ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ: 20/07/2021 ರಂದು ಬಾವಿಕೆರೆ ಕರಕುಚ್ಚಿಗೆ ಹೋಗುವ ರಸ್ತೆಯ ಪಕ್ಕದಲ್ಲಿ  ಯಾರೋ ಅಸಾಮಿಯು ಸಾರ್ವಜನಿಕರಿಗೆ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ   ದಾಳಿ ನಡೆಸಿದ್ದು ಬಾವಿಕೆರೆ ಕರಕುಚ್ಚಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ಆಸಾಮಿಯು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮೋಹನನಾಯ್ಕ ಬಿನ್ ಮಲ್ಲೇಶನಾಯ್ಕ, ಬಾವಿಕೆರೆ ವಾಶಿ ಎಂದು ತಿಳಿಸಿದ್ದು , ಆತನ ಬಳಿಯಿದ್ದ ಮದ್ಯವನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 41 ಮದ್ಯದ ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 1440/- ರೂ ಆಗಿದ್ದು, ಆರೋಪಿತರ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಮೇಘ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

 

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ

ಬೀರೂರು   ಪೊಲೀಸ್ ಠಾಣೆ.

ದಿನಾಂಕ: 20/07/2021 ರಂದು ಪಿರ್ಯಾದಿ ಲೋಕೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ನನ್ನ ಅಣ್ಣನಾದ ರಾಜಶೇಖರರವರು ಕಡೂರಿನ ಬಿ.ಇ.ಓ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಕರಾಗಿ ಕೆಲಸ ನಿರ್ವಹಿಸುತ್ತಿದ್ದು ಎಂದಿನಂತೆ ದಿನಾಂಕ 19/07/2021 ರಂದು ಬೆಳಿಗ್ಗೆ ತಮ್ಮ ಬಾಬ್ತು ಕೆಎ-18 ಇಎ- 8025 ಬೈಕಿನಲ್ಲಿ ಕಡೂರಿಗೆ ಕೆಲಸಕ್ಕೆ ಹೋಗಿ ಕೆಲಸ  ಮುಗಿಸಿ ವಾಪಾಸ್ ಬೇಗೂರಿಗೆ ಬರಲು ಕಾಮನಕೆರೆ ಹಿರೇನಲ್ಲೂರು ಮಾರ್ಗವಾಗಿ ಬಂದು ಹಿರೇನಲ್ಲೂರು ನಿಸರ್ಗ ಕಾನ್ವೆಂಟ್ ಬಳಿ ರಸ್ತೆಯಲ್ಲಿ ಸಂಜೆ 6-30 ರಿಂದ 7-00 ಗಂಟೆ ಸಮಯದಲ್ಲಿ ಬರುತ್ತಿರುವಾಗ ಯಾವುದೋ ವಾಹನದ ಚಾಲಕ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಕೆಎ-18 ಇಎ- 8025 ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ  ರಾಜಶೇಖರ ರವರಿಗೆ ಬಲಗಾಲು, ತಲೆಗೆ ಹಾಗೂ ಹಣೆಗೆ  ರಕ್ತಗಾಯವಾಗಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಅಪಘಾತ ಪಡಿಸಿದ ವಾಹನದ ಚಾಲಕನ ಮೇಲೆ ಕ್ರಮ  ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಮನುಷ್ಯ ಕಾಣೆ ಪ್ರಕರಣ.

ಮಲ್ಲಂದೂರು ಪೊಲೀಸ್ ಠಾಣೆ

 ದಿನಾಂಕ 21-07-2021 ರಂದು ಪಿರ್ಯಾದಿ ಅರುಣ ಬಿನ್ ಮುಳ್ಳಯ್ಯ, ಒಡ್ಡಿಹೊಂಬಳ ನಿಡಗೋಡು  ಗ್ರಾಮ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ತಂದೆಯವರಾದ ಮುಳ್ಳಯ್ಯ , 47 ವರ್ಷ ಇವರಿಗೆ ಮದ್ಯಪಾನ ಅಭ್ಯಾಸವಿದ್ದು, ಮೂರ್ಚೇ ರೋಗವು ಸಹ ಇರುತ್ತೆ.  ದಿನಾಂಕ 19-07-2021 ರಂದು ರಾತ್ರಿ 10-30 ಗಂಟೆಗೆ ಮನೆಯಿಂದ ಹೊರಗೆ  ಹೋಗಿದ್ದರೂ ಇಲ್ಲಿಯವರೆಗೂ ಮನೆಗೆ ವಾಪಾಸ್ ಬಂದಿರುವುದಿಲ್ಲ. ಸುತ್ತಮುತ್ತಲ ಗ್ರಾಮಗಳಲ್ಲಿ ಹಾಗೂ ಸಂಬಂಧಿಕರ , ನೆಂಟರಿಷ್ಟರ ಮನೆಗಳಲ್ಲಿ  ಹುಡುಕಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ತಂದೆಯನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಕಳ್ಳತನ ಪ್ರಕರಣ.

 ಬಣಕಲ್  ಪೊಲೀಸ್ ಠಾಣೆ.

ದಿನಾಂಕ 21-07-2021 ರಂದು ಪಿರ್ಯಾದಿ ಪ್ರದೀಪ್ , ದೊಡ್ಡನಂದಿ ಗ್ರಾಮವಾಸಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 20-07-2021 ರಂದು ನನ್ನ ಹೆಂಡತಿಯ ಅಕ್ಕನ ಮನೆಗೆ ಅವರ ಮಗನ ಹುಟ್ಟುಹಬ್ಬವಿದ್ದುದ್ದರಿಂದ ಮನೆಗೆ ಬೀಗ ಹಾಕಿಕೊಂಡು ಮನೆಯವರೆಲ್ಲಾ ಚಿಕ್ಕಮಗಳೂರಿಗೆ  ಹೋಗಿದ್ದೆವು . ರಾತ್ರಿ ಸುಮಾರು 10-00 ಗಂಟೆಗೆ  ವಾಪಾಸ್ ಮನೆಗೆ ಬಂದು ಬೀಗ ತೆರೆದು ಒಳಗಡೆ ಹೋದಾಗ ಯಾರೋ ಕಳ್ಳರು ಅಡುಗೆ ಮನೆಯ ಮೇಲ್ಬಾಗದ 2 ಹೆಂಚುಗಳನ್ನು ತೆರೆದು ಬೆಡ್ ರೂಂನಲ್ಲಿದ್ದ ಗಾರ್ಡೇಜ್ ಬೀರುವಿನ ಬೀಗ ತೆರೆದು ಗಾರ್ಡೇಜ್ ಬೀರುವಿನ ಒಳಭಾಗದಲ್ಲಿಟ್ಟಿದ್ದ  ಒಟ್ಟು 81 ಗ್ರಾಂ ತೂಕದ ಚಿನ್ನದ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾಗಿರುವ ಚಿನ್ನದ ವಡವೆಗಳ ಅಂದಾಜುಬೆಲೆ 3,88,800/- ರೂಗಳಾಗುತ್ತೆ, ಕಳ್ಳತನವಾಗಿರುವ  ಚಿನ್ನದ ವಡವೆಗಳನ್ನು ಪ್ತತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಬಣಕಲ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 21-07-2021 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080