ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಮತ್ತು ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ;
ಸಿ. ಇ. ಎನ್.   ಪೊಲೀಸ್  ಠಾಣೆ
ದಿನಾಂಕ:20/05/2021 ರಂದು  ಚಿಕ್ಕಮಗಳೂರು ಮಲ್ಲಂದೂರು ರಸ್ತೆಯ ವೆಂಕಟೇಶ್ವರ ರೋಡ್ ವೇಸ್ ಕಛೇರಿಯ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಇಬ್ಬರು ಅಕ್ರಮವಾಗಿ  ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಆರೋಪಿತರಾದ ಗಿರೀಶ್ ಸಿ.ಎಂ.ಬಿನ್ ಸಿ. ಎನ್. ಮಂಜುನಾಥ ಮತ್ತು ರಾಜೇಶ್ ಜಿ.ಬಿನ್ ಲೇಟ್ ಗೋಪಾಲ ರವರನ್ನು ವಶಕ್ಕೆ ಪಡೆದು ಸದರಿಯವರು ಅಕ್ರಮವಾಗಿ ಹೊಂದಿದ್ದ 1. ಓರಿಜನಲ್ ಚಾಯ್ಸ್ ನ 45 ಟೆಟ್ರಾ ಪ್ಯಾಕ್  2. 180 ಎಂ.ಎಲ್. ನ ಓರಿಜನಲ್ ಚಾಯ್ಸ್ ನ 17 ಟೆಟ್ರಾ ಪ್ಯಾಕ್ ಒಟ್ಟು ಬೆಲೆ 2,775.27/- ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಅರ್.ಪಿ. ಗವಿರಾಜ್ ಮತ್ತು ಸಿಬ್ಬಂದಿ ಯವರು  ಪಾಲ್ಗೊಂಡಿರುತ್ತಾರೆ.


ಲಿಂಗದಹಳ್ಳಿ  ಪೊಲೀಸ್  ಠಾಣೆ
ದಿನಾಂಕ:20/05/2021 ರಂದು ಲಿಂಗದಹಳ್ಳಿ ಠಾಣಾ ವ್ಯಾಫ್ತಿ ಜಯಪುರ ಗ್ರಾಮದ ವಾಸಿ ರಾಮಮೂತರ್ಿ ಇವರು ಮದ್ಯ ಪ್ಯಾಕೇಟ್ಗಳನ್ನು  ಮಾರಾಟ ಮಾಡಲು ಬಳ್ಳಾವರದ ಕಡೆಯಿಂದ ನಂದಿಬಟ್ಟಲು ಕಾಲೋನಿ ಬೈಕ್ ನಲ್ಲಿ  ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ರಾಮಮೂತರ್ಿ ರವರನ್ನು ವಶಕ್ಕೆ ಪಡೆದು ಸದರಿಯವರು ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಹೊಂದಿದ್ದ 1. ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 35 ಟೆಟ್ರಾ ಪ್ಯಾಕ್  ಒಟ್ಟು ಬೆಲೆ 1229/- ಮದ್ಯವನ್ನು ಮತ್ತು ಕೆಎ-66-ಹೆಚ್-0826 ಟಿ.ವಿ.ಎಸ್. ಎಕ್ಸ್. ಎಲ್. 100 ಬೈಕ್ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಫೀಕ್ ಎಂ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.


ಲಿಂಗದಹಳ್ಳಿ  ಪೊಲೀಸ್  ಠಾಣೆ
ದಿನಾಂಕ:20/05/2021 ರಂದು ಲಿಂಗದಹಳ್ಳಿ ಠಾಣಾ ವ್ಯಾಫ್ತಿ ಬಳ್ಳಾವರ ಗ್ರಾಮದ ವಾಸಿ  ತಿಮ್ಮಪ್ಪ ಬಿನ್ ಬೆಟ್ಟಯ್ಯ ಅಕ್ರಮವಾಗಿ ಮದ್ಯ ಪ್ಯಾಕೇಟ್ಗಳನ್ನು  ಮಾರಾಟ ಮಾಡಲು ಬಳ್ಳಾವರದ ಕಡೆಯಿಂದ ನಂದಿಬಟ್ಟಲು ಕಾಲೋನಿ ಬೈಕ್ ನಲ್ಲಿ  ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿ ತಿಮ್ಮಪ್ಪ  ರವರನ್ನು ವಶಕ್ಕೆ ಪಡೆದು ಸದರಿಯವರು ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಹೊಂದಿದ್ದ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 30 ಟೆಟ್ರಾ ಪ್ಯಾಕ್  ಒಟ್ಟು ಬೆಲೆ 1229/- ಮದ್ಯವನ್ನು ಮತ್ತು ಕೆಎ-18-ಕೆ-5344 ಕವಾಸಕಿ  ಬಾಕ್ಸರ್ ಬೈಕ್ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಫೀಕ್ ಎಂ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.


ಲಿಂಗದಹಳ್ಳಿ  ಪೊಲೀಸ್  ಠಾಣೆ
ದಿನಾಂಕ:20/05/2021 ರಂದು ಲಿಂಗದಹಳ್ಳಿ ಠಾಣಾ ವ್ಯಾಫ್ತಿ ಕಲ್ಲತ್ತಿಪುರ ವಾಸಿಗಳಾದ ಮೋಹನ ಮತ್ತು ನಾಗರಾಜ ರವರು  ಅಕ್ರಮವಾಗಿ ಮದ್ಯ ಪ್ಯಾಕೇಟ್ಗಳನ್ನು  ಮಾರಾಟ ಮಾಡಲು ಬಳ್ಳಾವರದ ಕಡೆಯಿಂದ ಕಲ್ಲತ್ತಿಪುರ ಗ್ರಾಮದ ಕಡೆಗೆ  ಬೈಕ್ ನಲ್ಲಿ  ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳಾದ ಮೋಹನ ಮತ್ತು ನಾಗರಾಜ ರವರು ರವರನ್ನು ವಶಕ್ಕೆ ಪಡೆದು ಸದರಿಯವರು ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಹೊಂದಿದ್ದ  ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 30 ಟೆಟ್ರಾ ಪ್ಯಾಕ್  ಮದ್ಯವನ್ನು ಮತ್ತು ಆರ್.ಟಿ.ಆರ್.-160 ಅಪಾಚಿ ಬೈಕ್ ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಫೀಕ್ ಎಂ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.


ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ;
ಹರಿಹರಪುರ ಪೊಲೀಸ್  ಠಾಣೆ
ದಿನಾಂಕ:20/05/2021 ರಂದು ಹರಿಹರಪುರ ಠಾಣಾ ವ್ಯಾಪ್ತಿ ಕಮ್ಮರಡಿ ಗ್ರಾಮದ ಪೇಟೆಯಲ್ಲಿ ಚಾಲ್ಮನೆ ಪಿ.ಡಿ.ಓ ಕರಿಯಪ್ಪ, ಗ್ರಾಮ ಲೆಕ್ಕಗರಾದ ಶೃತಿ ಮತ್ತು ಶಿವಪ್ಪ ರವರು ಗಸ್ತಿನಲ್ಲಿ ಇದ್ದಾಗ ಭವಾನಿ ಸ್ಟೋರ್ ಅಂಗಡಿಯ ಬಳಿ ಸಾರ್ವಜನಿಕರನ್ನು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡದೇ ಗುಂಫು ಸೇರಿಸಿಕೊಂಡು ಕೋವಿಡ್ ನಿಯಮವನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು ಅಂಗಡಿ ಮಾಲೀಕನಾದ ರಾಜಸಿಂಗ್ ರವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಮನುಷ್ಯ ಕಾಣೆ ಪ್ರಕರಣ ;
ಸಖರಾಯಪಟ್ಟಣ ಪೊಲೀಸ್ ಠಾಣೆ.
ದಿನಾಂಕ 19/05/2021 ರಂದು ಸಖರಾಯಪಟ್ಟಣ ಠಾಣಾ ವ್ಯಾಪ್ತಿ ಅಗ್ರಹಾರ ತಾಂಡ್ಯ ವಾಸಿ ಮೋಹನ ನಾಯ್ಕ  ರವರು ನೀಡಿದ ದೂರಿನಲ್ಲಿ ದಿನಾಂಕ:25/03/2021 ರಂದು  ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ತನ್ನ ಹೆಂಡತಿ ಸರಸ್ವತಿ ಬಾಯಿ ಮನೆಯಲ್ಲಿ ಇದ್ದವಳು  ಹೇಳದೆ ಕೇಳದೆ  ಮನೆಯಿಂದ ಹೋದವಳು ಈವರೆಗೂ ಮನೆಗೆ ವಾಪಾಸ್ಸು ಬಂದಿರುವುದಿಲ್ಲ,  ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ   ಹೆಂಡತಿ ಚಹರೆ:-  ಹೆಸರು: ಸರಸ್ವತಿ ಬಾಯಿ, ವಯಸ್ಸು 19 ವರ್ಷ, ಎಣ್ಣೆಗೆಂಪು ಬಣ್ಣ, 4.5 ಅಡಿ ಎತ್ತರ , ಎರಡೂ ಕೈಗಳಲ್ಲಿ 7 ಬೆರಳುಗಳಿರುತ್ತವೆ. ಕನ್ನಡ ಮತ್ತು ಲಂಬಾಣಿ ಬಾಷೆ ಮಾತನಾಡುತ್ತಾಳೆ ಇತ್ಯಾದಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 20-05-2021 08:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080