ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಂಚಾರ ಪೊಲೀಸ್ ಠಾಣೆ.

ದಿನಾಂಕ:20/03/2022 ರಂದು ಪಿರ್ಯಾದಿ ನರಸಮ್ಮ ಬಿನ್ ಗೋಪಾಲಶೆಟ್ಟಿ ಕರ್ತಿಕೆರೆ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ: 20/03/2022 ರಂದು ಪಿರ್ಯಾದಿ ಅಣ್ಣ ಲೋಕೇಶ್ ರವರು ಕೆಲಸದ ನಿಮಿತ್ತಾ ಅವರ ಬೈಕ್ ನಂಬರ್ ಕೆಎ-18- ಇಹೆಚ್-3159 ರ ಬೈಕಿನಲ್ಲಿ ಚಿಕ್ಕಮಗಳೂರಿಗೆ ಹೋಗಲೆಂದು ಕರ್ತಿಕೆರೆಯಿಂದ ಹೊರಟು ಬೇಲೂರು ರಸ್ತೆಯ ಅಂಜನೇಯ ಪೆಟ್ರೋಲ್ ಬಂಕ್ ಮುಂಭಾಗದ ಟಾರು ರಸ್ತೆಯಲ್ಲಿ  ಹೋಗುತ್ತಿರುವಾಗ ಆಂಜನೇಯ ಪೆಟೋಲ್ ಬಂಕ್ ಕಡೆಯಿಂದ ಕೆಎ-18-ಬಿ-5025 ರ ಟಿಪ್ಪರ್  ವಾಹನದ ಚಾಲಕ ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲೋಕೇಶ್ ಚಾಲಾಯಿಸುತ್ತಿದ್ದ  ಬೈಕಿಗೆ ಡಿಕ್ಕಿ ಪರಿಣಾಮ ಲೋಕೇಶನಿಗೆ ಪೆಟ್ಟಾಗಿದ್ದು, ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು,  ಅಪಘಾತ ಉಂಟು ಮಾಡಿದ ಕೆಎ-18-ಬಿ-5025 ಟಿಪ್ಪರ್ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ:20/03/2022 ರಂದು ಪಿರ್ಯಾದಿ  ಅಸೀಪ್ ಬಿನ್ ಅಜೀಜ್  ಹಾಲೇನಹಳ್ಳಿ  ಗ್ರಾಮ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ:20/03/2022 ರಂದು ಪಿರ್ಯಾದಿ ಮೊದಲನೇ ಹೆಂಡತಿ ಶಾಹಿನ್ ಕೌಸರ್ 25 ವರ್ಷ, ಇವರು ಹಾಲೇನಹಲ್ಳಿ ಮನೆಯಿಂದ ಬೆಳಿಗ್ಗೆ 5.30 ಸಮಯದಲ್ಲಿ ಯಾರಿಗೂ ಹೇಳದೆ ಕೇಳದೆ ಎರಡು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಕಾಣೆಯಾಗಿರುವ ತನ್ನ ಹೆಂಡತಿ ಶ್ರೀಮತಿ ಶಾಹಿನಕೌಸರ್ , 25 ವರ್ಷ, 4 ಅಡಿ ಎತ್ತರ, ಕೋಲುಮುಖ, ಸಾದಾರಣ ಮೈ ಕಟ್ಟು , ಗೋದಿ ಮೈಬಣ್ಣ, ಉರ್ದು ಮತ್ತು ಕನ್ನಡ ಬಾಷೆ ಮಾತನಾಡುತ್ತಾರೆ. ಚೂಡಿದಾರ ಮತ್ತು ಕಪ್ಪುಬಣ್ಣದ ಬುರ್ಖಾ ಧರಿಸಿದ್ದು, ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ:20-03-2022 ರಂದು ಕಡೂರು ಠಾಣಾ ಸರಹದ್ದಿನ  ಕಡೂರು ಪಟ್ಟಣದ ಹುಳುಕಿನಕಲ್ಲು ಕ್ರಾಸ್ ಸಮೀಪವಿರುವ ಕಡೂರು ಟೌನ್ ದೊಡ್ಡಪೇಟೆ ವಾಸಿ ಸುರೇಶ ರವರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ, ಅರೋಪಿತರಾದ1] ಕೆ.ಜಿ ಸುರೇಶ ಬಿನ್ ಲೇಟ್ ಗೋವಿಂದಪ್ಪ, 2] ರಮೇಶ ಬಿನ್ ಬೈರಪ್ಪ 3] ರತ್ನಕಾರ ಬಿನ್ ಕೊರಗಪ್ಪ   4] ರಮೇಶ ಕೆ.ಎಂ ಬಿನ್ ಮೂಡ್ಲಪ್ಪ, ರವರನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿತರಾದ 1] ಕೆ.ಜಿ.ತಿಮ್ಮಯ್ಯ ಬಿನ್ ಗೋವಿಂದಪ್ಪ 2] ನಾಗೇಂದ್ರ ಬಿನ್ ಕೃಷ್ಣಪ್ಪ 3] ವೆಂಕಟೇಶ ಬಿನ್ ಗಿಡ್ಡಯ್ಯ  4] ಹೊನ್ನಪ್ಪ ಬಿನ್ ಹನುಮಪ್ಪ ಇವರು ಓಡಿ ಹೋಗಿದ್ದು,  ಆರೋಫಿತರು ಜೂಜಾಡಲು ಉಪಯೋಗಿಸಿದ ನಗದು ಹಣ 18700/- ರೂ, 52 ಇಸ್ಪೀಟ್ ಎಲೆಗಳು, ಬಿಳಿ ಬಣ್ಣದ ಒಂದು ಟಾರ್ಪಲ್ ಅನ್ನು ಅಮಾನತ್ತುಪಡಿಸಿಕೊಂಡು ಬಂದು  ಆರೋಪಿತರ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆ ಕಡೂರು ಪಿ.ಎಸ್.ಐ. ರಮ್ಯ ಎನ್.ಕೆ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 21-03-2022 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080