ಅಭಿಪ್ರಾಯ / ಸಲಹೆಗಳು

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ಬಾಳೆಹೊನ್ನೂರು  ಪೊಲೀಸ್ ಠಾಣೆ .

ದಿನಾಂಕ: 20/02/2022 ಸಂಜೆ 05-00 ಗಂಟೆ  ಸಮಯದಲ್ಲಿ ಹ್ಯಾರಂಬಿ ಗ್ರಾಮದ ಕತಗಾರುವಿನ ಸತೀಶ್ ರವರ ಟೈಲರ್ ಅಂಗಡಿಯ ಮುಂಭಾಗ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಎರಡು ಪ್ಲಾಸ್ಟಿಕ್ ಚೀಲ ಹಾಗೂ ಎರಡು ಏರ್ ಬ್ಯಾಗ್ ಗಳಲ್ಲಿ ದನದ ಮಾಂಸವನ್ನು ತುಂಬಿಕೊಂಡು ಹೋಗುತ್ತಿದ್ದ ಮಹಮದ್ ಜಲೀಲ್ ಶೇಕ್ ಬಿನ್ ಲೇಟ್ ಮಹಮದ್ ಇಬ್ರಾಹಿಂ ಶೇಖ್, ಬಾಸಾಪುರ ಎಸ್ಟೇಟ್ ನಲ್ಲಿ ಕೆಲಸ ಎಂದು ನುಡಿದಿದ್ದು, ಇನ್ನೊಬ್ಬ ಆಸಾಮಿಯು ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಬಿಟ್ಟು ಓಡಿಹೋಗಿದ್ದು ಆತನ ಹೆಸರು ಸಿರಾಜ್ಆಗಿದ್ದು, ಪ್ಲಾಸ್ಟಿಕ್ಚೀಲ ಹಾಗೂ ಬ್ಯಾಗ್ಗಳಿದ್ದ ಸುಮಾರು 60 ಕೆ.ಜಿ. ಮಾಂಸವನ್ನು ಅಮಾನತ್ತುಪಡಿಸಿಕೊಂಡಿದ್ದು, ದನದ ಮಾಂಸದ ಅಂದಾಜು ಬೆಲೆ 16,000/- ರೂಗಳಾಗಿರುತ್ತೆ. ಹೆಚ್ಚಿನ ಬೆಲೆಗೆ ದನದಮಾಂಸವನ್ನು ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದ ಆರೋಪಿಯ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ನಿತ್ಯಾನಂದಗೌಡ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ರಸ್ತೆ ಅಪಘಾತ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 20-02-2022 ರಂದು ಇಂದ್ರಮ್ಮ ಕೋಂ ಜಯಪ್ಪ, ನಂದಿಪುರ ಗ್ರಾಮವಾಸಿರವರು ನೀಡಿದ ದೂರೇನೆಂದರೆ ದಿನಾಂಕ 18-02-2022 ರಂದು ರಾತ್ರಿ 10-30 ಗಂಟೆ ಸುಮಾರಿನಲ್ಲಿ ಅಜ್ಜಂಪುರದ ಅಂತರಘಟ್ಟೆ ನೆರಿಗೆ ಕಲ್ಲಿನ ಬಳಿ ನನ್ನ ಮಗ ಸಚಿನ್ ಹಾಗೂ ಅಳಿಯ ಹರೀಶ್ ರವರು ತಮ್ಮ ಬಾಬ್ತು  ಕೆಎ-18 ಇಡಿ-1258 ಬೈಕನ್ನು ನಿಲ್ಲಿಸಿಕೊಂಡು ರಸ್ತೆಯ ಎಡಬದಿಯಲ್ಲಿ ನಿಂತಿರುವಾಗ ಹೊಸದುರ್ಗ ಕಡೆಯಿಂದ ಅಜ್ಜಂಪುರದ ಕಡೆಗೆ ಬಂದಂತಹ ಕೆಎ-04 ಎಂ.ಎಲ್. 1957 ಕಾರಿನ ಚಾಲಕ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ನಾವು ನಿಲ್ಲಿಸಿಕೊಂಡು ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿಯ ಮಗ ಸಚಿನ್  ಹಾಗೂ ಅಳಿಯ ಹರೀಶ್ ರವರ ಬಲಗಾಲು, ಕೈಗಳಿಗೆಪೆಟ್ಟು ಬಿದ್ದು ರಕ್ತ ಗಾಐವಾಗಿರುತ್ತೆ, ಅಪಘಾತಪಡಿಸಿದ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರನ್ನು ಸ್ವೀಕರಿಸಿ ಅಜ್ಜಂಪುರ  ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 21-02-2022 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080