ಅಭಿಪ್ರಾಯ / ಸಲಹೆಗಳು

ಕಳ್ಳತನ  ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ: 21/08/2021 ರಂದು ಪಿರ್ಯಾದಿ ಸಂದೇಶ ಬಿನ್ ಚಂದ್ರೇಗೌಡ ಉಜ್ಜನಿ ವಾಸಿ  ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 20/08/2021 ರಂದು ಉಜ್ಜನಿ ಗ್ರಾಮದ ವಾಸಿ ಕಾಳಯ್ಯ ಎಂಬುವರು ಮಾರಮ್ಮನ ಗುಡಿಯ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಲು ಡಬ್ಬಿಯನ್ನು ತೆಗೆದುಕೊಂಡು ಹೋಗಿದ್ದು ಗ್ರಾಮಸ್ಥರು ಸೇರಿ ಆರೋಪಿಯನ್ನು  ಹಿಡಿದುಕೊಂಡು, ಕಳವು ಮಾಡಲು ಪ್ರಯತ್ನಿಸಿದ ಕಾಳಯ್ಯನ ವಿರುದ್ದ ಕ್ರಮ ಜರೂಗಿಸುವಂತೆ ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ 21-08-2021 ರಂದು ಪಿರ್ಯಾದಿ ಹರೀಶ ಡಿ.ಬಿ. ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಹೆಂಡತಿ ದೀಪಿಕಾಳೊಂದಿಗೆ ಅಡಿಗೆ ಮಾಡಿಲ್ಲದ್ದ ವಿಚಾರದಲ್ಲಿ ಜಗಳ ಅಡಿದ್ದು , ದಿನಾಂಕ 20/08/2021 ರಂದು ಪಿರ್ಯಾದಿ ಬೆಳಿಗ್ಗೆ ಸಂತೆಗೆ ಹೋಗಿದ್ದು ಸಂತೆಯಿಂದ ವಾಪಾಸ್ಸು ಬಂದು ನೋಡಲಾಗಿ ಹೆಂಡತಿ ಮನೆಯಲ್ಲಿದ್ದು ನಂತರ ಪಿರ್ಯಾದಿ ಅಡಿಕೆ ಕೆಲಸಕ್ಕೆ ಹೋಗಿ 9-15 ಗಂಟೆಗೆ ಬಂದಾಗ ದೀಪಿಕಾ ಮನೆಗೆ ಬೀಗ ಹಾಕಿಕೊಂಡು ಎಲ್ಲಿಗೋ ಹೋಗಿದ್ದು , ಆವಳನ್ನು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಹೆಂಡತಿ ದೀಪಿಕಾಳನ್ನು ಪತ್ತೆ ಮಾಡಿಕೊಂಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 21-08-2021 ರಂದು ಪಿರ್ಯಾದಿ ಧರ್ಮ ಮೂಡಿಗೆರೆ ಬಿಜ್ಜುವಳ್ಳಿ ಜೀವನ ಜ್ಯೋತಿ ಎಸ್ಟೇಟ್ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳಾದ ಸುಜಾತ ಎಂ.ಡಿ. ಇವಳು ಗಂಡನನ್ನು ಬಿಟ್ಟು ಬಂದು ಪಿರ್ಯಾದಿಯೊಂದಿಗೆ ವಾಸವಿದ್ದು, ದಿನಾಂಕ 13.08.2021 ರಂದು ಬೆಳಿಗ್ಗೆ ಮೂಡಿಗೆರೆ ಸಂತೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಸಂಜೆಯದರೂ ವಾಪಸ್ಸು  ಬಾರದೇ ಇದ್ದು  ಕಾಣೇಯಾದ ಸುಜಾತ ವಿವರ; ಸುಜಾತ ಎಂ.ಡಿ., ಬಿನ್ ಧರ್ಮ ವಯಸ್ಸು-24 ವರ್ಷ, ಚಹರೆ- ಎಣ್ಣೆಗೆಂಪು, ಎತ್ತರ -5 ಅಡಿ, ಗುರುತು -ಎಡಭಾಗದ ಕೆನ್ನೆಯಲ್ಲಿ ಗಾಯದ ಗುರುತು ಇರುತ್ತೆ,ಮಾತಾನಾಡುವ ಬಾಷೆ- ಕನ್ನಡ, ಹಿಂದಿ, ಕಾಣೆಯಾದಾಗ ಧರಿಸಿದ ಬಟ್ಟೆ- ಹಳದಿ ಮತ್ತು ಹಸಿರು ಬಣ್ಣದ ಸೀರೆ ಎಂದು , ಕಾಣೆಯಾಗಿರುವ ಮಗಳನ್ನು  ಈವರೆಗೂ ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು, ಪತ್ತೆ ಮಾಡಿಕೊಂಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ.

ದಿನಾಂಕ 21/08/2021 ರಂದು ಪಿರ್ಯಾದಿ ನಾಗರಾಜ್ ಬಿನ್ ಗೋವಿಂದಪ್ಪ ಬಂಜೆನಹಳ್ಳಿ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳಾದ ಚೈತ್ರಾ ಇವಳು ದಿನಾಂಕ:19/08/2021 ರಂದು ರಾತ್ರಿ ಮನೆಯಲ್ಲಿ ಪ್ರತಿ ದಿನದಂತೆ ಎಲ್ಲರೂ ಊಟ ಮಾಡಿಕೊಂಡು ಮಲಗಿರುವಾಗ ನನ್ನ ಮಗಳು ಚೈತ್ರಾಳು ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಸುಮಾರು ಸಮಯದವರೆಗೂ ಮನೆಗೆ ಬಾರದೇ ಇದ್ದು  ಈವರೆಗೂ ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು, ಕಾಣೇಯಾದ ಚೈತ್ರಾ ಬಿ.ಎನ್. ವಯಸ್ಸು-21 ವರ್ಷ, ಎತ್ತರ -5.2 ಅಡಿ, ಮಾತಾನಾಡುವ ಬಾಷೆ- ಕನ್ನಡ, ಕಾಣೆಯಾದಾಗ ಧರಿಸಿದ ಬಟ್ಟೆ- ಹಳದಿ ಚೂಡಿದಾರ ಧರಿಸಿರುತ್ತಾಳೆ ಎಂದು, ಕಾಣೆಯಾಗಿರುವ ಮಗಳನ್ನು  ಪತ್ತೆ ಮಾಡಿಕೊಂಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಇತ್ತೀಚಿನ ನವೀಕರಣ​ : 21-08-2021 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080