ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ:20/10/2021 ರಂದು ಅಜ್ಜಂಫುರ ತಾಲ್ಲೋಕು ನಾಗವಂಗಲ ಗ್ರಾಮದಲ್ಲಿ ಮಂಜುನಾಥ ಬಿನ್ ನಾರಾಯಣಪ್ಪ   ರವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿ ದಾಳಿ ವೇಳೆ ಓಡಿ ಹೋಗಿದ್ದು ,  ಆರೋಪಿತನು ಅಕ್ರಮವಾಗಿ ಹೊಂದಿದ್ದ ಓರಿಜಿನಲ್  ಚಾಯ್ಸ್ ವಿಸ್ಕಿಯ 90 ಎಂ.ಎಲ್. ನ 39 ಟೆಟ್ರಾಪ್ಯಾಕ್ ಒಟ್ಟು ಮದ್ಯದ ಬೆಲೆ 1370/- ರೂ ಗಳಾಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಲಿಂಗರಾಜು ಹೆಚ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

 ದಿನಾಂಕ 19/10/2021 ರಂದು ಪಿರ್ಯಾದಿ ರಾಜಪ್ಪ ಬಿನ್ ದೇವಿರಪ್ಪ ಇವರ ಮಗ ಪವನ್ ಕುಮಾರ್ 18 ವರ್ಷ ಈತನು ತನ್ನ ಸ್ನೇಹಿತನ ಬೈಕ್ ನಂ ಕೆಎ-66-ಜೆ-6564 ರ ಮೋಟಾರ್ ಸೈಕಲ್ ನಲ್ಲಿ ಮಾಡಾಳು ಗ್ರಾಮದಿಂದ ರಾಜನಸಿರಿಯೂರು ಗ್ರಾಮದ ಕಡೆಗೆ ಹೋಗುತ್ತಿರುವಾಗ ಭಕ್ತರಹಳ್ಳಿ ಗಡಿ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಬಂದ ಕೆಎ-18-ಟಿಬಿ-2323 ರ ಟ್ಯಾಕ್ಟರ್  ಚಾಲಕ ತನ್ನ ಟ್ಯಾಕ್ಟರ್ ನ್ನು ದುಡುಕು ಮತ್ತು ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಮಗ ಚಾಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಅಪಘಾತಪಡಿಸಿದ್ದು, ಅಪಘಾತದಲ್ಲಿ ಪಿರ್ಯಾದಿ ಮಗನಿಗೆ ಎದೆಗೆ ಮೈಕೈಗೆ ಪೆಟ್ಟಾಗಿದ್ದು, ಅಸ್ಪತ್ರೆಗೆ ದಾಖಲಿಸಿದ್ದು ಪವನ್ ಕುಮಾರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು,  ಅಪಘಾತಪಡಿಸಿದ ಟ್ಯಾಕ್ಟರ್  ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 20-10-2021 08:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080