ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:20/03/2022 ರಂದು ಪಿರ್ಯಾದಿ  ಎಂ.ಪಿ. ನಾಗರಾಜಪ್ಪ ಬಿನ್ ಪುಟ್ಟಬಸಪ್ಪ, ಮರವಂಜಿ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ:20/03/2022 ರಂದು ಪಿರ್ಯಾದಿ ತಮ್ಮನಾದ ಸಿದ್ದಲಿಂಗಪ್ಪ ಇವರು ತಮ್ಮ ಬಾಬ್ತು ಕೆಎ-18-ಕ್ಯೂ-2342 ಹಿರೋಹೊಂಡಾ ಬೈಕಿನಲ್ಲಿ ತೋಟಕ್ಕೆ ಹೋಗಲೆಂದು ಮಂಜುಳಮ್ಮ ಕೋಂ ರಾಜಪ್ಪರವರನ್ನು ಬೈಕಿನಲ್ಲಿ ಕೂರಿಸಿಕೊಂಡು ತೋಟಕ್ಕೆ ಹೋಗುತ್ತಿರುವಾಗ ಎಂ.ಎಸ್. ರೇವಣ್ಣ ರವರ ಮನೆಯ ಸಮೀಪ ಮರವಂಜಿ- ಕಡೂರು ರಸ್ತೆಯಲ್ಲಿ ಪಿರ್ಯಾದಿಯು ಮರವಂಜಿ ಕಡೆಯಿಂದ ಹೋಚಿಹಳ್ಳಿ ಕಡೆಗೆ ಹೋಗುವಾಗ ಎದುರುಗಡೆಯಿಂದ ರುದ್ರೇಶ್ ಬಿನ್ ರೇವಣ್ಣ ಸಿದ್ದಪ್ಪ ರವರು ಅವರ ಮಗ ಜೀವನ್ ನೊಂದಿಗೆ ತಮ್ಮ ಬಾಬ್ತು ಕೆಎ-03-ಇಬಿ 5156 ರ ನಂಬರಿನ ಸ್ಲೆಂಡರ್ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಿದ್ದಲಿಂಗಪ್ಪ ರವರು  ಚಾಲಾಯಿಸುತ್ತಿದ್ದ  ಬೈಕಿಗೆ ಡಿಕ್ಕಿ ಪರಿಣಾಮ ಪಿರ್ಯಾದಿ ತಮ್ಮ ಸಿದ್ದಲಿಂಗಪ್ಪ, ಮಂಜಮ್ಮ್ಪ ರುದ್ರೇಶ್ ಹಾಗೂ ಜೀವನ್ ರವರಿಗೆ ಪೆಟ್ಟಾಗಿದ್ದು ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು, ಸಿದ್ದಲಿಂಗಪ್ಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಕೆಎ-03-ಇಬಿ-5156 ಬೈಕ್ ಚಾಲಕ ರುದ್ರೇಶ್ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ. 

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:20/03/2022 ರಂದು ಬಾಳೆಹೊನ್ನೂರು ಠಾಣಾ ಸರಹದ್ದಿನ ಹುಯಿಗೆರೆ ಗ್ರಾಮದ ಕುಳವಡಿ ಕಾಲೋನಿ ವಾಸಿಗಳಾದ 1] ಜಗದೀಶ 2] ಕೆಂಚಯ್ಯ 3] ಸುಬ್ಬಯ್ಯ ಎಂಬುವರು ಹುಯಿಗೆರೆ ಗ್ರಾಮದ ನಾಗರಮಕ್ಕಿ ತಿಮ್ಮೇಗೌಡರವರ ಕಾಫಿ ಮತ್ತು ಅಡಿಕೆ ತೋಟದ ಬದಿಯಲ್ಲಿ ಹರಿಯುತ್ತಿರುವ ಭದ್ರಾ ನದಿಯ ಮದ್ಯದಲ್ಲಿ ಬೆಳೆದಿರುವ ಕುರುಚಲು ಗಿಡಗಳ ಮದ್ಯ ಕಳ್ಳಭಟ್ಟಿ ಸಾರಾಯಿ ತಯಾರು ಮಾಡಿ ಮಾರಾಟ ಮಾಡಲು ಒಂದು ಬ್ಯಾರಲ್ ನಲ್ಲಿ 40 ಲೀಟರ್ ನಷ್ಟು ಕೊಳೆಯನ್ನು ಶೇಖರಿಸಿ ಇಟ್ಟಿದ್ದು, ಸ್ವಲ್ಪ ದೂರದಲ್ಲಿ ಕಲ್ಲಿನಿಂದ ತಯಾರಿಸಿದ ಒಲೆ ಇದ್ದು,  ಸ್ಥಳದಲ್ಲಿ ಇದ್ದ ಬ್ಯಾರಲ್ ಮತ್ತು ಕೊಳೆಯನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿತರ ವಿರುದ್ದ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ನಿತ್ಯಾನಂದ ಗೌಡ ಪಿ.ಡಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರು ತ್ತಾರೆ

ಇತ್ತೀಚಿನ ನವೀಕರಣ​ : 20-03-2022 08:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080