ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ .

ತರೀಕೆರೆ  ಪೊಲೀಸ್ ಠಾಣೆ.

 ದಿನಾಂಕ 21-01-2022 ರಂದು ಪಿರ್ಯಾಧಿ ನಾಗರಾಜ ಬಿನ್ ಅಣ್ಣಾಮಲೈ  ರವರು ನೀಡಿದ ದೂರಿನಲ್ಲಿ ದಿನಾಂಕ:19-01-2022 ರಂದು ಪಿರ್ಯಾಧಿ ಮಗಳು ನೇತ್ರಾವತಿ ಮನೆಯಿಂದ ಭದ್ರಾವತಿಗೆ ಅಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಜೊತೆಯಲ್ಲಿ ಕರೆದುಕೊಂಡ ಹೋದ 5 ವರ್ಷದ ಮಗಳು  ಶ್ರೇಯಾಳನ್ನು ಬೆಂಗಳೂರಿನ ರೈಲ್ವೇ ಸ್ಟೇಷನ್ ನಲ್ಲಿ ಬಿಟ್ಟು ಹೋಗಿರುತ್ತಾಳೆ. ನೇತ್ರಾವತಿ ಕಾಣೆಯಾಗಿದ್ದು  ನೇತ್ರಾವತಿಯ ಚಹರೆ; 27 ವರ್ಷ, ಗಂಡನ ಹೆಸರು: ಹೇಮಂತ್,  ಎತ್ತರ 5 ಅಡಿ 2 ಇಂಚು, ಕಪ್ಪು ಬಣ್ಣದ ಚೂಡಿದಾರ ಮತ್ತು ಬಿಳಿ ಬಣ್ಣದ ಪ್ಯಾಂಟು ಧರಿಸಿರುತ್ತಾರೆ. ಕಾಣೆಯಾಗಿರುವ ಮಗಳು ನೇತ್ರಾವತಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಾಳೂರು ಪೊಲೀಸ್ ಠಾಣೆ.

ದಿನಾಂಕ:20-01-2022 ರಂದು ಬಾಳೂರು ಠಾಣಾ ಸರಹದ್ದಿನ ಬಾಳೂರು ಗ್ರಾಮದಲ್ಲಿ ವಿನ್ಸೆಂಟ್ ಡಿಸೋಜಾ ಮನೆಯ ಹಿಂಬಾಗದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 38 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1334/- ರೂ ಅಗಿದ್ದು, ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಶ್ರೀಮತಿ ರೇಣುಕಮ್ಮ ಡಿ.ವಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ  ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:20-01-2022 ರಂದು ಪಿರ್ಯಾದಿ  ವೆಂಕಟೇಶ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ಬಾಪೂಜಿ ಕಾಲೋನಿಯಲ್ಲಿ ವಾಸವಿದ್ದು ದಿನಾಂಕ:15-01-2022 ರಂದು ರಾತ್ರಿ  ತನ್ನ ಬಾಬ್ತು ಕೆಎ-66-ಹೆಚ್-8158 ರ ಬಜಾಜ್ ಪಲ್ಸರ್ ಎನ್.ಎಸ್. 200 ಸಿ.ಸಿ. ಬೈಕ್ ನ್ನು ತಮ್ಮ ವಾಸದ ಮನೆ ಮುಂಭಾಗದಲ್ಲಿ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿದ್ದು ನಂತರ ದಿನಾಂಕ;16-01-2022 ರಂದು ಬೆಳಿಗ್ಗೆ ನೋಡಲಾಗಿ ಸದರಿ ಬೈಕ್ ನಿಲ್ಲಿಸಿದ ಜಾಗದ ಇಲ್ಲದೆ ಇದ್ದು ಯಾರೋ ತೆಗೆದುಕೊಂಡು ಹೋಗಿರಬಹುದು ಎಂದು ತಿಳಿದು ಈ ವರೆಗೂ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ತನ್ನ ಬಾಬ್ತು ಬೈಕ್ ನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು,  ಕಳುವಾಗಿರುವ ತನ್ನ ಬೈಕಿನ ಬೆಲೆ ಸುಮಾರು 80,000/- ರೂ ಗಳಾಗಿದ್ದು, ಬೈಕ್ ನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ .

ಲಿಂಗದಹಳ್ಳಿ ಪೊಲೀಸ್ ಠಾಣೆ.

 ದಿನಾಂಕ 20-01-2022 ರಂದು ಪಿರ್ಯಾಧಿ ಗೀರೀಶ್ ಟಿ.ಎನ್. ಬಿನ್ ನಾಗರಾಜಪ್ಪ ರವರು ನೀಡಿದ ದೂರಿನಲ್ಲಿ ದಿನಾಂಕ:20-01-2022 ರಂದು ಪಿರ್ಯಾದಿ ದೊಡ್ಡಪ್ಪನ ಮಗ ಶಿವಕುಮಾರ್ ಕರ್ನಾಟಕ ತನ್ನ ಬಾಬ್ತು  ಕೆಎ-18-ಎಲ್-7969ರ ಸ್ಲೆಂಡರ್ ಬೈಕಿನಲ್ಲಿ ಕೆಲಸದ ನಿಮಿತ್ತಾ ತರೀಕೆರೆಯಿಂದ ಮಲ್ಲಿಗೇನಹಳ್ಳಿಗೆ ಹೋಗಿ ವಾಪಾಸ್ ತರೀಕೆರೆಗೆ ಬರುವಾಗ ಶಿವಕುಮಾರ್ ಕರ್ನಾಟಕ ಲಿಂಗದಹಳ್ಳಿ-ತರೀಕೆರೆ ಟಾರು ರಸ್ತೆಯಲ್ಲಿ ನಂದಿಗೇಟ್ ಬಳಿ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಎದುರುಗಡೆ ಹೋಗುತ್ತಿದ್ದ ಎತ್ತಿನಗಾಡಿಗೆ ಹಿಂಭಾಗದಿಂದ ಡಿಕ್ಕಿ ಹೊಡೆಸಿದ್ದು, ಇಬ್ಬರಿಗೂ ಪೆಟ್ಟಾಗಿದ್ದು, ಶಿವಕುಮಾರ್ ಕರ್ನಾಟಕ ರಿಗೆ ತೀವ್ರ ಪೆಟ್ಟಾಗಿದ್ದು  ತರೀಕೆರೆ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ತೋರಿಸಿದ್ದು, ವೈದ್ಯರು ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ  ತಿಳಿಸಿದ್ದು, ಬೈಕ್ ಚಾಲನೆ ಮಾಡಿದ ಶಿವಕುಮಾರ್ ಕರ್ನಾಟಕ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೆರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 21-01-2022 08:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080