ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ:20/02/2022 ರಂದು ಪಿರ್ಯಾದಿ ರುದ್ರೇಶ್ ಬಿನ್ ಮೂರ್ತಪ್ಪ. ಇವರು ನೀಡಿದ ದೂರಿನಲ್ಲಿ ದಿನಾಂಕ 19/02/2022 ರಂದು ಪಿರ್ಯಾದಿ ತಂಗಿ ಗಂಡ ಧರ್ಮ ಇವರನ್ನು ಮದೂಸೂದನ ಎಂಬುವರು ತಮ್ಮ ಬಾಬ್ತು ಬೈಕಿನಲ್ಲಿ ಕೂರಿಸಿಕೊಂಡು  ಕಡೂರು ಕೆ.ಎಸ್.ಅರ್.ಟಿ.ಸಿ, ಬಸ್ ನಿಲ್ದಾಣದಿಂದ ಚೆಕ್ ಪೋಸ್ಟ್ ಕಡೆ ಬರುತ್ತಿರುವಾಗ ಬೈಕ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿವೈಡರ್ ಗೆ ಹೊಡೆದ ಪರಿಣಾಮ ಧರ್ಮ ಇವರಿಗೆ ತಲೆಗೆ ಮೈಕೈಗೆ  ಪೆಟ್ಟಾಗಿ, ಧರ್ಮಪರನ್ನು ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 20-02-2022 ರಂದು ಮೃತಪಟ್ಟಿರುವುದಾಗಿ ತಿಳಿಸಿದ್ದು  ಧರ್ಮ್ಪರವರ ಸಾವಿಗೆ ಕಾರಣವಾಗಿರುವ  ಬೈಕ್ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ  ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:19/02/2022 ರಂದು ಪಿರ್ಯಾದಿ ಸತೀಶ್ ಹೆಚ್.ಆರ್. ಇವರು ನೀಡಿದ ದೂರಿನಲ್ಲಿ ದಿನಾಂಕ 19/02/2022 ರಂದು ಪಿರ್ಯಾದಿ ತಂದೆ ರುದ್ರಪ್ಪರವರು ತನ್ನ ಬಾಬ್ತು ಕೆಎ-66-ಕೆ-7295 ರ ಹಿರೋಹೊಂಡಾ ಬೈಕನ್ನು ಚಾಲನೆ ಮಾಡಿಕೊಂಡು ತರೀಕೆರೆಗೆ ಹೋಗುತ್ತಿರುವಾಗ ಕೆ.ಹೊಸೂರು ಬಳಿ ಅಜ್ಜಂಪುರ ರಸ್ತೆಯಲ್ಲಿ ಹೋಗುತ್ತಿದ್ದ ಟ್ಯಾಕ್ಟರ್ ಚಾಲಕ ಟ್ಯಾಕ್ಟರ್ ಬ್ರೇಕ್ ನ್ನು ತಕ್ಷಣ ಹಾಕಿದ್ದರಿಂದ ಟ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆಸಿದ ಪರಿಣಾಮ ರುದ್ರಪ್ಪ ನವರಿಗೆ  ರಸ್ತೆ ಮೇಲೆ ಬಿದ್ದು ತಲೆಗೆ ಮೈಕೈಗೆ  ಪೆಟ್ಟಾಗಿ, ರುದ್ರಪ್ಪರನ್ನು ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು , ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು  ರುದ್ರಪ್ಪರವರ ಸಾವಿಗೆ ಕಾರಣವಾಗಿರುವ  ಟ್ಯಾಕ್ಟರ್ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಾಳೂರು ಪೊಲೀಸ್ ಠಾಣೆ.

ದಿನಾಂಕ:19-02-2022 ರಂದು ಬಾಳೂರು ಠಾಣಾ ಸರಹದ್ದಿನ ನಿಡುವಾಳೆ ಗ್ರಾಮದ ವಾಸಿ ಬಂಗಾರಪ್ಪ ಬಿನ್ ಫಕೀರಪ್ಪ  ಎಂಬುವನು ಚಿಕನ್ ಅಂಗಡಿಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 90 ಎಂ.ಎಲ್.ನ 33 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ 923/-ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು  ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ರೇಣುಕಮ್ಮ ಡಿ.ವಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:19-02-2022 ರಂದು ಗೋಣಿಬೀಡು ಠಾಣಾ ಸರಹದ್ದಿನ ಹೊಸಪುರ ಗ್ರಾಮದ ವಾಸಿ ಸುನೀಲ್ ಕುಮಾರ್  ಎಂಬುವನು  ಅವರ ಅಂಗಡಿಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 180 ಎಂ.ಎಲ್.ನ 10 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ 867/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು  ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಧನಂಜಯ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಣಕಲ್  ಪೊಲೀಸ್ ಠಾಣೆ.

ದಿನಾಂಕ:19-02-2022 ರಂದು ಬಣಕಲ್ ಠಾಣಾ ಸರಹದ್ದಿನ ಬೆಟ್ಟಗೆರೆ ಗ್ರಾಮದ ವಾಸಿ ಸುಪ್ರೀತ್ ಬಿ.ಆರ್. ಬಿನ್ ಲಕ್ಷ್ಮಣಗೌಡ ಎಂಬುವನು ಯತೀಶ್ ಅವರ ಮನೆಯ ಮುಂದೆ  ಅಕ್ರಮವಾಗಿ ಸಾರ್ವಜನಿಕರಿಗೆ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿದ್ದ ಮದ್ಯ ಖಾಲಿ ಬಾಟಲಿ ಮತ್ತು ನೀರಿನ ಬಾಟಲಿಯನ್ನು ಅಮಾನತ್ತುಪಡಿಸಿಕೊಂಡು ಬಂದು  ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಗಾಯತ್ರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:19-02-2022 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಬ್ಯಾಲದಾಳು ವಾಸಿ ಬಿ.ಸಿ. ಕುಮಾರ ಬಿನ್ ಚಂದ್ರಪ್ಪ  ಎಂಬುವನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 90 ಎಂ.ಎಲ್.ನ 30 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ 1050/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು  ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಹರೀಶ್ ಆರ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 20-02-2022 08:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080