 ಇ.ಡಿ. 7251 ರ ಸ್ಕೂಟಿಯಲ್ಲಿ ಕಲ್ಲುದೊಡ್ಡಿ ವಾಸಿ ಇರ್ಪಾನ್ ಎಂಬುವನನ್ನು ಕೂರಿಸಿಕೊಂಡು ನಲ್ಲಿ ಬರುತ್ತಿರುವಾಗ ಚಿಕ್ಕಮಗಳೂರು   ಸಮೀಫ ಲಕ್ಯಾ ಕ್ರಾಸ್ ಬಳಿ ದತ್ತಾತ್ರೇಯ ನರ್ಸರಿಯ ಮುಂಭಾಗ ತಿರುವಿನಲ್ಲಿ ಕೆಎ-18-ಬಿ-4820 ರ ಈಚರ್ ವಾಹನ ಚಾಲಕ  ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಪಿರ್ಯಾದಿ ಮಗ ಚಾಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ಪರಿಣಾಮ ಸ್ಕೂಟಿಯನ್ನು ಚಾಲನೆ ಮಾಡುತ್ತಿದ್ದ ಶಾಹೀದ್ ಬಾಷಾ ತೀವ್ರತರವಾದ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಸ್ಕೂಟಿಯಲ್ಲಿದ್ದ ಇರ್ಪಾನ್ ನಿಗೆ ಸಣ್ಣಪುಟ್ಟಗಾಯವಾಗಿದ್ದು, ಅಪಘಾತಕ್ಕೆ ಕಾರಣವಾದ ಈಚರ್ ವಾಹನದ ಚಾಲಕ ನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:19-01-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮಗ್ಗಲಮಕ್ಕಿ ಕ್ರಾಸ್ ನಲ್ಲಿ ಇರುವ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಲಿಯಾಸ್ ಬಿನ್ ಲೇಟ್ ಖಾಸಿಂ ಸಾಬ್ ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಮಟ್ಕಾ ಜೂಜಾಡಲು ಸಾರ್ವಜನಿಕರಿಂದ ಸಂಗ್ರಹಿಸಿದ  1410/- ರೂ,ನಗದು ಹಣವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಮೂಡಿಗೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ರವಿ ಜಿ.ಎ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬೈಕ್  ಕಳ್ಳತನ  ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:19-01-2022 ರಂದು ಚಿಕ್ಕಮಗಳೂರು ತಾಲ್ಲೋಕು ಬೂಚೇನಹಳ್ಳಿ ಕಾವಲ್ ವಾಸಿ ನಾಗರಾಜ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ 07-01-2022 ರಂದು ತನ್ನ ಬಾಬ್ತು ಕೆ-18-ಇಇ-3939 ಕೆಂಪು ಬಣ್ಣದ ಬಜಾಜ್ ಪ್ಲಾಟಿನಾ ಬೈಕ್ ನ್ನು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದು ಮಾರನೇ ದಿನ ದಿನಾಂಕ 08-01-2022 ರಂದು ನೋಡಿದಾಗ ಯಾರೋ ಕಳ್ಳರು ಸದರಿ ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ವರೆಗೂ ಬೈಕ್ ನ್ನು ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಬೈಕಿನ ಬೆಲೆ ಸುಮಾರು 25,000/- ರೂ ಗಳಾಗಿದ್ದು ಕಳ್ಳತನ ವಾಗಿರುವ ತನ್ನ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ  ಕೋರಿ ನೀಡಿದ ದೂರಿನ ಮೇರೆಗೆ  ಗ್ರಾಮಾಂತರ   ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 20-01-2022 09:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080