ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;19/06/2022 ರಂದು 23.50 ಗಂಟೆಗೆ ಪಿರ್ಯಾದಿ ಮುರುಳಿರಾಜು ಬಿನ್ ಕಾಂತರಾಜು ಲಷ್ಕರ್ ಮೊಹಲ್ಲಾ ಮೈಸೂರು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;19/06/2022 ರಂದು ಪಿರ್ಯಾದಿ ತಮ್ಮ ರವರು ತನ್ನ ಸಂಸಾರದೊಂದಿಗೆ   ಬರುತ್ತಿರುವಾಗ ಕೆಎ-53-ಪಿ-2061 ನಂಬರಿನ ರಿಡ್ಜ್ ಕಾರಿನಲ್ಲಿ ಮಂಗಳೂರಿನಿಂದ ನರಸಿಂಹರಾಜು ರವರು ಚಾಲನೆ ಮಾಡಿಕೊಂಡು ಬರುತ್ತಿರುವಾಗ ಮೂಡಿಗೆರೆ ಬಳಿ ಮುತ್ತಿಗೆಪುರ ಬಳಿ ಚಾಲಕ  ದುಡುಕಿನಿಂದ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನಲ್ಲಿ ನಾಲ್ಕು ಜನರಿಗೂ ಸಹ ಇದ್ದ ಕಿರಣ್ ಕುಮಾರ್ ತಲೆಗೆ ತೀವ್ರತರವಾದ ಪೆಟ್ಟು ಬಿದ್ದು ಮೃತಪಟ್ಟಿದ್ದು, ನರಸಿಂಹರಾಜು ರವರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ. ಭಾರತಿ ಮತ್ತು ಪ್ರೇರಣಾ ರವರಿಗೆ ಪೆಟ್ಟಾಗಿದ್ದು ಅಪಘಾತಪಡಿಸಿದ ಕಾರಿನ  ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ

ಕಳ್ಳತನ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ;19/06/2022 ರಂದು ಪಿರ್ಯಾದಿ ರೇಣುಕಾಸ್ವಾಮಿ ಬಿನ್ ಲೇಟ್ ಧನಂಜಯ್ಯ , ವೆಂಕಟೇಶ ನಗರ , ಕಡೂರು ಟೌನ್ ವಾಸಿ ನೀಡಿದ ದೂರಿನಲ್ಲಿ ಪಿರ್ಯಾದಿ ದಿನಾಂಕ17/06/2022 ರಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು , ವಾಪಾಸ್ಸು ಬಂದು ನೋಡಲಾಗಿ ಮನೆಯ ಮುಂಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಹೋಗಿ ಬೆಡ್ಡ ರೂಮಿನ ಕಪಾಟನ್ನು ತೆಗೆದು ಅದರಲ್ಲಿ ಇಟ್ಟಿದ್ದ 40 ಗ್ರಾಂ ತೂಕದ ಚಿನ್ನದ ಸರ ಮತ್ತು 10 ಗ್ರಾಂ ತೂಕದ ಒಂದು ಸರ ಒಟ್ಟು 2,25,000/- ರೂ ಮೌಲ್ಯದ ಅಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಭರಣಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ;20/06/2022 ರಂದು ಪಿರ್ಯಾದಿ ಮೊಹಮ್ಮದ್ ಇಮ್ರಾನ್ ಬಿನ್ ಇದಿನಬ್ಬ, ಪಾಯಿಸ್ ಕಾಂಪೌಂಡ್ ಚಿಕ್ಕಮಗಳೂರು ಟೌನ್ ವಾಸಿ ನೀಡಿದ ದೂರಿನಲ್ಲಿ ಪಿರ್ಯಾದಿ ದಿನಾಂಕ;08/06/2022 ರಂದು  ತನ್ನ ಬಾಭ್ತು ಕೆಎ-18-ಇಜಿ-3463 ಬೈಕ್ ಅನ್ನು ಸಂಜೆ ವೈಷ್ಯಾ ಹಾಸ್ಟೇಲ್ ಮುಂಭಾಗ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು ನಂತರ ಬಂದು ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಬೈಕಿನ ಬೆಲೆ ಸುಮಾರು 40,000/- ರೂ ಅಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗಾಂಜಾ ಸೇವನೆ ಪ್ರಕರಣಗಳು;

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ:19/06/2022 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಗ್ರಾಮಾಂತರ ಠಾಣಾ ಸರಹದ್ದಿನ ಕೈಮರ ಹೊಸಳ್ಳಿಯ ಈಸ್ಟ್ ರ್ನ್ ಗಿರಿ ಹೋಂ ಸ್ಟೇ ಸಮೀಪ ಮಧು ಬಿ. ಆರ್. ಬಿನ್ ರಾಜು  ಬೊಮ್ಮೇನಹಳ್ಳಿ ಗ್ರಾಮ ಚಿಕ್ಕಮಗಳೂರು ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು, ಸದರಿ ಅಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಚಿಂತನ್ ಕೆ.ಆರ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ:19/06/2022 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಗ್ರಾಮಾಂತರ ಠಾಣಾ ಸರಹದ್ದಿನ ಕೈಮರ ಹೊಸಳ್ಳಿಯ ಈಸ್ಟ್ ರ್ನ್ ಗಿರಿ ಹೋಂ ಸ್ಟೇ ಸಮೀಪ ಹೇಮಂತಕುಮಾರ್ ಕೆ. ಬಿನ್ ಕೃಷ್ಣಮೂರ್ತಿ,  ಮಲ್ಲೇನಹಳ್ಳಿ ಗ್ರಾಮ ಚಿಕ್ಕಮಗಳೂರು ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು, ಸದರಿ ಅಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಚಿಂತನ್ ಕೆ.ಆರ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:20/06/2022 ರಂದು ಚಿಕ್ಕಮಗಳೂರು ನಗರದ ಡಿ.ಸಿ.ಎ.ಜಿ. ಕಾಲೇಜಿನ ಹಿಂದೂ ರುದ್ರಭೂಮಿ ಹತ್ತಿರ  ಸಂತೋಷ ಕುಮಾರ್ ಎಂ.ಬಿ. ಬಿನ್ ಬೀರೇಗೌಡ ಮಾಚೇನಹಳ್ಳಿ ಗ್ರಾಮ ಚಿಕ್ಕಮಗಳೂರು ವಾಸಿ ಹಾಗೂ ಚಿಕ್ಕಮಗಳೂರು ಸಂತೆ ಮೈದಾನದ ಬಳಿ ಸಾರ್ವಜನಿಕ ಪಾರ್ಕ್ ಬಳಿ  ಪುನೀತ್ ಎಂ.ಟಿ. ಬಿನ್ ತೀರ್ಥಕುಮಾರ, ವಾಸ ಮಾಚೇನಹಳ್ಳಿ ಚಿಕ್ಕಮಗಳೂರು ಮತ್ತು ತಮಿಳು ಕಾಲೋನಿಯ ರಾಜ ಕಾಲುವೆಯ ಪಕ್ಕದಲ್ಲಿ ಮೊಹಮದ್ ನಯಾಜ್ ಬಿನ್ ಮೋಹೀದ್ದಿನ್ ಖಾನ್ ವಾಸ ಕಾವಲು ಬಯಸಂದ್ರ , ಬೆಂಗಳೂರು  ಇವರು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಠಾಣೆ ಎ.ಎಸ್.ಐ. ಡಿ. ಹೇಮಚಂದ್ರೇಗೌಡ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;19/06/2022 ರಂದು ಪಿರ್ಯಾದಿ ಅಮೀತ್ ಬಿ.ಆರ್. ಬಿನ್ ಲೇಟ್ ರುದ್ರಮೂರ್ತಿ ವಾಸ ಬುಕ್ಕಂಬುದಿ ತರೀಕೆರೆ  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಅಕ್ಕ ದಿವ್ಯ ಬಿ.ಅರ್. ದಿನಾಂಕ; 18/06/2022 ರಂದು ಸಂಜೆ ಟೈಲರ್ ಅಂಗಡಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ದಿವ್ಯ,   24 ವರ್ಷ,  ಎಣ್ಣೆಗೆಂಪು ಬಣ್ಣ, ಸಾದಾರಣ ಮೈ ಕಟ್ಟು, ದುಂಡುಮುಖ,  ಕನ್ನಡ, ಬಾಷೆ ಮಾತಾನಾಡುತ್ತಾಳೆ,  ಬಿಸ್ಕೆಟ್ ಕಲರ್ ಚೂಡಿದಾರ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಅಕ್ಕ ದಿವ್ಯ  ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ;20/06/2022 ರಂದು ಪಿರ್ಯಾದಿ ದೇವರಾಜ್ ಬಿನ್ ಚಿನ್ನಬೋವಿ, ವಾಸ ಮೇದರಹಳ್ಳಿ ಚಿಕ್ಕಮಗಳೂರು  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತಂದೆ ಚಿನ್ನ ಬೋವಿ ಬಿನ್ ಬಳ್ಳೆರಾಮ ಬೋವಿ ಇವರು  ಈಗ್ಗೆ ಒಂದು ತಿಂಗಳ ಹಿಂದೆ ಮನೆಯಿಂದ ಹೋದವರು ಮನೆಯಿಂದ ಹೋದವರು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ   ಚಿನ್ನ ಬೋವಿ,   60 ವರ್ಷ, 5.2 ಅಡಿ ಎತ್ತರ,  ಎಣ್ಣೆಗೆಂಪು ಬಣ್ಣ, ಸಾದಾರಣ ಮೈ ಕಟ್ಟು, ಕುರುಚಲು ಗಡ್ಡ ಬಿಟ್ಟಿದ್ದು, ಕನ್ನಡ, ಬಾಷೆ ಮಾತಾನಾಡುತ್ತಾಳೆ,  ಬಣ್ಣದ ಪಟ್ಟೆ ಪಟ್ಟೆ ಶರಟು  ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ತಂದೆ  ಚಿನ್ನಾ ಬೋವಿ  ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:19-06-2022 ರಂದು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಗೌಡನಹಳ್ಳಿ ಬ್ರೀಡ್ಜ್ ಹತ್ತಿರ ಮಲ್ಲೇಶ್ ಬಿನ್ ಸಿದ್ದೇಗೌಡ, ವಾಸ ಗೌಡನಹಳ್ಳಿ ಗ್ರಾಮ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 180 ಎಂ.ಎಲ್. ನ 08 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು ಖಾಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಕೆ.ಟಿ.ಗೆನೋಜಾ   ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಯಗಟಿ ಪೊಲೀಸ್ ಠಾಣೆ.

ದಿನಾಂಕ:20-06-2022 ರಂದು ಯಗಟಿ ಪೊಲೀಸ್ ಠಾಣಾ ಸರಹದ್ದಿನ ಚೌಳಹಿರಿಯೂರು ಗ್ರಾಮದಲ್ಲಿ ತಿಮ್ಮಪ್ಪ ಬಿನ್ ರಾಮದಾಸಪ್ಪ ವಾಸ ಚೌಳಹಿರಿಯೂರು, ಈತನು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಮನೆ ಅಂಗಡಿಯ ಮುಂದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 42 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1475/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಯಗಟಿ ಠಾಣಾ ಪಿ.ಎಸ್.ಐ. ಶಶಿಕುಮಾರ್  ವೈ. ಎಸ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

 

 

ಇತ್ತೀಚಿನ ನವೀಕರಣ​ : 20-06-2022 07:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080