ಅಭಿಪ್ರಾಯ / ಸಲಹೆಗಳು

ಕಳ್ಳತನ   ಪ್ರಕರಣ.

ಕಡೂರು  ಪೊಲೀಸ್ ಠಾಣೆ.

ದಿನಾಂಕ:20-12-2021 ರಂದು ಕಡೂರು  ಪೊಲೀಸ್ ಠಾಣಾ ಸರಹದ್ದಿನ ಕಡೂರು ದೊಡ್ಡಪೇಟೆ ವಾಸಿ ಹೊನ್ನಮ್ಮ ಕೋಂ ಶ್ರೀನಿವಾಸ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ: 19/12/2021 ರಂದು ಕೆರೆ ಸಂತೆ ಗ್ರಾಮದಲ್ಲಿ  ಮಹಾಲಕ್ಷ್ಮಿ ದೇವಸ್ತಾನದ ಜಾತ್ರೆ ಗೆ ಹೋಗಿದ್ದು ಮದ್ಯಾಹ್ನ 1-00 ಗಂಟೆ  ಸಮಯದಲ್ಲಿ ಜನಸಂದಣಿಯಲ್ಲಿ ಯಾರೋ ಕಳ್ಳರು  ಕೊರಳಿನಲ್ಲಿ ಇದ್ದ 55 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸರದ ಬೆಲೆ 2,40,000/- ರೂ ಗಳಾಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಚಿನ್ನದ ಸರವನ್ನು ಕೊಡಿಸುವಂತೆ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಡೂರು  ಪೊಲೀಸ್ ಠಾಣೆ.

ದಿನಾಂಕ:20-12-2021 ರಂದು ಕಡೂರು  ಪೊಲೀಸ್ ಠಾಣಾ ಸರಹದ್ದಿನ ಕಡೂರು ಹರುವನಹಳ್ಳಿ ವಾಸಿ ಗಂಗಮ್ಮ ಕೋಂ ಹೊನ್ನಪ್ಪ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ: 19/12/2021 ರಂದು ಕೆರೆ ಸಂತೆ ಗ್ರಾಮದಲ್ಲಿ  ಮಹಾಲಕ್ಷ್ಮಿ ದೇವಸ್ತಾನದ ಜಾತ್ರೆ ಗೆ ಹೋಗಿದ್ದು  ಮದ್ಯಾಹ್ನ 12.30 ಗಂಟೆಗೆ  ಸಮಯದಲ್ಲಿ ಜನಸಂದಣಿಯಲ್ಲಿ ಯಾರೋ ಕಳ್ಳರು  ಕೊರಳಿನಲ್ಲಿ ಇದ್ದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಚಿನ್ನದ ಸರದ ಬೆಲೆ 2,00,000/- ರೂ ಗಳಾಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಚಿನ್ನದ ಸರವನ್ನು ಕೊಡಿಸುವಂತೆ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ.

ಬಾಳೆಹೊನ್ನೂರು  ಪೊಲೀಸ್ ಠಾಣೆ.

ದಿನಾಂಕ: 19-12-2021 ರಂದು  ಬಾಳೆಹೊನ್ನೂರು ಠಾಣಾ ಸರಹದ್ದಿನ ಬಿದರೆ ಗ್ರಾಮದ ವಾಸಿ ಶ್ರೀ ದೇವೇಂದ್ರ ಬಿ.ಕೆ.  ಬಿನ್ ಕೃಷ್ಣೆಗೌಡ ರವರು ನೀಡಿದ ದೂರಿನಲ್ಲಿ  ದಿನಾಂಕ 14-12-2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದಿಯವರ ತಂದೆ ಕೃಷ್ಣೇಗೌಡ ರವರು ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ತಮ್ಮ ತಂದೆ ಕೃಷ್ಣೇಗೌಡ ಇವರಚಹರೆ ಕೋಲುಮುಖ , ಕಪ್ಪು ಬಣ್ಣ ಸಾದಾರಣ ಮೈ ಕಟ್ಟು 5.5. ಅಡಿ ಎತ್ತರವಿದ್ದು ಕನ್ನಡ ಮತ್ತು ತುಳು ಬಾಷೆ ಮಾತನಾಡುತ್ತಾರೆ.  ಕಪ್ಪು ಪ್ಯಾಂಟ್,  ಚೌಕಳಿ ಶರಟು, ಧರಿಸಿದ್ದು  ಇವರನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 20-12-2021 09:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080